ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದಲ್ಲಿ ನಡೆಯುತ್ತಿರುವ ಹೋರಾಟ ಬಿಜೆಪಿಗೆ ಪ್ಲಸ್ ಆಗಲಿದೆಯೇ?

|
Google Oneindia Kannada News

ಮಂಗಳೂರು, ನವೆಂಬರ್. 28: ಶಬರಿಮಲೆ ವಿಚಾರದಲ್ಲಿ ಕೇರಳ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.

ಶಬರಿಮಲೆ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂಗಳ ಮನಸ್ಸನ್ನು ನೋವಿಸುವ ಕೆಲಸವನ್ನು ಪಿಣರಾಯಿ ವಿಜಯನ್ ಸರಕಾರ ಮಾಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದ್ದು, ಕಮ್ಯೂನಿಸ್ಟರ ಸರಕಾರ ಅಧಿಕಾರಕ್ಕೆ ಬಂದ ನಂತರ, ಕೇಸರಿ ಮತ್ತು ಕೆಂಪು ಬಣಗಳ ನಡುವಿನ ಮಾರಾಮಾರಿ ತಾರಕ್ಕೇರಿದೆ.

ರಾಜಸ್ತಾನ ಜನತೆಗೆ ಭರಪೂರ ಭರವಸೆ ನೀಡಿದ ಭಾಜಪ, ಎಂಥ ಆಶ್ವಾಸನೆಗಳು!ರಾಜಸ್ತಾನ ಜನತೆಗೆ ಭರಪೂರ ಭರವಸೆ ನೀಡಿದ ಭಾಜಪ, ಎಂಥ ಆಶ್ವಾಸನೆಗಳು!

ಇತ್ತಂಡಗಳ ಕಾರ್ಯಕರ್ತರು ಸಾವನ್ನಪ್ಪಿದ್ದು, ಅದರಲ್ಲೂ ಕೇಸರಿ ಪಾಳಯ ಹೆಚ್ಚಿನ ಸಾವು, ನೋವು ಎದುರಿಸಿದೆ ಎಂದು ಹೇಳಲಾಗುತ್ತದೆ.

Yogi Adithya Nath visits Kasaragod

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹೋರಾಟ ಈ ಮಟ್ಟಕ್ಕೆ ಬೆಳೆಯಲು ಪಿಣರಾಯಿ ವಿಜಯನ್ ಸರಕಾರದ ವಿಳಂಬಕಾರಿ ನೀತಿ ಎನ್ನುವ ಮಾತು ಚಾಲ್ತಿಯಲ್ಲಿದೆ.

ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್

ಈ ಎಲ್ಲಾ ಕಾರಣಗಳ ಮೂಲಕ ಹಿಂದೂಗಳು ಐಕ್ಯತೆ ಪ್ರದರ್ಶಿಸುತ್ತಿರುವುದು, ಶಬರಿಮಲೆ ವಿಚಾರದಲ್ಲಿ ಒಟ್ಟಾರೆಯಾಗಿ ಧ್ವನಿಮತದಿಂದ ವಿರೋಧಿಸುತ್ತಿರುವುದು, ಬಿಜೆಪಿಗೆ ಅನುಕೂಲಕರವಾಗಲಿದೆ ಎಂದೇ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 16ಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿಗೆ ಆಗಮಿಸಲಿದ್ದಾರೆ.

ಶಬರಿಮಲೆಯಿಂದ 'ಕನ್ನಡಿಗ' ಐಪಿಎಸ್ ಅಧಿಕಾರಿ ಯತೀಶ್ ಎತ್ತಂಗಡಿಶಬರಿಮಲೆಯಿಂದ 'ಕನ್ನಡಿಗ' ಐಪಿಎಸ್ ಅಧಿಕಾರಿ ಯತೀಶ್ ಎತ್ತಂಗಡಿ

Yogi Adithya Nath visits Kasaragod

ಕಾಸರಗೋಡಿನಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಕಾಸರಗೋಡಿನ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ಶಬರಿಮಲೆಯಲ್ಲಿ ಕೇರಳ ಸರಕಾರದ ಹಿಂದೂ ವಿರೋಧಿ ನೀತಿ ಹಾಗೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಚಾರ ಚರ್ಚೆಯಲ್ಲಿರುವ ಈ ಸಂದರ್ಭಗಳಲ್ಲಿ ಯೋಗಿ ಆದಿತ್ಯನಾಥ್ ಕಾಸರಗೋಡಿಗೆ ನೀಡುತ್ತಿರುವ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರೀ ವಿಶ್ಲೇಷಣೆ ಆರಂಭಗೊಂಡಿದೆ.

English summary
UP Chief Minister Yogi Adityanath going to visit Kasaragod, Kerala On December 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X