ಕೋಳಿ ಅಂಕದ ಚಟ ವಿರೋಧಿಸಿದ ಹೆಂಡತಿಯ ತಲೆ ಒಡೆದ ಭೂಪ

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 13 : ಕೋಳಿ ಅಂಕಕ್ಕೆ ಹೋಗಿ ಜೂಜಾಡುವುದನ್ನು ವಿರೋಧಿಸಿದ ಪತ್ನಿಗೆ ಪತಿರಾಯ ಕುರ್ಚಿಯಿಂದಲೇ ಹಲ್ಲೆ ಮಾಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ವನಿತಾ ಎಂದು ಗುರುತಿಸಲಾಗಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವನಿತಾ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವನಿತಾ ಪತಿ ಅಚ್ಯುತನಿಗೆ ಕೋಳಿ ಅಂಕಕ್ಕೆ ಹೋಗುವ ಚಾಳಿಯಿದ್ದು, ಪ್ರತಿ ದಿನ ಜಿಲ್ಲೆಯಲ್ಲಿ ಕೋಳಿ ಅಂಕ ಎಲ್ಲೇ ನಡೆದರೂ ಅಲ್ಲಿಗೆ ಹೋಗಿ ಜೂಜಾಡುವುದು ಈತನ ಕೆಲಸವಾಗಿತ್ತು. ಅದಕ್ಕಾಗಿ ಮನೆಯಲ್ಲಿದ್ದ ಸಾಮಗ್ರಿಗಳನ್ನು ಕೊಂಡೊಯ್ದು ಅಡವಿಟ್ಟು, ಜೂಜಾಡಿ ಬರುತ್ತಿದ್ದ.

ಇತ್ತೀಚೆಗೆ ಪತ್ನಿ ವನಿತಾಳ ಚಿನ್ನವನ್ನೂ ಕೋಳಿ ಅಂಕದ ಜೂಜಿಗಾಗಿ ಅಡವಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಡುವಂತೆ ಪತಿ ಅಚ್ಯುತ್ ನಲ್ಲಿ ವನಿತಾ ಕೇಳಿದ್ದಾರೆ. ಇದರಿಂದ ಸಿಟ್ಟಾದ ಆತ ಕುರ್ಚಿಯಿಂದಲೇ ವನಿತಾ ತಲೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ತಲೆಗೆ ಗಂಭೀರ ಗಾಯವಾದ ವನಿತಾ ಕೊಕ್ಕಡದ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿಂದ ಔಷಧಿಗಳನ್ನು ಪಡೆದು, ಮನೆಗೆ ತೆರಳುವ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ದಾರಿಯಲ್ಲೇ ಬಿದ್ದಿದ್ದರು. ಆ ಸಂದರ್ಭದಲ್ಲಿ ಸ್ಥಳೀಯರು ಆಕೆಯನ್ನು ಆಂಬ್ಯುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vanitha- woman from Kokkada, Belthangady taluk assaulted by husband Achutha for opposing gambling (cock fight). Currently she is admitted in Puttur hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ