ಡಿಸೆಂಬರ್ 10ರಿಂದ 14ರವರೆಗೆ ಯಕ್ಷಗಾನ ಸಾಂಸ್ಕೃತಿಕ ಉತ್ಸವ

Posted By:
Subscribe to Oneindia Kannada

ಹೊನ್ನಾವರ, ಡಿಸೆಂಬರ್ 6: ದಿ.ಕಡತೋಕಾ ಮಂಜುನಾಥ ಭಾಗವತರ ಸ್ಮರಣೆ ಪ್ರಯುಕ್ತ ಡಿಸೆಂಬರ್ 10ರಿಂದ 14ರವರೆಗೆ ಹೊನ್ನಾವರ ತಾಲೂಕು ಹಳದೀಪುರದ ಗೋಪೀನಾಥ ಸಭಾಗೃಹದಲ್ಲಿ ಯಕ್ಷಗಾನ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಡಿ.10ರ ಸಂಜೆ 5ಕ್ಕೆ ನಾಗರಾಜ ನಾಯಕ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ.

ಉದ್ಯಮಿ ಎನ್.ಆರ್.ಹೆಗಡೆ ರಾಘೋಣ, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಎಂ.ಪ್ರಭಾಕರ ಜೋಶಿ, ಪ್ರೊ.ಎಂ.ಎ.ಹೆಗಡೆ ಭಾಗವಹಿಸಲಿದ್ದಾರೆ. ಗೋಪಾಲಕೃಷ್ಣ ಭಾಗವತ ಅವರ ಯಕ್ಷರಂಗದ ಮಾತುಗಳು ಪುಸ್ತಕ ಬಿಡುಗಡೆ ಆಗಲಿದೆ. ಆ ನಂತರ ತಾಳಮದ್ದಳೆ ನಡೆಯಲಿದೆ.[ಯಕ್ಷಗಾನ ಅರ್ಥಧಾರಿ ಎಂಎ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ]

Yakshagana cultural fest from December 10th

ಡಿಸೆಂಬರ್ 11ರಂದು ಬೆಳಗ್ಗೆ ಸೋಂದಾ ದಿ.ಕೃಷ್ಣ ಭಂಡಾರಿ ಬರೆದ 'ಯಕ್ಷಗಾನ ಕೈಪಿಡಿ' ಪದ್ಧತಿಗಳ ದಾಖಲೀಕರಣವು ಹೊಸ್ತೋಟ ಮಂಜುನಾಥ ಭಾಗವತರ ಮಾರ್ಗದರ್ಶನದಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಹವ್ಯಾಸಿ ಯಕ್ಷರಂಗೋತ್ಸವ ಸನ್ಮಾನವಿದೆ. ಆನಂತರ ಯಕ್ಷಗಾನ ಪ್ರದರ್ಶನವಿದೆ.

ಡಿಸೆಂಬರ್ 12ರಂದು ಬೆಳಗ್ಗೆ ದಿ.ಕೃಷ್ಣ ಭಂಡಾರಿಯವರ ಯಕ್ಷಗಾನ ಕೈಪಿಡಿಯಲ್ಲಿ ಉಲ್ಲೇಖಿತ ರಂಗಪದ್ಧತಿಗಳ ಪ್ರಯೋಗ-ದಾಖಲೀಕರಣ ಹಾಗೂ 'ಯಕ್ಷಗಾನ ಕೈಪಿಡಿ'ಯಲ್ಲಿ ಉಲ್ಲೇಖಿತ ನುಡಿಗಟ್ಟುಗಳ ದಾಖಲೀಕರಣ ಇದೆ. ಸಂಜೆ 5ಕ್ಕೆ ಯಕ್ಷ ರಂಗೋತ್ಸವ ಇದ್ದು, ಆ ನಂತರ ಮಹಿಲೆಯರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನ.[ಯಕ್ಷಗಾನಕ್ಕೆ ರಾಜಮೌಳಿ ಬಾಹುಬಲಿ, ಸರಿಯೋ? ತಪ್ಪೋ?]

ಡಿಸೆಂಬರ್ 14ರಂದು ಸಂಜೆ 4ಕ್ಕೆ ಸಮಾರೊಪ ಸಮಾರಂಭ, ಸನ್ಮಾನ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನವಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರಸಂಗವಿದೆ. ಹೆಚ್ಚಿನ ಮಾಹಿತಿಗಾಗಿ ಮೊ 8762786856 ಅಥವಾ 7406223795 ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yakshagana cultural fest in Honnavara taluk, Uttara Kannada district from December 10th to 14th in the memory of Kadathoka Manjunatha Bhagavata.
Please Wait while comments are loading...