ಪುತ್ತೂರಿನ ಮಹಾಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದ ಯಡಿಯೂರಪ್ಪ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 9: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಇಂದು (ಗುರುವಾರ) ಯಡಿಯೂರಪ್ಪ ಭೇಟಿ ಪೂಜೆ ಸಲ್ಲಿಸಿದರು.

ನ.9ರಂದು ಮಂಗಳೂರಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ, ಪ್ರಮುಖ ವಿಷಯವೇನು?

ಮಂಗಳೂರಿನಲ್ಲಿ ನವೆಂಬರ್ 9ರಂದು ಬಿಜೆಪಿ ಕೋರ್ ಕಮೀಟಿ ಸಭೆ ಇರುವುದುರಿಂದ ಜಿಲ್ಲೆಗೆ ಆಗಮಿಸಿದ ಯಡಿಯೂರಪ್ಪ ಮೊದಲು ಮಹಾಲಿಂಗೇಶ್ವರನ ದರ್ಶನ ಪಡೆದರು. ಇದೇ ವೇಳೆ ಮಾತನಾಡಿದ ಬಿಎಸ್ ವೈ, "ಸಿದ್ಧರಾಮಯ್ಯ ನಡೆಸುವ ಮನೆ ಮನೆಗೆ ಕಾಂಗ್ರೆಸ್ ಪಾದಯಾತ್ರೆಗೆ ಅವರ ಪಕ್ಷದಲ್ಲೇ ಬೆಂಬಲವಿಲ್ಲ. ಬಿಜೆಪಿ ಪರಿವರ್ತನಾ ಯಾತ್ರೆ ಬಗ್ಗೆ ಮಾತಾಡುವ ಸಿಎಂ ಮೊದಲು ತಮ್ಮ ಪಕ್ಷದ ಸ್ಥಿತಿಯ ಬಗ್ಗೆ ಮಾತನಾಡಲಿ" ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

Yeddyurappa visited to Puttur Mahalingeshwara temple and performed a pooja

ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ, ಇನ್ನು ನೋಟ್ ಬ್ಯಾನ್ ಬಗ್ಗೆ ಮಾತನಾಡಿದ ಬಿಎಸ್ ವೈ, ನೋಟ್ ಬ್ಯಾನ್ ವಿರುದ್ಧ ಕರಾಳ ದಿನ ಆಚರಿಸುವ ಕಾಂಗ್ರೆಸ್ಸಿಗರು ಮೂರ್ಖರು, ಕಾಂಗ್ರೆಸ್ ಮುಖಂಡರೇ ಕಪ್ಪು ಹಣ ಹೊಂದಿದ್ದು, ಇದರಿಂದ ಕಾಂಗ್ರೆಸ್ ಗೆ ಚಟಪಡಿಕೆ ಉಂಟಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಯಾತ್ರೆಯ ಕುರಿತು ಪಕ್ಷ ವಿರೋಧಿ ಹೇಳಿಕೆ ನೀಡಿದ ಸೊಗಡು ಶಿವಣ್ಣ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ಬಿಜೆಪಿ ನಾಯಕರು ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP Core Committee meet before today Karntaka BJP president BS Yeddyurappa visited to Puttur Mahalingeshwara temple and performed a pooja.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ