6 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ಬಾಲಕ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada
ಮಂಗಳೂರು, ಫೆಬ್ರವರಿ 16 : ಈತನ ವಯಸ್ಸು 14. ಹೆಚ್ಚಿನ ಮಕ್ಕಳು ಈ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಾ ಆಟವಾಡುವ ಯೋಚನೆ ಮಾಡುತ್ತಾರೆ. ಆದರೆ ಈ ಹುಡುಗ ಆ ರೀತಿ ಯೋಚಿಸಲಿಲ್ಲ.

ಹೌದು. ಇಷ್ಟೊಂದು ಪೀಠಿಕೆ ಕೊಡುವುದಕ್ಕೆ ಕಾರಣನೂ ಇದೆ. ಅದನ್ನ ಕೇಳಿದರೆ ನೀವೇ ಶಾಕ್ ಆಗುತ್ತೀರಾ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ನೆಟ್ಟಣ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬುವವರ ಪುತ್ರ ಮುಹಮ್ಮದ್ ಸಾಲಿಂ ತನ್ನ 14 ನೇ ವಯಸ್ಸಿನಲ್ಲಿ ಕುರ್ ಆನ್ ಕಂಠಪಾಠ ಮಾಡಿ ಎಲ್ಲರನ್ನ ಹುಬ್ಬೇರಿಸಿದ್ದಾನೆ.[ಕುರಾನ್ ನಲ್ಲಿ 11ನೇ ವರ್ಷಕ್ಕೆ ಪದವಿ ಪಡೆದ ಸಚಿವ ಯು.ಟಿ ಖಾದರ್ ಪುತ್ರಿ!]

Wonder boy Salim from Mangaluru byhearts Quran in just 6 months

ಶಾಲೆಗೆ ಹೋಗುವುದರೊಂದಿಗೆ 6 ತಿಂಗಳಲ್ಲಿ ಈ ಹುಡುಗ ಕುರ್ ಆನ್ ಅನ್ನ ಸಂಪೂರ್ಣ ಕಂಠಪಾಠ ಮಾಡಿದ್ದಾನೆ. ಇದಕ್ಕೆ ಸಹಕಾರ ನೀಡಿದ್ದು ಪುತ್ತೂರು ತಾಲೂಕಿನ ಕುಂಬ್ರದಲ್ಲಿರುವ ಕೆಐಸಿಯ ಶಂಸುಲ್ ಉಲಮಾ ಹಿಫ್ಲುಲ್ ಖುರ್ಆನ್ ಸೆಂಟರ್. ಕುಂಬ್ರ ಸರಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಈತನ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

2016ರ ಜುಲೈ 15ಕ್ಕೆ ಕುರ್ ಆನ್ ಕಂಠಪಾಠ ಮಾಡಲು ಆರಂಭಿಸಿದ ಈ ಬಾಲಕ 2017ರ ಫೆಬ್ರವರಿ 8ಕ್ಕೆ ಕಂಠಪಾಠ ಪೂರ್ಣಗೊಳಿಸಿದ್ದಾನೆ. ಅಂದರೆ ಬರೀ ಆರು ತಿಂಗಳಲ್ಲಿ..[ಮೈಸೂರಿನಲ್ಲಿ ಸಿಕ್ಕ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದಲ್ಲ]

ಮಾಸಿಕ ರಜಾ ಹಾಗೂ ವಾರದ ರಜಾ ಕಳೆದರೆ ತಿಂಗಳಲ್ಲಿ ತರಗತಿ ನಡೆಯುವುದು ಬರೀ 23 ದಿನಗಳು ಮಾತ್ರ. ಅದರಲ್ಲೂ ದಸರಾದ 10 ದಿನಗಳ ರಜಾ ಮತ್ತು ಈದುಲ್ ಅಲ್ಹಾದ 8 ದಿನಗಳ ರಜಾ ಎಲ್ಲವನ್ನೂ ಕಳೆದರೆ ಈ ವಿದ್ಯಾರ್ಥಿಗೆ ಸಿಕ್ಕಿದ್ದು ಬರೀ 130 ದಿನಗಳು.

ಬೆಳಗ್ಗಿನಿಂದ ಸಂಜೆಯವರೆಗೆ ಶಾಲೆಗೆ ಹೋಗುವುದರಿಂದ ದಿನದಲ್ಲಿ ಹೆಚ್ಚೆಂದರೆ ಕುರ್ ಆನ್ ಅಧ್ಯಯನಕ್ಕೆ ಸಮಯ ಸಿಕ್ಕಿದ್ದು ಎರಡು ಗಂಟೆಗಳ ಸಮಯ. ಅಂದರೆ ಅಂದಾಜು 260 ಗಂಟೆಗಳು.

ಹಾಫಿಲ್ ಇನಾಯತುಲ್ಲಾಹ್ ಬಿಹಾರಿ ಎಂಬ ಮೇಷ್ಟ್ರು ನನ್ನ ಈ ಸಾಧನೆಯ ಹಿಂದಿರುವ ಪ್ರೇರಕ ಶಕ್ತಿ ಅಂತಾನೆ ಕುರ್ ಆನ್ ಕಂಠಪಾಠ ಮಾಡಿದ ಸಾಲಿಂ. ಈತನ ಈ ಸಾಧನೆ ಎಲ್ಲರಿಗೂ ಮಾದರಿಯೇ ಸರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 14-year-old Muhammad Salim from Puttur has byhearted holy Quran in just 6 months. The wonder boy is appreciated by everyone, achieved this under the tulelage of Hafil Inayatullah Bihari. 6 ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ಬಾಲಕ!
Please Wait while comments are loading...