ಮಂಗಳೂರಿನಲ್ಲಿ ಕೇರಳದ ಪ್ರೇಮಿಗಳು ಆತ್ಮಹತ್ಯೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 14 : ಪ್ರೇಮಿಗಳಿಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.‌

ಮೃತಪಟ್ಟವರನ್ನು ಕೇರಳದ ಕೊಚ್ಚಿಯ ನಿವಾಸಿಗಳಾದ ಮ್ಯಾಥ್ಯೂ ಮತ್ತು ಮಂಜುಳಾ ಎಂದು ಗುರುತಿಸಲಾಗಿದೆ. ಈ ಜೋಡಿ ಸುಮಾರು ಒಂದು ತಿಂಗಳಿನಿಂದ ಶಕ್ತಿನಗರ ಸಮೀಪದಲ್ಲಿರುವ ದತ್ತನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. [ಚಪ್ಲಿ ಸ್ಟಾಂಡ್ ನಲ್ಲಿತ್ತು 13 ಅಡಿ ಉದ್ದದ ಕಾಳಿಂಗ]

couple found hanging

ಎರಡು ದಿನಗಳಿಂದ ಇಬ್ಬರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಕುರಿತು ಅಕ್ಕ-ಪಕ್ಕದ ಮನೆಯವರು ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದರು. ಸೋಮವಾರ ಬೆಳಗ್ಗೆ ಮನೆಯ ಮಾಲೀಕರು ಬೀಗ ತೆರೆದು ನೋಡಿದಾಗ ರೂಂ ನಲ್ಲಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. [ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]

ಮೃತಪಟ್ಟ ಮ್ಯಾಥ್ಯೂ ಶ್ರೀದೇವಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದ. ನರ್ಸಿಂಗ್ ಕೋರ್ಸ್ ಮುಗಿಸಿದ್ದ ಮಂಜುಳಾಗೆ ಮಂಗಳಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸದ ಆಫರ್‌ ಸಿಕ್ಕಿತ್ತು ಎಂದು ತಿಳಿದುಬಂದಿದೆ.

ಈ ಜೋಡಿಯ ಮೃತದೇಹವನ್ನು ವೆನ್ಲಾಕ್‍ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A young couple was found hanging in a rented room at Dattanagara Mangaluru on Monday, March 14 morning. The deceased have been identified as Mathew and Manjula from Kochi in Kerala. Mangaluru rural police visited the spot.
Please Wait while comments are loading...