ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೇನೆಪೋಯ ಶಾಲೆಯ 6 ವಿದ್ಯಾರ್ಥಿಗಳು ಅಮೆರಿಕ ಸಮ್ಮೇಳನಕ್ಕೆ ಆಯ್ಕೆ

|
Google Oneindia Kannada News

ಮಂಗಳೂರು, ಆಗಸ್ಟ್ 10: ನಗರದ ಯೆನೆಪೋಯಾ ಶಾಲೆಯ ಆರು ವಿದ್ಯಾರ್ಥಿಗಳ ತಂಡ ಮುಂಬರುವ ಐಐಎಂಯುಎನ್ (ಇಂಡಿಯನ್ ಇಂಟರ್ನ್ಯಾಷನಲ್ ಮಾಡೆಲ್ ಯುನೈಟೆಡ್ ನೇಷನ್ಸ್) ಯು.ಎಸ್‌.ಎ 2017 ಸಮ್ಮೇಳನದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.

ಸಮ್ಮೇಳನದಲ್ಲಿ ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಗಸ್ಟ್ ನಲ್ಲಿ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇದನ್ನು ಆಯೋಜಿಸಲಾಗಿದೆ.

Yenepoya School students to Attend International Conference at United Nations

ಅಮೇರಿಕಾದಲ್ಲಿ ವಿದ್ಯಾರ್ಥಿಗಳು ಮೂರು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದು ಅದಾದ ನಂತರ ನ್ಯೂಯಾರ್ಕ್, ವಾಷಿಂಗ್ಟನ್ ಡಿ.ಸಿ ಮತ್ತು ಒರ್ಲ್ಯಾಂಡೊಗಳಿಗೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳ ಅಮೆರಿಕಾ ಭೇಟಿ ಶೈಕ್ಷಣಿಕ ಪ್ರವಾಸವನ್ನೂ ಒಳಗೊಂಡಿದೆ.

ವಿದ್ಯಾರ್ಥಿಗಳು ವಿವಿಧ ಅಂತಾರಾಷ್ಟ್ರೀಯ ವ್ಯವಹಾರಗಳು ಮತ್ತು ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಿದ್ದಾರೆ. ಹಾಗೂ ಇದಕ್ಕೆ ತಮ್ಮ ಪರಿಮಿತಿಯ ವ್ಯಾಪ್ತಿತಿಯಲ್ಲಿ ಹೊಸ ಪರಿಹಾರಗಳನ್ನು ಒದಗಿಸಲಿದ್ದಾರೆ.

ಯೆನೆಪೋಯಾ ಶಾಲೆಯ 10ನೆ ತರಗತಿಯ ವಿದ್ಯಾರ್ಥಿಗಳಾದ ಶೋಯಿಬ್ ಶಿಕ್ ಮುಹಮ್ಮದ್, ಅಂಜಲಿ ಮಾರಿಯಾ ಅಗಸ್ಟೀನ್, ಕ್ಯಾರೋಲಿನ್ ಕ್ಯಾಸ್ಟೆಲಿನೊ, 9ನೆ ತರಗತಿಯ ದ್ರೂವ್ ಕೆ. ಷಾ ಮತ್ತು 8ನೆ ತರಗತಿಯ ಇಲ್ಹಾನ್ ಇರ್ಫಾನ್, ವೈಷ್ಣವಿ ರಾವ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ತಮ್ಮ ಶಿಕ್ಷಕಿ ಮತ್ತು ಮಾರ್ಗದರ್ಶಿಯಾದ ಮರ್ಸಿ ರೇಗೊ ಸಾಥ್ ನೀಡಲಿದ್ದಾರೆ.

"ಇದು ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಆಯೋಜಿಸಿರುವ ಸಮ್ಮೇಳನವಾಗಿದೆ. ಇದಕ್ಕೆ ನಮ್ಮ ಶಾಲೆಯ ಆರು ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಬಹಳ ಸಂತಸದ ವಿಷಯ," ಎಂದು ಸಂಸ್ಥೆ ತಿಳಿಸಿದೆ.

English summary
A team of six students and a mentor from The Yenepoya School, Jeppina Mogaru, Mangaluru has been selected for participating in the upcoming IIMUN (Indian International Model United Nations) USA 2017 Conference to be held on this August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X