ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಬಂದೇ ಬಿಟ್ಟಿತು ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ

|
Google Oneindia Kannada News

ಮಂಗಳೂರು, ಡಿಸೆಂಬರ್ 15 : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪ್ರತಿವರ್ಷ ನಡೆಯುವ ಪ್ರಸಿದ್ಧ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ಬರುವ ಜನವರಿ 12ರಿಂದ ಜ.14ರವರೆಗೆ ನಡೆಯಲಿದೆ.

ಜ.13 ರಿಂದ ಮೂಡುಬಿದಿರೆಯಲ್ಲಿ 23ನೇ ಆಳ್ವಾಸ್ ವಿರಾಸತ್ ಸಂಭ್ರಮಜ.13 ರಿಂದ ಮೂಡುಬಿದಿರೆಯಲ್ಲಿ 23ನೇ ಆಳ್ವಾಸ್ ವಿರಾಸತ್ ಸಂಭ್ರಮ

24ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ಮೂಡುಬಿದಿರೆಯ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ವೇದಿಕೆಯಲ್ಲಿ ನಡೆಯಲಿದೆ. ವಿರಾಸತ್ ಕಾರ್ಯಕ್ರಮಗಳು ದಿನವೊಂದಕ್ಕೆ ಎರಡು ಅವಧಿಗಳದ್ದಾಗಿದ್ದು ಪೂರ್ವಾರ್ಧದಲ್ಲಿ ಸಂಗೀತ ಹಾಗು ಉತ್ತಾರಾರ್ಧದಲ್ಲಿ ನೃತ್ಯ ಕಾರ್ಯಕ್ರಮಗಳು ಸಂಸ್ಕೃತಿ ಪ್ರಿಯರ ಮನಸ್ಸು ಉಲ್ಲಾಸಗೊಳಿಸಲಿವೆ.

24th cultural extravaganza of Alva’s Virasat 2018 will be held in Moodbidri from jan 12 to 14

ಜನವರಿ 12ರಂದು ಒಂದು ದಿನ ಮಾತ್ರ ಮುಸ್ಸಂಜೆ 5.15ರಿಂದ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡು 5.30ರಿಂದ 6.30ರವರೆಗೆ 60 ನಿಮಿಷಗಳ ಉದ್ಘಾಟನೆಯ ಸಭಾ ಕಾರ್ಯಕ್ರಮವಿರುತ್ತದೆ.

ವಿರಾಸತ್ ಗಾಗಿ 150 ಅಡಿ ಉದ್ದದ 60 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಾಣವಾಗಲಿದ್ದು 40 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕುಳಿತು ನೋಡಲು ಅವಕಾಶವಿರುವ ವಿಶಾಲ ಪ್ರದೇಶದಲ್ಲಿ ವಿರಾಸತ್ ನಡೆಯಲಿದೆ.

English summary
The 24rd edition of the annual cultural extravaganza of Alva’s Education Foundation Alva’s Virasat will be held at Vanajakshi K Sripathy Bhat stage in Moodbidri from January 12 to 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X