ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಾರ್ಟ್ ಮೆಂಟ್ ನ 7ನೇ ಅಂತಸ್ತಿನಿಂದ ಬಿದ್ದು ಮಗು ಸಾವು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು: ಒಂದೂವರೆ ವರ್ಷದ ಮಗುವೊಂದು ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಗರದ ಜೆಪ್ಪುವಿನಲ್ಲಿ ನೆಡದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತಪಟ್ಟ ಮಗುವನ್ನು ಇಮ್ರಾನ್ ಹುಸೇನ್ ಎಂಬವರ ಪುತ್ರ ಮುಹಮ್ಮದ್ ಶಾನ್ ಎಂದು ಗುರುತಿಸಲಾಗಿದೆ.

ಜೆಪ್ಪುವಿನಲ್ಲಿರುವ ವಸತಿ ಸಮುಚ್ಚಯದ ಏಳನೇ ಅಂತಸ್ತಿನ ಅಪಾರ್ಟ್ಮೆಂಟ್ ವೊಂದರಲ್ಲಿ ಇಮ್ರಾನ್ ದಂಪತಿ ವಾಸವಾಗಿದ್ದು, ನಿನ್ನೆ ಸಂಜೆ ಸುಮಾರು ೪ ಗಂಟೆ ಹೊತ್ತಿಗೆ ಮಗು ಫ್ಲ್ಯಾಟ್ ನ ಗ್ಲಾಲರಿ ಕಡೆಗೆ ಕುರ್ಚಿ ತಂದು ನಿಂತಿದ್ದಂತೆಯೇ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ.

18 months old baby dies after falling from 7th floor of appartment

ಈ ಸಂದರ್ಭದ್ಲಲಿ ಮಗುವಿನ ತಾಯಿ ಒಳಗಿದ್ದು, ಈ ದುರ್ಘಟನೆ ಅವರ ಗಮನಕ್ಕೆ ಬಂದಿರಲಿಲ್ಲ. ತದನಂತರ ಈ ವಿಚಾರ ತಿಳಿದ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಮೃತ ಪಟ್ಟಿರುವವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಮಗುವಿನ ತಂದೆ ವಿದೇಶದಲ್ಲಿದ್ದು, ಅವರು ಗುರುವಾರ ಮನೆಗೆ ಮರಳಲಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಲಿದೆ.

English summary
An 18-month-old child died after falling from 7th floor of a apprtment at Jeppu in Mangaluru on May 3rd, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X