ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ಏಳು ಅದ್ಭುತಗಳನ್ನು ಮಂಗಳೂರಿನಲ್ಲಿ ನೋಡಿ!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜುಲೈ 27 : ಕಡಲತಡಿ ಮಂಗಳೂರಿನ ಪ್ರವಾಸಿ ತಾಣಗಳಿಗೆ ಪಿಲಿಕುಳ ನಿಸರ್ಗಧಾಮ ಮುಕುಟಪ್ರಾಯವಾಗಿದೆ. ಇಲ್ಲಿನ ಜೈವಿಕ ಉದ್ಯಾನವನ, ವಿಜ್ಞಾನ ಸೆಂಟರ್, ಪಾರಂಪರಿಕ ಗ್ರಾಮ, ಗುತ್ತಿನ ಮನೆ ಸೇರಿದಂತೆ ದಿನವಿಡೀ ವೀಕ್ಷಣೆ ಮಾಡಬಹುದಾದಷ್ಟು ಪ್ರವಾಸಿ ತಾಣಗಳು ಇಲ್ಲಿವೆ.

ಸದ್ಯ, ಪಿಲಿಕುಳ ನಿಸರ್ಗಧಾಮದಲ್ಲಿ ಮತ್ತಷ್ಟು ಪ್ರವಾಸಿ ತಾಣಗಳು ವೀಕ್ಷಣೆಗೆ ಲಭ್ಯವಾಗುತ್ತಿದೆ. ವಿಶ್ವ ಮತ್ತು ದೇಶದ ವಿಶೇಷ ಪ್ರವಾಸಿ ತಾಣಗಳ ಮಾದರಿಯನ್ನು ಪಿಲಿಕುಳದಲ್ಲಿ ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಆಲೋಚನೆಯಂತೆ ಈ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.

ವಿಶ್ವದ ಎಲ್ಲ ಪ್ರವಾಸಿ ತಾಣಗಳಿಗೂ ಜನರು ಭೇಟಿ ನೀಡುವುದು ಅಸಾಧ್ಯ. ವಿದ್ಯಾರ್ಥಿಗಳಿಗೆ ಅಧ್ಯಯಕ್ಕೆ ಸಹಾಯಕವಾಗಲಿ ಎಂಬ ಕಾರಣಕ್ಕೆ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ. ಪ್ರಾರಂಭಿಕ ಹಂತವಾಗಿ ಐ- ಫೆಲ್ ಟವರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ತಾಜ್ ಮಹಲ್, ಚೀನಾ ಮಹಾಗೋಡೆ, ಈಜಿಫ್ಟ್‌ನ ಪಿರಾಮಿಡ್ ಮುಂತಾದವುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆಲವು ದಿನಗಳಲ್ಲಿ ಇವುಗಳು ಪೂರ್ಣಗೊಳ್ಳಲಿದ್ದು ವಿಶ್ವದ ಏಳು ಅದ್ಭುತಗಳನ್ನು ಮಂಗಳೂರಿನಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ.

ಮಂಗಳೂರಿನಲ್ಲಿ ವಿಶ್ವದ ಅದ್ಭುತಗಳ ಮಾದರಿ ನಿರ್ಮಾಣ

ಮಂಗಳೂರಿನಲ್ಲಿ ವಿಶ್ವದ ಅದ್ಭುತಗಳ ಮಾದರಿ ನಿರ್ಮಾಣ

ತಾಜ್ ಮಹಲ್, ಚೀನಾ ಮಹಾಗೋಡೆ, ಈಜಿಫ್ಟ್‌ನ ಪಿರಾಮಿಡ್ ಮುಂತಾದ ವಿಶ್ವದ ಏಳು ಅದ್ಭುತಗಳನ್ನು ನೋಡಲು ಮಂಗಳೂರಿಗೆ ಭೇಟಿ ನೀಡಬಹುದು. ಏಳು ಅದ್ಭುತಗಳನ್ನು ಮಂಗಳೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಯೋಜನೆ

ಜಿಲ್ಲಾಧಿಕಾರಿಗಳ ಯೋಜನೆ

ವಿಶ್ವ ಮತ್ತು ದೇಶದ ವಿಶೇಷ ಪ್ರವಾಸಿ ತಾಣಗಳ ಮಾದರಿಯನ್ನು ಪಿಲಿಕುಳದಲ್ಲಿ ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಆಲೋಚನೆಯಂತೆ ಈ ಮಾದರಿಗಳು ನಿರ್ಮಾಣವಾಗುತ್ತಿವೆ.

ಐ- ಫೆಲ್ ಟವರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ

ಐ- ಫೆಲ್ ಟವರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ

ಸುಮಾರು ಒಂದು ತಿಂಗಳಿನಿಂದ 50 ಅಡಿ ಎತ್ತರದ ಐ- ಫೆಲ್ ಟವರ್ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಮದ್ರಾಸ್‌ನ ಶ್ರೀನಿವಾಸ್ ನೇತೃತ್ವದ ತಂಡ ಇದನ್ನು ನಿರ್ಮಿಸುತ್ತಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಟವರ್‌ಗೆ ಮಂಗಳೂರಿನ ಇಬ್ಬರು ದಾನಿಗಳು ಪ್ರಾಯೋಜಕತ್ವ ವಹಿಸಲು ಮುಂದೆ ಬಂದಿದ್ದಾರೆ.

ವಿದ್ಯಾರ್ಥಿಗಳಿಗೆ ಸಹಾಯ

ವಿದ್ಯಾರ್ಥಿಗಳಿಗೆ ಸಹಾಯ

ನಿಸರ್ಗಧಾಮದಲ್ಲಿ ಸುಮಾರು 30ಲಕ್ಷ ರೂ. ವೆಚ್ಚದಲ್ಲಿ ಇಂಟರ್ ಪ್ರೇಟೆಷನ್ ಸೆಂಟರ್ ನಿರ್ಮಾಣವಾಗಿದೆ. ಈ ಸೆಂಟರ್ ಉದ್ಯಾನವನದಲ್ಲಿ ಶಿಕ್ಷಕರು - ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸಲು ಮತ್ತು ಕಾರ್ಯಾಗಾರ ನಡೆಸಲು ಸಹಕಾರಿಯಾಗಲಿದೆ.

ಒಂದು ದಿನ ಕಳೆಯುವಷ್ಟು ಪ್ರವಾಸಿ ತಾಣಗಳು

ಒಂದು ದಿನ ಕಳೆಯುವಷ್ಟು ಪ್ರವಾಸಿ ತಾಣಗಳು

ಪಿಲಿಕುಳ ನಿಸರ್ಗಧಾಮದಲ್ಲಿ ಉದ್ಯಾನವನ, ವಿಜ್ಞಾನ ಸೆಂಟರ್, ಪಾರಂಪರಿಕ ಗ್ರಾಮ, ಗುತ್ತಿನ ಮನೆ ಸೇರಿದಂತೆ ದಿನವಿಡೀ ವೀಕ್ಷಣೆ ಮಾಡಬಹುದಾದಷ್ಟು ಪ್ರವಾಸಿ ತಾಣಗಳಿವೆ.

English summary
Seven Wonders of the World could be seen together in Pilikula Nisargadhama, Mangaluru soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X