ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎತ್ತಿನಹೊಳೆ ಯೋಜನೆಗೆ ವಿರೋಧ, ಸಚಿವರ ಚಿತ್ರಗಳಿಗೆ ಮಸಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 21 : ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧ ಮುಂದುವರೆದಿದೆ. ನಗರದಲ್ಲಿ ಹಾಕಿದ್ದ ಫೆಕ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಚಿವರ ಮುಖಕ್ಕೆ ಮಸಿ ಬಳಿದು, ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಫಾದರ್ ಮುಲ್ಲರ್‌‌‌ನಿಂದ ನಂದಿಗುಡ್ಡೆ ವರೆಗಿನ ರಸ್ತೆ ಕಾಮಗಾರಿಗೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಲು, ನಗರದ ವೆಲೆನ್ಸಿಯ ವೃತ್ತದಲ್ಲಿ ಫೆಕ್ಸ್‌ ಹಾಕಲಾಗಿದೆ. ಇದರಲ್ಲಿರುವ ಮೂವರು ಸಚಿವರ ಚಿತ್ರಗಳಿಗೆ ಮಸಿ ಬಳಿಯಲಾಗಿದೆ. [ತಡೆಯಾಜ್ಞೆ ಇದ್ದರೂ ಎತ್ತಿನಹೊಳೆ ಕಾಮಗಾರಿ ನಿಂತಿಲ್ಲ!]

drinking water

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಕ್ರೀಡಾ ಸಚಿವ ಅಭಯ‌ಚಂದ್ರ ಜೈನ್ ಅವರ ಭಾವಚಿತ್ರಗಳಿಗೆ ಮಸಿ ಬಳಿಯಲಾಗಿದೆ. ಫೆಕ್ಸ್‌ ಮೇಲೆ ದೊಡ್ಡದಾಗಿ 'ಜೈ ನೇತ್ರಾವತಿ' ಎಂದು ಬರೆಯಲಾಗಿದೆ. [ಎತ್ತಿನಹೊಳೆ ಯೋಜನೆ: ವೀರಪ್ಪ ಮೊಯ್ಲಿಗೆ ಬಹಿರಂಗ ಪತ್ರ]

ಅಚ್ಚರಿಯ ಸಂಗತಿ ಎಂದರೆ ಎತ್ತಿನಹೊಳೆ ಯೋಜನೆಯ ವಿಚಾರದಲ್ಲಿ ಸರ್ಕಾರದ ಪರವಾಗಿರುವ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ಭಾವಚಿತ್ರಕ್ಕೆ ಯಾವುದೇ ಹಾನಿ ಮಾಡಿಲ್ಲ. [ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?]

dakshina kannada

ಈ ಬಂಟಿಂಗ್‌‌‌ ಪಕ್ಕದಲ್ಲಿ ಹಾಗೂ ಎದುರಿನ ರಸ್ತೆ ಬದಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಎರಡು ಫೆಕ್ಸ್‌ಗಳಿವೆ. ಅವುಗಳಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಅವರ ಭಾವಚಿತ್ರ ಹಾಗು ಸಚಿವರ ಚಿತ್ರಗಳಿವೆ. ಈ ಫೆಕ್ಸ್‌ಗೂ ಯಾವುದೇ ಹಾನಿ ಮಾಡಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]

English summary
Unknown persons have defaced flexes carrying images of Minister Ramanath Rai, U.T.Khader and Abhaychandra Jain from the Dakshina Kannada district, in protest against the controversial Yettinahole project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X