'ಯಕ್ಷಗಾನ ಬೆಳವಣಿಗೆಗೆ ಕಲಾಭಿಮಾನಿಗಳ ಸಹಕಾರ ಅಗತ್ಯ'

Posted By: Nayana
Subscribe to Oneindia Kannada

ಮಂಗಳೂರು, ಏಪ್ರಿಲ್ 17: ಯಕ್ಷಗಾನ ಕಲೆ ಬೆಳೆಯುತ್ತಿದೆ ಇನ್ನಷ್ಟು ಕಲೆಯನ್ನು ಪ್ರಚುರಪಡಿಸಲು ಕಲಾಭಿಮಾನಿಗಳ ಸಹಕಾರ ಅಗತ್ಯ ಎಂದು ಅಗರಿ ಎಂಟರ್ ಪ್ರೈಸಸ್ ಸಮೂಹ ಸಂಸ್ಥೆಗಳ ಮಾಲಿಕ ಅಗರಿ ರಾಘವೇಂದ್ರರಾವ್ ಹೇಳಿದ್ದಾರೆ.

'ಇವ್ ನರ್ವಾ' ಡೈಲಾಗ್ ಹೇಳಿದ ಯಕ್ಷಗಾನ ಕಲಾವಿದನಿಗೆ ನೋಟಿಸ್!

ಯಕ್ಷಧ್ರುವ ಫೌಂಡೇಶನ್ ಹಮ್ಮಿಕೊಂಡಿದ್ದ 29 ನೇ ಘಟಕದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲಾವಿದನ ಕಷ್ಟ ಪರಿಹಾರಕ್ಕೆ ಟ್ರಸ್ಟ್ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಹತ್ವದ್ದಾಗಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಯಕ್ಷಗಾನ ಕಲೆಯು ನಗರ ಪ್ರದೇಶಕ್ಕೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಇಷ್ಟೇ ಅಲ್ಲದೆ ವಿದೇಶದಲ್ಲಿಯೂ ಹೆಸರು ಮಾಡುತ್ತಿದೆ. ಕಲೆಯನ್ನು ಉಲಿಸಿಕೊಂಡು ಹೋಗಲು ಕಲಾಭಿಮಾನಿಗಳ ಸಹಾಯ ಬೇಕು ಎಂದರು.

ಭಾಗವತ ಶಿವ ಎಲ್ ಸುವರ್ಣ, ಹೊಸಬೆಟ್ಟು, ಚಕ್ರತಾಳ ವಾದಕ ಸುರೇಶ್ ಕಾಮತ್ ಅವರಿಗೆ 25 ಸಾವಿರ ನಗದಿನೊಂದಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಯಕ್ಷಗಾನದ ಸಾಧನೆಗಾಗಿ ಅಗರಿ ರಘುರಾಮ ಭಾಗವತರು, ಅರುಣ್ ಪೈ ಮಾರಿಗುಡಿ ಸುರತ್ಕಲ್,ಶಿವರಾಮ್ ಪಣಂಬೂರು, ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್ ಮಂಬಯಿ,ಮಾಧವ ಶೆಟ್ಟಿ ಬಾಳ, ಜನಾರ್ದನ್ ಡಿ ಶೆಟ್ಟಿಗಾರ್ ಸುರತ್ಕಲ್,ರವಿ ಕುಮಾರ್ ಸುರತ್ಕಲ್, ಅಪೂರ್ವ ಸುರತ್ಕಲ್ ಇವರಿಗೆ ಗೌರವಾರ್ಪಣೆ ನಡೆಯಿತು.

Yakshagana needs artists dedication and cooperation

ಖಡ್ಗೇಶ್ವರ ಖಡ್ಗೇಶ್ವರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಎಂ ಶೆಟ್ಟಿ, ಉದ್ಯಮಿಯಾದವ ಕೋಟ್ಯಾನ್, ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ, ಪ್ರೇಮ್ ಶೆಟ್ಟಿಸುರತ್ಕಲ್,, ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಗಂಗಾಧರ್ ಹೊಸಬೆಟ್ಟು, ಲಲಿತಕಲಾ ಆರ್ಟ್ಸ್ ಮಂಗಳೂರು ಇದರ ಮಾಲಿಕ ಧನಪಾಲ್ ಶೆಟ್ಟಿಗಾರ್,ಉದ್ಯಮಿ ರಮಾನಾಥ ಶೆಟ್ಟಿ ಕೃಷ್ಣಾಪುರ,ಸತೀಶ್ .

ಮುಂಚೂರು,ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡೋನ್ ಸುವಾರಿಸ್, ಉದ್ಯಮಿ ಟಿ ಎನ್ ರಮೇಶ್, ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೇಂದ್ರೀಯ ಸಮಿತಿ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಮಹಿಳಾ ಘಟಕ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಸುರತ್ಕಲ್ ಘಟಕ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಕಟ್ಲ, ಸಂಚಾಲಕ ರವಿ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ಸತೀಶ್ ಶೆಟ್ಟಿ ಬಾಳಿಕೆ ಮೊದಲಾದವರಿದ್ದರು. ಶಾಸಕ ಮೊಹಿದೀನ್ ಬಾವಾ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
29th unit of Yaksha Dhruva foundation of Mangalore was inaugurated in Surathkal. Inaugurating the unit Agari enterprises group of companies owner Raghavendra Rao said, artists should work hard to preserve and strengthen Yakshagana art.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ