ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ 25 ಜನರಿಗೆ ಮಲೇರಿಯಾ ಪ್ರಕರಣ

|
Google Oneindia Kannada News

ಮಂಗಳೂರು, ಜೂನ್ 29: ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಮಲೇರಿಯಾ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಇಲ್ಲಿನ ಜನರನ್ನು ಆತಂಕಕ್ಕೀಡುಮಾಡಿದೆ. ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ಕಾರ್ನಾಡು ಸದಾಶಿವ ನಗರ, ಬಿಜಾಪುರ ಕಾಲನಿ ಹಾಗೂ ಆಶ್ರಯ ಕಾಲನಿಯಲ್ಲಿ ಕಳೆದ ಎರಡು ತಿಂಗಳಿನಿಂದ ಮಲೇರಿಯಾ ಜ್ವರ ಜನರನ್ನು ಕಾಡುತ್ತಿದೆ. ಕಳೆದೆರಡು ತಿಂಗಳಲ್ಲಿ 25 ಜನರಿಗೆ ಮಲೇರಿಯಾ ಇರುವುದು ದೃಢಪಟ್ಟಿದೆ.

 ಮಂಗಳೂರಿನಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ, ಜನರಲ್ಲಿ ಆತಂಕ ಮಂಗಳೂರಿನಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ, ಜನರಲ್ಲಿ ಆತಂಕ

ಮಲೇರಿಯಾ ಜ್ವರ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ 10 ಜನರ ತಂಡವು ಮಲೇರಿಯಾ ಸರ್ವೇ ನಡೆಸುತ್ತಿದೆ. ಮನೆಗಳ ಒಳಗೆ, ಪರಿಸರದಲ್ಲಿ ಫಾಗಿಂಗ್ ಮತ್ತು ಚರಂಡಿಗಳಿಗೆ ಔಷಧ ಸಿಂಪರಣೆ ಮಾಡುತ್ತಿದೆ. ಸ್ವಚ್ಛತೆಯ ಕಾಮಗಾರಿಯನ್ನೂ ನಡೆಸಲಾಗುತ್ತಿದೆ. ಪ್ರಸ್ತುತ ಮಲೇರಿಯಾ ಪ್ರಕರಣ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

25 Malaria cases reported in Mangaluru

ಆಸ್ಪತ್ರೆಯಲ್ಲಿ ಈವರೆಗೆ ಕಳೆದೆರಡು ತಿಂಗಳ ಅವಧಿಯಲ್ಲಿ ದಾಖಲಾಗಿರುವ 25 ಮಂದಿ ಮಲೇರಿಯಾ ಪೀಡಿತರಲ್ಲಿ ಮೂವರು ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 22 ಮಂದಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
Twenty five Malaria cases reported in Mulki area of Mangaluru. In 43 cases, 25 cases identified as Malaria positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X