ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಸಮಯ ಎರಡೂ ಕೈಗಳಿಂದ ಬರೆದು ಮಂಗಳೂರಿನ ಬಾಲಕಿ ದಾಖಲೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 15: ಎರಡೂ ಕೈಗಳಿಂದ ಒಂದೇ ಸಮಯದಲ್ಲಿ ಬರೆಯುವುದಲ್ಲದೇ ಒಂದು ನಿಮಿಷಕ್ಕೆ 45 ಇಂಗ್ಲಿಷ್ ಪದಗಳನ್ನು ಯುನಿ ಡೈರೆಕ್ಷನಲ್ ಶೈಲಿಯಲ್ಲಿ ಬರೆದು ದಾಖಲೆ ಸೃಷ್ಟಿಸಿದ್ದಾರೆ ಮಂಗಳೂರಿನ ಆದಿ ಸ್ವರೂಪಾ.

ಆದಿ ಸ್ವರೂಪಾ ಸಾಧನೆಗೆ ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್‌ ಸಂಸ್ಥೆಯು ಎಕ್ಸ್‌ಕ್ಲೂಸಿವ್ ವಲ್ಡ್ ರೆಕಾರ್ಡ್‌ ಗೌರವ ಘೋಷಿಸಿದೆ. ಮಂಗಳೂರಿನ 16 ವರ್ಷದ ಸ್ವರೂಪಾ, ಗೋಪಾಡ್ಕರ್- ಸುಮಾಡ್ಕರ್ ದಂಪತಿ ಮಗಳು. 2 ವರ್ಷಗಳ ಹಿಂದೆ ಎರಡೂ ಕೈಗಳಿಂದ ಬರೆಯುವುದರ ಅಭ್ಯಾಸ ಆರಂಭಿಸಿದ್ದರು.

ಗೂಗಲ್ ಟಿಟಿಎಸ್ ನಲ್ಲಿ ಕನ್ನಡ ಧ್ವನಿ; ಬೆಳಗಾವಿ ಅಂಧನ ಸಾಧನೆಗೂಗಲ್ ಟಿಟಿಎಸ್ ನಲ್ಲಿ ಕನ್ನಡ ಧ್ವನಿ; ಬೆಳಗಾವಿ ಅಂಧನ ಸಾಧನೆ

ಇದೀಗ ಯುನಿಡೈರೆಕ್ಷನಲ್, ಆಪೊಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್‌ ಇಮೇಜ್‌, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್‌ಚೇಂಜ್‌, ಡ್ಯಾನ್ಸಿಂಗ್ ಮತ್ತು ಬ್ಲೈಂಡ್‌ ಫೋಲ್ಡಿಂಗ್ ಎನ್ನುವ ಹತ್ತು ಶೈಲಿಗಳಲ್ಲಿ ಬೋರ್ಡ್‌ನಲ್ಲಿ ಬರೆಯುವಲ್ಲಿ ಪರಿಣತಿಯಾಗಿದ್ದಾರೆ.

Mangaluru: 16 Year old Girl Record By Writing In Both Hands At The Same Time

ಇನ್ನೂ ಒಂದು ವಿಶೇಷ ಸಂಗತಿಯೆಂದರೆ, ಆದಿಸ್ವರೂಪಾ ಶಾಲೆಗೆ ಹೋದವಳಲ್ಲ. 10ನೇ ತರಗತಿಯ ಸ್ವಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್‌ ಬಾಕ್ಸ್‌, ರೂಬಿಕ್ ಕ್ಯೂಬ್ ಹೀಗೆ ಹತ್ತು ಹಲವು ವಿಷಯಗಳ ಅಧ್ಯಯನದಲ್ಲೂ ಆಸಕ್ತಿ ಹೊಂದಿದ್ದಾರೆ.

Mangaluru: 16 Year old Girl Record By Writing In Both Hands At The Same Time

ಆದಿ ಸ್ವರೂಪಾ ಅವರಿಗೆ ಸಂಗೀತದ ಮೇಲೂ ಪ್ರೀತಿ. ಹಿಂದೂಸ್ತಾನಿ ಸಂಗೀತವನ್ನು ಪಂಡಿತ್‌ ರವಿಕಿರಣ್ ಅವರಲ್ಲಿ ಅಭ್ಯಸಿಸುತ್ತಿದ್ದಾರೆ. 7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ, ಕಥಾ ಸಂಕಲನ ಹೊರತಂದಿದ್ದಾರೆ. ಸಕಲ ಕಲೆಗಳ ಮಿಳಿತವಾಗಿರುವ ಆದಿ ಸ್ವರೂಪಾ ಅವರ ಪೋಷಕರು ಮಗಳ ಕಲೆಗೆ ನೀರೆರೆದಿದ್ದಾರೆ.

English summary
A 16 year old Adi swaroop from manglore set record by writing in both hands at same time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X