ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದಲ್ಲೇ ಎಸ್‌ಎಸ್‌ಎಲ್‌ಸಿ ಪಠ್ಯ ತೋರಿಸಿ ದಾಖಲೆ ಬರೆದ ಮಂಗಳೂರಿನ ಬಾಲೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 20: ಚೆನ್ನಾಗಿ ಓದಿದ್ದನ್ನು ಮನನ ಮಾಡಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ವಿವಿಧ ಸರ್ಕಸ್ ಮಾಡುತ್ತಾರೆ. ಯಾಕೆಂದರೆ ಓದಿದ ಎಲ್ಲಾ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ವಿದ್ಯಾರ್ಥಿಗಳಿಗೆ ಒಂದು ಸವಾಲಿನ ಕೆಲಸವಾಗಿರುತ್ತದೆ.

ಆದರೆ ಮಂಗಳೂರಿನ ಈ ವಿದ್ಯಾರ್ಥಿನಿ ಮಾತ್ರ ಎಲ್ಲಾ ಪಠ್ಯಗಳನ್ನು ಚಿತ್ರದಲ್ಲೇ ಮನನ ಮಾಡುತ್ತಾಳೆ. ಚಿತ್ರದ ಮೂಲಕವೇ ಆರು ವಿಷಯಗಳ ಎಲ್ಲಾ ಪಠ್ಯಗಳನ್ನು ಬರೆದು ದಾಖಲೆ ಮಾಡಿದ್ದಾಳೆ.

ಕರಾವಳಿಯ ಕಂಬಳಕ್ಕೆ ನೂತನ ನಿಯಮಗಳು; ನಿಯಮ ಉಲ್ಲಂಘಿಸಿದರೆ ಅಮಾನತುಕರಾವಳಿಯ ಕಂಬಳಕ್ಕೆ ನೂತನ ನಿಯಮಗಳು; ನಿಯಮ ಉಲ್ಲಂಘಿಸಿದರೆ ಅಮಾನತು

ಈ ವಿಶೇಷ ಕಲಿಕಾ ಸೂತ್ರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಸ್ಥಾನ ಮುದ್ರಿಸಿದವಳು ಮಂಗಳೂರಿನ ಸ್ವರೂಪ. ಅನೌಪಚಾರಿಕ ಶಿಕ್ಷಣದ ಸ್ವಕಲಿಕಾ ಸಂಸ್ಥೆಯಾಗಿರುವ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಮತ್ತು ಪ್ರಾಂಶುಪಾಲೆ ಸುಮಾಡ್ಕರ್ ದಂಪತಿಯ ಪುತ್ರಿಯೇ ಆದಿ ಸ್ವರೂಪ.

Mangaluru: 16-year-old Girl Enters India Book Of Records For Drawing SSLC Full Text Book

ಸ್ವರೂಪ ಸ್ವಕಲಿಕಾ ಶಿಕ್ಷಣ ಸಂಸ್ಥೆ ಬಹಳ ವಿಶೇಷವಾಗದೆ. ಮಕ್ಕಳು ಪುಸ್ತಕದ ಬದನೇಕಾಯಿಯಾಗದೇ ಪಠ್ಯೇತರ ಚಟುವಟಿಕೆಗಳ ಮೂಲಕವೇ ವಿದ್ಯಾರ್ಜನೆ ಪಡೆಯಬೇಕೆಂಬ ಉದ್ದೇಶವನ್ನಿರಿಸಿಕೊಂಡು ನಡೆಸಲಾಗುತ್ತಿದೆ. ಮಕ್ಕಳಿಗೆ ಸರಳವಾಗಿ ಕಲಿಯುವ ಮತ್ತು ಮೆದುಳಿನ ಸಾಮರ್ಥ್ಯ ಹೆಚ್ಚಿಸುವ 10 ಕಲಿಕಾ ಕ್ರಮಗಳನ್ನು ಸ್ವರೂಪ ಶಿಕ್ಷಣ ಸಂಸ್ಥೆ ಕಲಿಸಿಕೊಡುತ್ತದೆ.

ಅದರಲ್ಲಿ ಈ ವಿಶೂವಲ್ ಮೆಮೊರಿ ಆರ್ಟ್ ಸಹ ಒಂದು. ಇದೇ ವಿಧಾನವನ್ನು ಬಳಸಿಕೊಂಡು ಆದಿ ಸ್ವರೂಪ ಈ ಸಾಧನೆ ಮಾಡಿದ್ದಾರೆ. ಆರು ವಿಷಯಗಳ ಹತ್ತು ಪಠ್ಯ ಪುಸ್ತಕಗಳನ್ನು ಈ ಚಿತ್ರಗಳಲ್ಲಿ ವಿವರಿಸಿದ್ದಾರೆ. ಇದರಲ್ಲಿ 93 ಸಾವಿರ ಕಿರುಚಿತ್ರಗಳು ಇದೆ. ಇಲ್ಲಿ ಆರ್ಟ್ ಮೂಲಕ ಪೂರ್ತಿ ಪಠ್ಯವನ್ನು ದಾಖಲು ಮಾಡಿರುವುದರಿಂದ ಮನನ ಹೆಚ್ಚು ಸಾಧ್ಯವಾಗುತ್ತದೆ.

Mangaluru: 16-year-old Girl Enters India Book Of Records For Drawing SSLC Full Text Book

ಆದಿ ಸ್ವರೂಪ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಈವರೆಗೆ ಶಾಲೆಯ ಮೆಟ್ಟಿಲು ಹತ್ತದೇ ಸ್ವಕಲಿಕೆಯ ಮೂಲಕವೇ ಸಾಧನೆ ಮಾಡಿದ್ದಾಳೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಉತ್ತಮ ಅಂಕ ಹೊಂದುವ ವಿಶ್ವಾಸ ಆದಿ ಸ್ವರೂಪಳಲ್ಲಿದೆ.

ಆದಿ ಸ್ವರೂಪ ಈಗಾಗಲೇ ಹಾಡುತ್ತಾ ಅದೇ ಸಮಯದಲ್ಲಿ ಎರಡು ಕೈಗಳಲ್ಲಿ ವಿಭಿನ್ನ ಭಾಷೆಗಳಲ್ಲಿ ಬರೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದೀಗ ಸುಲಭವಾಗಿ ಎಸ್‌ಎಸ್‌ಎಲ್‌ಸಿಯ ಪಾಠಗಳನ್ನು ಹೇಗೆ ಕಲಿತೆ ಎಂಬುದನ್ನು ಇತರ ವಿದ್ಯಾರ್ಥಿಗಳಿಗೆ ತೋರಿಸಲು ಈ ದಾಖಲೆ ಮಾಡಿದ್ದಾರೆ.

English summary
16-year-old Girl Adi Swarupa from Mangaluru, enters India Book of Records for drawing SSLC full text book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X