ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಲ್ಲಿಸಿದ್ದ ಬಸ್ 65 ಕಿ.ಮೀ. ಓಡಿಸಿಕೊಂಡು ಹೋದ ಯುವಕ ಪೊಲೀಸರ ವಶಕ್ಕೆ

|
Google Oneindia Kannada News

ಮಂಗಳೂರು, ಅಕ್ಟೋಬರ್ 8: ಉಲ್ಲಾಳ ಬಳಿ ನಿಲ್ಲಿಸಿದ್ದ ಬಸ್ ಆನ್ನು ಯುವಕನೊಬ್ಬ ಅರವತ್ತೈದು ಕಿ.ಮೀ. ದೂರದ ಉಡುಪಿಗೆ ಚಲಾಯಿಸಿಕೊಂಡು ಹೋದ ಘಟನೆ ಭಾನುವಾರ ನಡೆದಿದೆ. ಬಸ್ ಮಾಲೀಕರ ಸ್ನೇಹಿತರು ಹಾಗೂ ಪೊಲೀಸರು ಬಸ್ ಅನ್ನು ಉಡುಪಿ ಬಳಿ ಪತ್ತೆ ಮಾಡಿದ್ದಾರೆ.

ಯುವಕನನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆಗಾಗಿ ಉಲ್ಲಾಳಕ್ಕೆ ಕರೆತಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಲ್ಲಾಳ ಮತ್ತು ಮಂಗಳೂರು ಮಧ್ಯೆ ಈ ಬಸ್ ಸಂಚರಿಸುತ್ತದೆ. ಉಲ್ಲಾಳದ ಸರ್ವೀಸ್ ಸ್ಟೇಷನ್ ನಲ್ಲಿ ಕೆಲಸ ಮಾಡುವ ಮೊಹ್ಮದ್ ನಿಫಾಜ್ ಬಸ್ ಕದ್ದಿರುವ ಆರೋಪಿ.

ಸಾರಿಗೆ ಬಸ್ಸಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿಸಾರಿಗೆ ಬಸ್ಸಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ

ಬಸ್ ಚಾಲಕ ಸಾಮಾನ್ಯವಾಗಿ ಕೀ ಅನ್ನು ಸೀಟ್ ಕೆಳಗೆ ಇಟ್ಟಿರುತ್ತಿದ್ದ. ಅದನ್ನು ತೆಗೆದುಕೊಂಡು ಬಸ್ ಕ್ಲೀನರ್ ಸ್ವಚ್ಛಗೊಳಿಸುತ್ತಿದ್ದ. ಆದರೆ ಭಾನುವಾರ ಬೆಳಗ್ಗೆ ಬಸ್ ಇಲ್ಲದಿರುವುದನ್ನು ಕಂಡು ಗಾಬರಿ ಆಗಿದ್ದಾನೆ. ಕೂಡಲೇ ಬಸ್ ಚಾಲಕನಿಗೆ ವಿಷಯ ಮುಟ್ಟಿಸಿದ್ದಾನೆ. ಆತ ಮಾಲೀಕರಿಗೆ ಮಾಹಿತಿ ತಿಳಿಸಿದ್ದಾನೆ.

 20 Year Old Youth Steals Bus and Drive It To Udupi

ಬಸ್ ಅನ್ನು ನಿಫಾಜ್ ಚಲಾಯಿಸುತ್ತಿರುವುದು ಪತ್ತೆ ಮಾಡಲಾಗಿದೆ. ಉಡುಪಿಗೆ ತೆರಳುವ ಮಾರ್ಗ ಮಧ್ಯೆ ರಸ್ತೆ ವಿಭಜಕಕ್ಕೆ ಬಸ್ ಡಿಕ್ಕಿಯಾಗಿ, ಹಾನಿಗೀಡಾಗಿದೆ.

English summary
Mohammad Niphaz, 20 year old youth steals bus in Ullal, Mangaluru and drive it to Udupi on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X