ಮಂಗಳೂರು: 29ರ ಹರೆಯದ ಈ ಯುವಕ ಐಶ್ವರ್ಯಾ ರೈ ಮಗನಂತೆ!

Posted By:
Subscribe to Oneindia Kannada
   ಬಿಗ್ ಶಾಕ್ : ಐಶ್ವರ್ಯಾ ರೈ ನನ್ನಮ್ಮ ಅಂತ ಹೇಳ್ತಿದ್ದಾನೆ ಈ 29 ವರ್ಷದ ಸಂಗೀತ್ ಕುಮಾರ್ ರೈ | Oneindia Kannada

   ಮಂಗಳೂರು, ಡಿಸೆಂಬರ್ 30: ನಾನು ವಿಶ್ವ ಸುಂದರಿ , ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ ಪ್ಲೀಸ್ ಇದನ್ನು ನಂಬಿ ಎಂದು ಹೇಳಿಕೊಂಡು ಯುವಕನೋರ್ವ ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿ ಸಂಚಲನ ಮೂಡಿಸಿದ್ದಾನೆ . ಆಂದ್ರದ ವಿಶಾಖಪಟ್ಟಣಂ ಮೂಲದ 29 ವರ್ಷದ ಯುವಕ ತಾನು ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಅವರ ಮಗನೆಂದು ಹೇಳಿಕೊಂಡು ಹೊಸ ಬಾಂಬ್ ಸಿಡಿಸಿದ್ದಾನೆ.

   ಐಶ್ವರ್ಯಾ ರೈ ಮೇಲೆ ಜನಾಂಗೀಯ ನಿಂದನೆ ಆರೋಪ

   ಸಂಗೀತ್ ಕುಮಾರ್ ರೈ ಹೆಸರಿನ ಈ ಯುವಕ ಮಂಗಳೂರಿಗೆ ಬಂದು ಮಾಧ್ಯಮಗಳ ಎದುರು ಈ ಹೇಳಿಕೆ ನೀಡಿದ್ದಾನೆ. ಈತ ಹೇಳುವ ಪ್ರಕಾರ 1988ರಲ್ಲಿ ಈತನ ಜನನವಾಗಿದ್ದು, ಐಶ್ವರ್ಯ‌ ಕೃಷ್ಣರಾಜ ರೈ ತನ್ನ ತಾಯಿ ಎಂದು ಹೇಳುತ್ತಿದ್ದಾನೆ. ಐಶ್ವರ್ಯ ರೈಯ ಇಡೀ ಕುಟುಂಬ ಬಗ್ಗೆ ಹಾಗೂ ಐಶ್ವರ್ಯ ರೈ ಯಾವ ವರ್ಷದಲ್ಲಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟರು ಮತ್ತು ಆಕೆ ನಟಿಸಿದ ಚಿತ್ರಗಳ ಬಗ್ಗೆಯೂ ಈತ ಮಾಹಿತಿ ಹೊಂದಿದ್ದಾನೆ.

   Young boy creates panic by saying I am the son of actress Aishwarya rai

   ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು, ಐಶ್ವರ್ಯಾ ರೈ ಹಾಗೂ ತನ್ನ ತಂದೆ ಐ.ವಿ.ಎಫ್ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. ಪದ್ಮಜಾ ಅವರು ನನ್ನ ಮಲತಾಯಿಯಾಗಿದ್ದಾರೆ. ನನ್ನ ಜನನ ಲಂಡನ್ ನಲ್ಲಿ ಆಗಿದೆ. ತನ್ನ ತಾಯಿ ಐಶ್ವರ್ಯ ರೈ ಇದೀಗ ಅಭಿಷೇಕ್ ಬಚ್ಚನ್ ಅನ್ನು ಮದುವೆಯಾಗಿದ್ದು, ಆರಾಧ್ಯ ಕೂಡಾ ಐವಿಎಫ್ ಮೆಥಡ್ ಮೂಲಕವೇ ಹುಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾನೆ.

   ತಾನು ಹುಟ್ಟಿದ ಆರಂಭದ ಎರಡು ವರ್ಷ ಐಶ್ವರ್ಯಾ ಕುಟುಂಬದ ಜೊತೆಗಿದ್ದೆ. ಆನಂತರ ಸುರಕ್ಷತೆಯ ದೃಷ್ಠಿಯಿಂದ ತನ್ನನ್ನು ತಂದೆ ವಿಶಾಖಪಟ್ಟಣಂಗೆ ತಂದು ಸಾಕಿದರು ಅಂತ ಹೇಳುತ್ತಾನೆ ಸಂಗೀತ್ ಕುಮಾರ್. ತಾನು ಆಕೆಯ ಮಗನೆಂದು ಹೇಳಿಕೊಳ್ಳಲು ಯಾವುದೇ ದಾಖಲೆ ತನ್ನಲ್ಲಿ ಇಲ್ಲ. ಎಲ್ಲಾ ದಾಖಲೆಗಳು ಐಶ್ವರ್ಯಾ ರೈ ತಾಯಿಯ ಬಳಿಯಿದೆ. ಐಶ್ವರ್ಯಾ ರೈ ಕುಟುಂಬಸ್ಥರು ನನ್ನನ್ನು ನೋಡಿದರೆ ಒಪ್ಪಿಕೊಳ್ಳುತ್ತಾರೆ ಎಂದು ಹೇಳುತ್ತಾನೆ.

   Young boy creates panic by saying I am the son of actress Aishwarya rai

   ಚೆನ್ನೈ ಯಲ್ಲಿ ಸೌಂಡ್ ಇಂಜಿನಿಯರ್ ಆಗಿದ್ದೇನೆ ಅಂತಾ ಹೇಳಿಕೊಂಡಿರುವ ಈತ ತನಗೆ ಬಚ್ಚನ್ ಕುಟುಂಬ ಇಷ್ಟವಿಲ್ಲ. ಅಭಿಷೇಕ್ ಬಚ್ಚನ್ ತನ್ನ ತಾಯಿಯ ಜತೆ ಇರೋದು ಇಷ್ಟವಿಲ್ಲ. ತಾನು ತಾಯಿ ಬಳಿ ಹೋಗಬೇಕಿದ್ದು, ತಾಯಿ ಐಶ್ವರ್ಯ ರೈ ಜತೆಯೇ ಇರಬೇಕೆಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Young boy creates panic by saying I am the son of actress Aishwarya Rai. The young boy is named as Sangeeth Kumar. His statement has created panic here in Mangaluru.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ