• search

ಸುಳ್ಯ: ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಕಾಮುಕರು

By ಮಂಗಳೂರು ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮಂಗಳೂರು, ಜೂನ್.26: ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ಯುವತಿಯ ಮೇಲೆ ನಾಲ್ಕು ಮಂದಿ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

  ನಿನ್ನೆ ಸಂಜೆ ನಾಲ್ಕು ಮಂದಿ ಯುವಕರು ಈ ಕೃತ್ಯ ನಡೆಸಿದ್ದು, ಡೈರಿಗೆ ಹಾಲು ಕೊಟ್ಟು ವಾಪಸ್ ಬರುತ್ತಿದ್ದ ಯುವತಿಯನ್ನು ಅಪಹರಿಸಿ ರಿಕ್ಷಾದಲ್ಲಿ ರಬ್ಬರ್ ಎಸ್ಟೇಟ್ ಗೆ ಕರೆದೊಯ್ದು,
  ಈ ನೀಚ ಕೃತ್ಯ ಎಸಗಿದ್ದಾರೆ.

  ಜಾರ್ಖಂಡ್: ಐವರು ಎನ್‌ಜಿಒ ಕಾರ್ಯಕರ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ

  ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ಯಾಚಾರಿಗಳನ್ನು ಹುಡುಕುವ ಕಾರ್ಯದಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

  Young Women were raped by a Four young men

  ಈ ಹಿಂದೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ನಾಗಬೇನಾಳ ಗ್ರಾಮದ ಬಾಳೆ ತೋಟದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದಾಗ ಕಾಮುಕರು ಆಕೆಯನ್ನು ಬಾಳೆ ತೋಟಕ್ಕೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದರು.

  ಇದೀಗ ವಿಶ್ವದಲ್ಲೇ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶ ಭಾರತವೆದು ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಮಾಡಿರುವ ಸರ್ವೆ ಹೇಳುತ್ತಿದೆ. ಯುದ್ಧಗಳಲ್ಲಿ ಸಿಲುಕಿರುವ ಅಪಘಾನಿಸ್ಥಾನ ಮತ್ತು ಸಿರಿಯಾಕ್ಕೆ ಈ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನ ಲಭಿಸಿದೆ. 550 ಮಂದಿ ಮಹಿಳಾ ವಿಷಯ ತಜ್ಞರು ತಂಡ ಈ ಸರ್ವೆ ಮಾಡಿದೆ.

  ಸರ್ಕಾರಿ ದಾಖಲೆಗಳ ಪ್ರಕಾರ 2007 ರಿಂದ 2016ರ ಅಂತರದಲ್ಲಿ ಭಾರತದಲ್ಲಿ ಮಹಿಳೆಯರ ಮೇಲಿನ ಹಿಂಸೆ 83% ಹೆಚ್ಚಾಗಿದೆಯಂತೆ. ಭಾರತದಲ್ಲಿ ಪ್ರತಿ 1 ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣ ದಾಖಲಾಗುತ್ತದೆಯಂತೆ. ದಾಖಲಾಗದೇ ಉಳಿವ ಅತ್ಯಾಚಾರಗಳನ್ನು ಪರಿಗಣಿಸಿದರೆ ಗಂಟೆಗೆ 10ಕ್ಕೂ ಹೆಚ್ಚು ಅತ್ಯಾಚಾರಗಳಾಗುತ್ತಿವೆ ಎಂಬುದು ಆತ್ಮವನ್ನೇ ಹಿಸುಕುವ ಕಠು ಸತ್ಯ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Young Women were raped by a Four young men. The incident took place at Sheni, near Bellare village Sullia.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more