'ವೀರಪ್ಪ ಮೊಯ್ಲಿ, ಡಿವಿಎಸ್‌ಗೆ ಖೇಲ್‌ ರತ್ನ ಪ್ರಶಸ್ತಿ ಕೊಡಿ'

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 03 : 'ಕರಾವಳಿಯವರೆ ಆಗಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಡಿ.ವಿ.ಸದಾನಂದ ಗೌಡರ ಒಳಸಂಚಿಗೆ ಬಲಿಯಾಗಿ ಅಪರಾಧ ಮಾಡುತ್ತಿದ್ದಾರೆ. ಇವರು ಆಡುತ್ತಿರುವ ಆಟಕ್ಕೆ ಇವರಿಗೆ 'ಖೇಲ್ ರತ್ನ' ಪ್ರಶಸ್ತಿ ನೀಡಬೇಕು. ಪ್ರಶಸ್ತಿ ನೀಡದಿದ್ದರೆ ಅಪರಾಧವಾದಿತು' ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಲೇವಡಿ ಮಾಡಿದರು.

ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ಪೂಜಾರಿ ಅವರು, 'ಮುಖ್ಯಮಂತ್ರಿಗಳೇ ಎತ್ತಿನಹೊಳೆ ಯೋಜನೆ ನಿಮ್ಮ ದೊಡ್ಡ ಸಾಧನೆಯಲ್ಲ. ಅಂತರ್ಜಲ ವೃದ್ಧಿಸಲು ನೇತ್ರಾವತಿಯ ಉಪನದಿಗಳಿಗೆ ಜೀವತುಂಬಿ. ಬದಲಾಗಿ ಜಿಲ್ಲೆಯನ್ನು ಬಂಜರು ಮಾಡಬೇಡಿ' ಎಂದರು.[ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ : ಸಿದ್ದರಾಮಯ್ಯ]

B.Janardhan Poojary

'ಕರಾವಳಿಯವರೆ ಆಗಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಡಿ.ವಿ.ಸದಾನಂದ ಗೌಡರ ಒಳ ಸಂಚಿಗೆ ಬಲಿಯಾಗಿರುವ ಸಿಎಂ ಎತ್ತಿನಹೊಳೆ ಯೋಜನೆ ಮಾಡಿಯೇ ತೀರುತ್ತೇನೆಂದು ಹೊರಟಿದ್ದಾರೆ. ಬೆಂಗಳೂರಿನಲ್ಲಿ ಸಭೆ ನಡೆಸಿ ಎತ್ತಿನಹೊಳೆ ಕಾಮಗಾರಿಗೆ ವೇಗ ನೀಡಲು ಸೂಚಿಸಿದ್ದಾರೆ' ಎಂದು ದೂರಿದರು.[ಸದಾನಂದ ಗೌಡರಿಗೆ ಜನಾರ್ದನ ಪೂಜಾರಿ ಕೇಳಿದ್ದೇನು?]

'ಏನೇ ಅಡ್ಡಿಯಾದರೂ ತನ್ನ ಗಮನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಿಎಂ ಸೇರಿದಂತೆ ಈ ಇಬ್ಬರು ಮಾಜಿ ಸಿಎಂಗಳು ಕರಾವಳಿ ಪ್ರದೇಶವನ್ನು ಸಹರಾ ಮರುಭೂಮಿ ಮಾಡಲು ಹೊರಟಿದ್ದಾರೆ' ಎಂದು ಪೂಜಾರಿ ಅವರು ಆರೋಪಿಸಿದರು.[ಎತ್ತಿನ ಹೊಳೆ ಯೋಜನೆ ನೀರಿನ ಲಭ್ಯತೆಯ ಬಗ್ಗೆ ಆತಂಕ]

'ಎತ್ತಿನಹೊಳೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿಯವರು ವರದಿ ನೀಡುವಂತೆ ಕೇಳಿದ್ದರೂ ನೀಡಿಲ್ಲ. ಯೋಜನೆ ಕುರಿತು ನನ್ನೊಂದಿಗೆ ಮಾತನಾಡಿ ಎಂದರೂ ಮಾತನಾಡಿಲ್ಲ. ನೀವು ಉದ್ಧಟತನ ತೋರುತ್ತಿದ್ದೀರಿ. ಹೈಕಮಾಂಡ್‌ಗೂ ಕ್ಯಾರೆ ಅನ್ನುತ್ತಿಲ್ಲ. ಹೈಕಮಾಂಡ್ ಕೂಡಾ ಈ ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದೆ' ಎಂದು ಪೂಜಾರಿ ಹೇಳಿದರು.

'ಮುಖ್ಯಮಂತ್ರಿಯವರೇ ನೀವು ಅಪ್ಪಟ ಸುಳ್ಳು ಹೇಳುತ್ತಿದ್ದೀರಿ. ಪಕ್ಷದ 30 ಕಾರ್ಯಕರ್ತರಿಗೆ ಮತ್ತು 20 ಶಾಸಕರಿಗೆ ನಿಗಮ ಮಂಡಳಿ ನೇಮಕಾತಿಗೆ ಹೈಕಮಾಂಡ್ ಒಪ್ಪಿದೆ ಎನ್ನುತ್ತೀರಿ. ಇನ್ನೊಂದೆಡೆ ವರಿಷ್ಠರು ಒಪ್ಪಿದ ಕೂಡಲೇ ನೇಮಕಾತಿಯಾಗಲಿದೆ ಎನ್ನುತ್ತೀರಿ. ಸುಳ್ಳು ಹೇಳಬೇಡಿ' ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress leader B.Janardhan Poojary slams the state government in the issue of Yettinahole project. Poojary told reporters that chief minister Siddaramaiah has ignored the directions of Congress chief Sonia Gandhi with regard to the implementation of project.
Please Wait while comments are loading...