ಚಿತ್ರಗಳು : ಜೋಗಿ ಮಠದ ಶ್ರೀಗಳ ಪಟ್ಟಾಭಿಷೇಕ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 08 : ದಕ್ಷಿಣ ಭಾರತದ ನಾಥ ಪಂಥದ ಪ್ರಮುಖ ಕೇಂದ್ರವಾದ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾದ ಶ್ರೀ ಯೋಗಿ ನಿರ್ಮಲ್‍ನಾಥ್‍ ಜೀ ಪಟ್ಟಾಭಿಷೇಕ ಸೋಮವಾರ ನಡೆಯಿತು.

ಪಾರಂಪರಿಕ ತಂತ್ರಿಗಳಾದ ಶ್ರೀ ವಿಠಲದಾಸ್‍ ಅವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ನಡೆದವು. 9.25ರ ಮೇಷ ಲಗ್ನ ಸುಮುಹೂರ್ತದಲ್ಲಿ ಮಹಾ ಶಿವರಾತ್ರಿಯ ಶುಭ ದಿನ ಸ್ವಾಮಿಗಳು ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು. [ಮಂಗಳೂರು ಪ್ರವೇಶಿಸಿದ ನವನಾಥ್ ಝುಂಡಿ ವೈಭವ]

sri yogi nirmalnathji

ಅಖಿಲ ಭಾರತ ವರ್ಷಿಯ ಅವಧೂತ್ ಬೇಖ್ ಬಾರಹ ಪಂಠ ಯೋಗಿ ಮಹಾಸಭಾದ ಮುಂದಾಳುಗಳು, ಜೋಗಿ ಸಮಾಜದ ಬಾಂಧವರು, ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು. ಈ ಶುಭ ಸಂದರ್ಭದಲ್ಲಿ ವಿಟ್ಲ ಜೋಗಿ ಮಠದ ಅರಸುವಾಗಿ ಯೋಗಿ ಶ್ರೀ ಶ್ರದ್ಧಾನಾಥ್‍ಜೀಯವರು ಪಟ್ಟಾಭಿಷೇಕಗೊಂಡರು. [ಮಠಗಳಿಗೆ ನಿಯಂತ್ರಣ ಹಾಕುವ ವಿಧೇಯಕ ವಾಪಸ್]

sri yogi

ಮಠದ ಆವರಣದಲ್ಲಿರುವ ಶಿಲಾ ಪೀಠದಲ್ಲಿ ಉಭಯ ಯೋಗಿಗಳನ್ನು ಕೂರಿಸಿ ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಿ, ನಂತರ ಮಠದ ಒಳಗಿರುವ ಮರಳು ಧೂಮವತಿ ಎದುರು ಶ್ರೀ ನಿರ್ಮಲ್‍ನಾಥ್‍ಜೀಗೆ ನಿರ್ಗಮನ ಪೀಠಾಧಿಪತಿ ಶ್ರೀ ಸಂಧ್ಯಾನಾಥ್‍ಜೀ ಪಟ್ಟದ ಕತ್ತಿಯನ್ನು ನೀಡಿ ರಾಜ ತಿಲಕವನ್ನಿಟ್ಟರು. [ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಉತ್ತರಾಧಿಕಾರಿ ಘೋಷಣೆ]

mutt

ಈ ಪ್ರಕ್ರಿಯೆ ಮುಗಿದ ಬಳಿಕ ಪಟ್ಟಾಭಿಷಿಕ್ತರಾದ ನೂತನ ರಾಜ ತಾನು ತಂದ ಪಾತ್ರ ದೇವತೆಯನ್ನು ಪ್ರತಿಷ್ಠಾಪಿಸಿದರು. ನಿರ್ಗಮನ ಪೀಠಾಧಿಪತಿಗಳು ಅವರ ಕಾಲಾವಧಿಯವರೆಗೆ ತನ್ನಿಂದ ಪೂಜಿಸಲ್ಪಟ್ಟ ಪಾತ್ರ ದೇವತೆಯನ್ನು ಅಲ್ಲಿಂದ ತೆರವುಗೊಳಿಸಿದರು.

district news

ಈ ಎಲ್ಲಾ ವಿಧಾನಗಳು ಮುಗಿದ ಬಳಿಕ ನೂತನ ಪೀಠಾಧಿಪತಿಗಳ ಜೊತೆಯಲ್ಲಿ ಹೊಸ ಸಿಬ್ಬಂದಿಗಳು ಮಠದ ಆಡಳಿತಕ್ಕೆ ನಿಯೋಜಿಸಲ್ಪಡುತ್ತಾರೆ. ದೈನಂದಿನ ಉಸ್ತುವಾರಿಯನ್ನು 'ಕಾರ್‍ಬಾರಿ' ನೋಡಿಕೊಂಡರೆ, ಅಡಿಗೆಯ ಹೊಣೆಗಾರಿಕೆ 'ಭಂಡಾರಿ'ಯದ್ದು. ಲೆಕ್ಕ ಪತ್ರ ಬರೆಯಲು 'ಕೊಠಾರಿ' ಮತ್ತು ಪೂಜೆಯ ಹೊಣೆಗಾರಿಕೆಗೆ 'ಪೂಜಾರಿ' ಇರುತ್ತಾರೆ.

mangaluru

ಪಟ್ಟಾಭಿಷೇಕ ಮಹೋತ್ಸವದಲ್ಲಿ ಮಹಂತ ಸೂರಜ್‍ನಾಥ್ ಜೀ, ಮಹಂತ ಕೃಷ್ಣಾನಾಥ್ ಜೀ, ಮಹಂತ ಸೋಮನಾಥ್ ಜೀ, ಮಹಂತ ಶಿವನಾಥ್‍ಜೀ ಮುಂತಾದವರು ಉಪಸ್ಥಿತರಿದ್ದರು. ಮುಂದಿನ ಹನ್ನೆರಡು ವರ್ಷಗಳ ಕಾಲ ಕದಳೀ ಪೀಠ ಹಾಗೂ ವಿಟ್ಲ ಜೋಗಿ ಮಠದ ಆಡಳಿತ ನಿರ್ವಹಣೆಯನ್ನು ಶ್ರೀ ನಿರ್ಮಲ್‍ನಾಥ್‍ಜೀ ಹಾಗೂ ಶ್ರೀ ಶ್ರದ್ಧಾನಾಥ್‍ಜೀ ನೋಡಿಕೊಳ್ಳಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Yogi Nirmalnathji on March 7, 2016 took over the reigns as the new Raja of Kadali Kadali Yogeshwara (Jogi) Math Mangaluru. The anointment of the new Raja of Jogi Math takes place once in 12 years.
Please Wait while comments are loading...