ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೈತ್ ನಲ್ಲಿ ಸಿಲುಕಿಕೊಂಡಿದ್ದ 10 ಯುವಕರು ಮರಳಿ ಮಂಗಳೂರಿಗೆ

|
Google Oneindia Kannada News

ಮಂಗಳೂರು, ಜುಲೈ 19: ಕುವೈತ್ ಗೆ ಉದ್ಯೋಗಕ್ಕೆಂದು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಕರಾವಳಿಯ 10 ಮಂದಿ ಯುವಕರು ಇಂದು ತಾಯ್ನಾಡಿಗೆ ಮರಳಿದ್ದಾರೆ. ಕುವೈತ್ ನಿಂದ ನಿನ್ನೆ ಮುಂಬೈಗೆ ಬಂದ ಈ 10 ಮಂದಿ ಮುಂಬೈನಿಂದ ಬಸ್ ಮೂಲಕ ಇಂದು ಮಂಗಳೂರಿಗೆ ಬಂದಿಳಿದಿದ್ದಾರೆ. ಈ ಸಂತ್ರಸ್ತ ಯುವಕರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರು ನಗರದ ಪಂಪ್ವೆಲ್ ಬಳಿ ಸ್ವಾಗತಿಸಿದ್ದಾರೆ.

 ಕುವೈತ್ ನಲ್ಲಿ ಗೃಹ ಬಂಧನದಲ್ಲಿದ್ದ ಮಂಗಳೂರಿನ ಮಹಿಳೆ ರಕ್ಷಣೆ ಕುವೈತ್ ನಲ್ಲಿ ಗೃಹ ಬಂಧನದಲ್ಲಿದ್ದ ಮಂಗಳೂರಿನ ಮಹಿಳೆ ರಕ್ಷಣೆ

ನಷೂದ್, ವರುಣ್, ಕಲಂದರ್ ಶಫೀಕ್, ನಷೂದ್, ರಫೀಕ್, ಯಕೂಬ್ ಮುಲ್ಲಾ, ಪಾರ್ಲ್ಟ್ರಿಕ್ ಫರ್ನಾಂಡಿಸ್, ಜಗದೀಶ್, ಆಶೀಕ್, ಪಾರ್ಥಿಕ್, ಮಹಮ್ಮದ್ ಹಸನ್, ಮಹಮ್ಮದ್ ಇಸ್ಮಾಯಿಲ್, ಅಬ್ದುಲ್ ಮಸೀದ್, ಮಹಮ್ಮದ್ ಸುಹೇಲ್, ನೌಫಾಲ್ ಹುಸೈನ್, ಮಹಮ್ಮದ್ ಶಕೀರ್, ಅಬ್ದುಲ್ ಲತೀಫ್, ಫಯಾಝ್, ಅಬುಬಕ್ಕರ್ ಸಿದ್ದಿಕ್ ತವರಿಗೆ ಬಂದಿಳಿದ ಕರಾವಳಿ ಮೂಲದ ಸಂತ್ರಸ್ತ ಯುವಕರು.

10 Youth return home from kuwait who trapped in employment fraud

ಈ 19 ಮಂದಿಗೆ ಕುವೈತ್‌ನಿಂದ ಮುಂಬೈಗೆ ವಿಮಾನ ಟಿಕೆಟ್ ಮತ್ತು ಅಲ್ಲಿಂದ ಮಂಗಳೂರಿಗೆ ಬಸ್‌ ಟಿಕೆಟ್ ಅನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್‌ ವ್ಯವಸ್ಥೆ ಮಾಡಿದ್ದರು. ಉದ್ಯೋಗಕ್ಕಾಗಿ ಕುವೈತ್‌ಗೆ ಹೋಗಿ ಸಂಕಷ್ಟಕ್ಕೀಡಾಗಿದ್ದ 58 ಕಾರ್ಮಿಕರ ಪೈಕಿ ಕರಾವಳಿಯ 19 ಯುವಕರು ಅತಂತ್ರ ಸ್ಥಿತಿಯಲ್ಲಿದ್ದರು. ಯುವಕರ ಬಿಡುಗಡೆ ವಿಚಾರದಲ್ಲಿ ತಕ್ಷಣ ಸ್ಪಂದಿಸಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ಕಾರ್ಯವೈಖರಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.

English summary
10 Youth return to Mangaluru today. They were trapped in kuwait by employment fraud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X