ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವಕನ ಕತ್ತಿನ ಪಟ್ಟಿ ಹಿಡಿದು ಬಸ್ಸಿನಲ್ಲಿ ಸೀಟು ಗಿಟ್ಟಿಸಿಕೊಂಡ ಮಹಿಳೆ

|
Google Oneindia Kannada News

ಮಂಗಳೂರು, ನವೆಂಬರ್ 26: ಲೇಡಿಸ್ ಸೀಟ್ ನಲ್ಲಿ ಕುಳಿತಿರುವುದಕ್ಕೆ ಮಹಿಳೆಯೊಬ್ಬರು ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ದೆಹಲಿ ಮೆಟ್ರೋದಲ್ಲಿ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆದೆಹಲಿ ಮೆಟ್ರೋದಲ್ಲಿ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆ

ತುಂಬಿದ ಸರ್ಕಾರಿ ಬಸ್ ನಲ್ಲಿ ಈ ಹೈಡ್ರಾಮ ನಡೆದಿದ್ದು ಯುವಕನೋರ್ವ ಸೀಟ್ ಇಲ್ಲದೆ ಮಹಿಳೆಯರಿಗೆ ಮೀಸಲಾಗಿದ್ದ ಸೀಟ್ ನಲ್ಲಿ ಕೂತಿದ್ದ. ಮಹಿಳೆಯರು ನಿಂತುಕೊಂಡೇ ಇದ್ದರೂ ಯುವಕ ಮಾತ್ರ ಸೀಟ್ ಬಿಟ್ಟು ಎದ್ದೇಳಿಲ್ಲ. ಇದನ್ನು ಕಂಡ ಮಹಿಳೆಯೊಬ್ಬರು ಯುವಕನ ವಿರುದ್ಧ ಆರ್ಭಟಿಸಿದ್ದಾರೆ. ಸೀಟು ಬಿಟ್ಟು ಕೊಡುವಂತೆ ಯುವಕನ ವಿರುದ್ದ ಕೂಗಾಡಿದ್ದಾರೆ.

Woman manhandles man for occupying ladies’ seat in bus in Dakshina Kannada

ಮಹಿಳೆಯರಿಗೆ ಮೀಸಲಿದ್ದ ಸೀಟನ್ನು ಬಿಟ್ಟು ಹಲವಾರು ಮಹಿಳೆಯರು ಇತರ ಸೀಟುಗಳಲ್ಲಿ ಕುಳಿತುಕೊಂಡಿದ್ದರು. ಅದನ್ನು ಪ್ರಶ್ನಿಸಿದ ಯುವಕ ತಾನು ಕುಳಿತ ಸೀಟಿನಿಂದ ಎದ್ದಿರಲಿಲ್ಲ. ಇತರ ಸೀಟಿನಲ್ಲಿ ಕುಳಿತುಕೊಂಡ ಮಹಿಳೆಯರು ಸೀಟು ಬಿಟ್ಟು ಕೊಡುವಂತೆ ಯುವಕ ತಾಕೀತು ಮಾಡಿದ್ದಾನೆ. ಯುವಕನಿಗೆ ಬಸ್ಸಿನಲ್ಲಿದ್ದ ಇತರ ಪುರುಷರೂ ಸಾಥ್ ನೀಡಿದ್ದಾರೆ.

ಈ ವೇಳೆ ಏಕಾಏಕಿಯಾಗಿ ರೌದ್ರಾವತಾರ ತೋರಿದ ಮಹಿಳೆಯ ವಿರುದ್ದ ಯುವಕನೂ ತಿರುಗಿಬಿದ್ದಿದ್ದು ಬಸ್ ನೊಳಗೆಯೇ ಇಬ್ಬರ ಕಚ್ಚಾಟ ನಡೆದಿದೆ. ಈ ಸಂದರ್ಭ ಯುವಕನ ವಿರುದ್ದ ಕೋಪಗೊಂಡ ಮಹಿಳೆ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ್ದಾರೆ. ಸೀಟಿಗಾಗಿ ಮಹಿಳೆಯ ಹೈಡ್ರಾಮ ಕಂಡು ದಂಗಾದ ಯುವಕ ಕೊನೆಗೆ ಗತಿಯಿಲ್ಲದೆ ಸೀಟು ಬಿಟ್ಟು ಎದ್ದು ಹೋಗಿದ್ದಾನೆ.

Woman manhandles man for occupying ladies’ seat in bus in Dakshina Kannada

ಬಸ್ ನಲ್ಲಿದ್ದವರೆಲ್ಲಾ ಇಬ್ಬರ ರಂಪಾಟಕ್ಕೆ ಮೂಕ ಪ್ರೇಕ್ಷಕರಾಗಿದ್ದು, ಪುಕ್ಕಟೆ ಮನರಂಜನೆ ತೆಗೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೀಟಿಗಾಗಿ ನಡೆದ ಈ ಜಗಳದ ವಿಡಿಯೋ ಸಖತ್ ವೈರಲ್ ಆಗಿದ್ದು ನ್ಯಾಯ , ಅನ್ಯಾಯ, ಹಕ್ಕು, ಸಮಾನತೆಗಳ ಬಗ್ಗೆ ಚರ್ಚೆ ಆರಂಭಗೊಂಡಿದೆ.

English summary
A woman manhandled a man by grabbing his collar when he refused to vacate the seat reserved for ladies in the bus. The incident took place in a KSRTC bus. The video of this has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X