ಮಂಗಳೂರು: ಮಹಿಳೆಗೆ ಕಾರು ಗುದ್ದಿ ಅವಾಚ್ಯವಾಗಿ ನಿಂದಿಸಿದ ಅಭಯ್ ಚಂದ್ರ

Posted By:
Subscribe to Oneindia Kannada

ಮಂಗಳೂರು, ಜುಲೈ 22: ಸಾರ್ವಜನಿಕ ಜೀವನದಲ್ಲಿ ರೋಷಾವೇಶ ಪ್ರದರ್ಶಿಸಿ ಸುದ್ದಿಯಾಗುವ ಮಾಜಿ ಸಚಿವ ಅಭಯ ಚಂದ್ರ ಜೈನ್ ಅವರು ಈಗ ಮತ್ತೊಮ್ಮೆ ಅಂಥದ್ದೇ ಘಟನೆಯಿಂದ ಸುದ್ದಿಯಾಗಿದ್ದಾರೆ.

ಕಾರಿನಲ್ಲಿ ವೇಗವಾಗಿ ಬಂದು ಮುಸ್ಲಿಂ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಆಕೆಯನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಜೈನ್. ಈ ಘಟನೆ ಶನಿವಾರ (ಜುಲೈ 22) ನಡೆದಿದ್ದು, ನೊಂದ ಮಹಿಳೆ ಬಜ್ಪೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Woman Files Case against MLA Jain for Rude goondagiri behaviour after his Car Hits her

ಘಟನೆಯ ವಿವರ: ಬಜ್ಪೆ ಸಮೀಪದ ಕಿನ್ನಿಪದವು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜೈನಾಬು (48) ಎಂಬ ಮಹಿಳೆಗೆ ಅಭಯಚಂದ್ರರ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜೈನಾಬು ಚರಂಡಿಗೆ ಹೊಗಿ ಬಿದ್ದಿದ್ದಾರೆ.

ತಮ್ಮಿಂದಾದ ತಪ್ಪಿಗೆ, ಕನಿಷ್ಠ ಪಕ್ಷ ಕಾರಿನಿಂದ ಇಳಿದು ಆ ಜೈನಾಬು ಅವರನ್ನು ಎಬ್ಬಿಸುವ ಸೌಜನ್ಯವನ್ನೂ ತೋರದ ಜೈನ್, ಕಾರಿನಲ್ಲೇ ಕೂತು ನಿಷ್ಕರುಣೆ ಮೆರೆದಿದ್ದಾರೆ. ಚರಂಡಿಯಿಂದ ಬಿದ್ದೆದ್ದು ಬಂದ ಮಹಿಳೆ, ಸಾವಧಾನದಿಂದ ಕಾರು ಚಲಾಯಿಸಬಾರದೇ ಎಂದು ಕೇಳಿದ್ದಾರೆ.

ಇದರಿಂದ ರೊಚ್ಚಿಗೆದ್ದ ಅವರು, ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ಮತ್ತೆ ಮಹಿಳೆಯನ್ನು ತಳ್ಳಿದ್ದಾರೆ. ಇದರಿಂದಾಗಿ ಮಹಿಳೆಗೆ ಮತ್ತಷ್ಟು ಗಾಯಗಳಾಗಿವೆ. ಇದೀಗ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಮಹಿಳೆ ಬಜ್ಪೆ ಪೊಲೀಸ್​​ ಠಾಣೆಯಲ್ಲಿ ಅಭಯಚಂದ್ರ ಜೈನ್ ಮತ್ತು ಅವರ ಕಾರು ಚಾಲಕನ ವಿರುದ್ದ ದೂರು ದಾಖಲಿಸಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Woman Files complaint against MLA Abhayachandra Jain for Rude behaviour after his car hits that woman called Zainab. When she questioned, Abhay Chandra Jain again pushed her into a gutter. A case has been filed in Bajpe police station and police are investigating.
Please Wait while comments are loading...