ಹುಡುಗಿಯರ ಫೋಟೋ ತೋರಿಸಿ ವಂಚನೆ, ಇಬ್ಬರ ಬಂಧನ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ ೦7 : ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ವಂಚಿಸುತ್ತಿದ್ದ ಇಬ್ಬರನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಲ್ಲಿ ಅಪಾರ್ಟ್ಮೆಂಟ್ ಮೇಲೆ ದಾಳಿ, ಬಯಲಾದ ವೇಶ್ಯಾವಾಟಿಕೆ

ಎಕ್ಕೂರಿನ ಕುಲದೀಪ್, ಫರಂಗಿಪೇಟೆಯ ಕೀರ್ತನ್ ಬಂಧಿತ ಆರೋಪಿಗಳು. ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹುಡುಗಿಯರ ಫೋಟೋ ತೋರಿಸಿ ಆಮಿಷ ಒಡ್ಡುತ್ತಿದ್ದ ಎನ್‍ಆರ್‍ಐ ತಂಡವು ಹೆಚ್ಚಾಗಿ ಶ್ರೀಮಂತರನ್ನು ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದರು.

Young women used as bait to cheat foreign nationals,two arrested in Mangaluru

ತಾವು ಫಾರಿನ್ ಏಜನ್ಸಿ ಅಂತಾ ಹೇಳಿಕೊಂಡು ಆನ್ ಲೈನಲ್ಲಿ ಹಣ ಕಳುಹಿಸಲು ಹೇಳುತ್ತಿದ್ದರು. ಮುಂಗಡವಾಗಿ ಆಗಿ 300 ಡಾಲರ್(ಅಂದಾಜು 31 ಸಾವಿರ ರು.) ಪೂರೈಸಿದರೆ ಸಪ್ಲೈ ಮಾಡುವ ಭರವಸೆ ನೀಡುತ್ತಿದ್ದರಿಂದ ಕೆಲವರು ಹಣ ಕಳಿಸುತ್ತಿದ್ದರು.

ಒಂದಷ್ಟು ಹಣ ಪಾವತಿಸಿದ ಬಳಿಕ ಸಂಪರ್ಕ ಕಡಿತಗೊಳಿಸಿ ಮೋಸ ಮಾಡುತ್ತಿದ್ದರು. ಒಂದೂವರೆ ವರ್ಷದಿಂದ ಈ ಮೋಸದ ಜಾಲ ನಡೆಯುತ್ತಿದ್ದರೂ ಮರ್ಯಾದೆಗೆ ಅಂಜಿ ಯಾರೂ ದೂರು ನೀಡಿರಲಿಲ್ಲ.

ಈ ತಂಡದಲ್ಲಿ ಇನ್ನೂ ಮೂವರಿದ್ದು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಕ್ಷಾ ಚಾಲಕ ಸಾವು: ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ನಗರದ ಜ್ಯೋತಿ ವೃತ್ತದಲ್ಲಿ ಈ ಘಟನೆ ನಡೆದಿದ್ದು ರೀಕ್ಷಾ ಪಾರ್ಕ್ ನಲ್ಲಿ ನಿಲ್ಲಿಸಿದ್ದ ಆಟೋಗಳಿಗೆ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

Mangaluru : Mayer Kavitha Sanil Raids Massage Parlor | Oneindia Kannada

ಈ ಸಂದರ್ಭದಲ್ಲಿ ಮೂರು ಮಂದಿ ಆಟೋ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಪಕ್ಕದಲ್ಲೇ ಇರುವ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು . ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಪ್ರವೀಣ್ ಮೃತಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two have been arrested in Mangaluru for luring foreign girls to NRIs with an intension to extract money. The arrested are identified as Keertan and Kuldeep. In another incident, a person has been killed in an accident.
Please Wait while comments are loading...