ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಯಿ, ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ ಗುರುತು ಪತ್ತೆ

|
Google Oneindia Kannada News

ದಕ್ಷಿಣ ಕನ್ನಡ, ಸೆಪ್ಟೆಂಬರ್ 29 : ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ನದಿಗೆ ಹಾರಿದ ಕುಟುಂಬದ ಗುರುತು ಪತ್ತೆಯಾಗಿದೆ.

ಮೃತಪಟ್ಟವರನ್ನು ಮೈಸೂರಿನ ಪಿ. ಎಸ್. ನಗರದ ನಿವಾಸಿ ಕವಿತಾ ಮಂದಣ್ಣ ಎಂದು ಗುರುತಿಸಲಾಗಿದೆ. ಮಕ್ಕಳಾದ ಕೌಶಿಕ್ ಮತ್ತು ಕಲ್ಪತಾ ಜೊತೆಗೆ ಮಹಿಳೆ ನೇತ್ರಾವತಿ ನದಿಗೆ ಹಾರಿದ್ದಾರೆ. ಹಾರುವ ಮುನ್ನ ಮುದ್ದಿನ ನಾಯಿಯನ್ನು ತಳ್ಳಿ ಬಳಿಕ ಮೂವರು ಹಾರಿದ್ದಾರೆ.

ಮೂವರ ಆತ್ಮಹತ್ಯೆ; ಕಾರಿನಲ್ಲಿ ಬಂದು ನದಿಗೆ ಹಾರಿದರುಮೂವರ ಆತ್ಮಹತ್ಯೆ; ಕಾರಿನಲ್ಲಿ ಬಂದು ನದಿಗೆ ಹಾರಿದರು

ಕೆಎ 09, ಎಂಎ 489 ಬಂಟ್ವಾಳದ ಸೇತುವೆ ಬಳಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರು ನಿಲ್ಲಿಸಿ ಬಳಿಕ ನದಿಗೆ ಹಾರಿದ್ದಾರೆ. ಮಹಿಳೆಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

ಉದ್ಯೋಗ ಕಳೆದುಕೊಂಡು ಒತ್ತಡಲ್ಲಿದ್ದ ಟೆಕಿ ಕುಟುಂಬದ ನಾಲ್ವರು ಸಾವುಉದ್ಯೋಗ ಕಳೆದುಕೊಂಡು ಒತ್ತಡಲ್ಲಿದ್ದ ಟೆಕಿ ಕುಟುಂಬದ ನಾಲ್ವರು ಸಾವು

3 Members Of Mysuru Family Commits Suicide

ಕವಿತಾ ಮಂದಣ್ಣ ಕೊಡಗು ಜಿಲ್ಲೆಯ ವಿರಾಜಪೇಟೆ ಕಡಂಗಳ ಬಳ್ಳಚಂಡ ಕುಟುಂಬದವರು. ಕವಿತಾ ಮಂದಣ್ಣ ಪತಿ ಕಿಶನ್ ಕೃಷಿಕರಾಗಿದ್ದರು. ನಾಲ್ಕು ದಿನದ ಹಿಂದೆ ನಾಪತ್ತೆಯಾದ ಅವರ ಶವ ಶನಿವಾರ ಮಧ್ಯಾಹ್ನ ಪತ್ತೆಯಾಗಿತ್ತು.

ನೇಣಿಗೆ ಶರಣಾದ ಆಂಧ್ರ ಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್ನೇಣಿಗೆ ಶರಣಾದ ಆಂಧ್ರ ಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್

ಪತಿಯ ಸಾವಿನ ಬಳಿಕ ನೊಂದ ಕುಟುಂಬ ಪತ್ರವನ್ನು ಬರೆದಿಟ್ಟು ಮಂಗಳೂರು ಕಡೆ ಹೊರಟಿದ್ದರು. ನೇತ್ರಾವತಿ ನದಿ ಬಳಿ ಬಂದು ಮಕ್ಕಳೊಂದಿಗೆ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ಶವಕ್ಕಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ.

ಬಂಟ್ವಾಳ ಟೌನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

English summary
3 members of family from Mysuru committed suicide in Bantwal, Dakshina Kannada. All jumped into Netravati river after they park car on bridge. Bantwal police registered the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X