• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನ ಅದಾನಿ ವಿಮಾನ ನಿಲ್ದಾಣದಲ್ಲಿ ಅಕ್ರಮದ್ದೇ ಪಾರುಪತ್ಯ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಏಪ್ರಿಲ್ 20: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಅಕ್ರಮ ಚಿನ್ನ ಪ್ರಕರಣಗಳ ಸಂಖ್ಯೆ ಕಳೆದ ಮೂರು ತಿಂಗಳಿನಿಂದ ಧಿಡೀರ್ ಏರಿಕೆ ಕಂಡಿದೆ.

ಕೊರೊನಾ ಲಾಕ್ ಡೌನ್ ತೆರವಾದ ಬಳಿಕ ವಿಮಾನಯಾನ ಆರಂಭವಾದ ನಂತರ ಈ ಹಿಂದೆ ಎಂದೂ ಆಗದಷ್ಟು ಅಕ್ರಮ‌ ಚಿನ್ನ ಸಾಗಾಟ ಪ್ರಕರಣಗಳು ನಡೆಯುತ್ತಿದೆ.

ವಿಮಾನ ನಿಲ್ದಾಣ ಹೆಸರು ಬದಲಾಯಿಸದಿದ್ದರೆ ಉಗ್ರ ಹೋರಾಟ: ಐವಾನ್ ಡಿಸೋಜಾ

2021 ಜನವರಿಂದ ಎಪ್ರಿಲ್‌19 ರವರೆಗಿನ ಲೆಕ್ಕಾಚಾರದ ಪ್ರಕಾರ ಕೇವಲ ಮೂರೂವರೆ ತಿಂಗಳಿನಲ್ಲಿ 21 ಕೆಜಿಗೂ ಅಧಿಕ ಚಿನ್ನವನ್ನು ಅಕ್ರಮ ಸಾಗಾಟ ಮಾಡಲು ಪ್ರಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದರ ಒಟ್ಟು ಮೌಲ್ಯ ಹತ್ತು ಕೋಟಿಗೂ ಅಧಿಕವಾಗಿದೆ.

ಜನವರಿಯಲ್ಲಿ ಒಟ್ಟು 8 ಅಕ್ರಮ‌ ಚಿನ್ನ ಸಾಗಾಟ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದು, 5.92 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಇದರ ಒಟ್ಟು ಮೌಲ್ಯ 3 ಕೋಟಿ ರೂಪಾಯಿ ಆಗಿತ್ತು. ಇನ್ನು ಫೆಬ್ರವರಿ ತಿಂಗಳಿನಲ್ಲಿ ಚಿನ್ನ ಸಾಗಾಟ ಪ್ರಕರಣದಲ್ಲಿ ಏರಿಕೆ ಕಂಡಿದ್ದು, ಕೇವಲ‌ 29 ದಿನಗಳಲ್ಲಿ 15 ಚಿನ್ನ ಸಾಗಾಟ ಪ್ರಕರಣಗಳು ಕಂಡುಬಂದಿದೆ.

15 ಪ್ರಕರಣಗಳಲ್ಲಿ 4.94 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 4.39 ಕೋಟಿ ರೂಪಾಯಿ ಆಗಿದೆ. ಮಾರ್ಚ್ ತಿಂಗಳಿನಲ್ಲೂ 12 ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, 3.2 ಕೋಟಿ ರೂಪಾಯಿ ಮೌಲ್ಯದ 6.94 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ ತಿಂಗಳ 20 ದಿನದಲ್ಲಿ 5 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 2.15 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ದಂಧೆಯ ಹಿಂದೆ ಸ್ಮಗ್ಲಿಂಗ್ ಮಾಫಿಯಾ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ವಿದೇಶದಲ್ಲಿರುವ ಸ್ಮಗ್ಲರ್ ಗಳು ಭಾರತಕ್ಕೆ ಬರುವವರನ್ನು ಬಳಸಿಕೊಂಡು ಚಿನ್ನ ಸಾಗಾಟ ಮಾಡುವ ಸಾಧ್ಯತೆಗಳಿವೆ.

ಹೆಚ್ಚಿನವರು ಕಮೀಷನ್ ಆಸೆಗೆ ಚಿನ್ನ ಸಾಗಾಟ ಮಾಡಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದ್ದು, ಅಕ್ರಮ‌ ಚಿನ್ನ ಸಾಗಾಟ ಮಾಡುವವರ ಪೈಕಿ ಕೇರಳ, ಭಟ್ಕಳ ಮತ್ತು ಉತ್ತರ ಕನ್ನಡ ಮೂಲದವರೇ ಅಧಿಕವಾಗಿದ್ದಾರೆ. ಸ್ಮಗ್ಲರ್ ಗಳು ಒಂದು ವರ್ಗದ ಜನರನ್ನೇ ಗುರಿ ಮಾಡಿಕೊಂಡು ದಂಧೆ ಮಾಡುತ್ತಿದ್ದಾರೆ ಎನ್ನಲಾಗಿದೆ.

English summary
The number of cases of illegal gold smuggling from abroad at Mangaluru International Airport has risen in the past three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X