ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುತಾಲಿಕ್ ಗೆ ಹಿಂದೂ ಧರ್ಮದ ಪಾರುಪತ್ಯ ಕೊಟ್ಟಿಲ್ಲ: ಸಚಿವ ರೈ

|
Google Oneindia Kannada News

ಮಂಗಳೂರು, ಅಕ್ಟೋಬರ್ 9: ಪ್ರಮೋದ್ ಮುತಾಲಿಕ್ ಒಬ್ಬ ದಾರಿಹೋಕ. ಆತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಕಿಡಿ ಕಾರಿದರು.

ಭಾರತ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದ ಪ್ರಮೋದ್ ಮುತಾಲಿಕ್ಭಾರತ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದ ಪ್ರಮೋದ್ ಮುತಾಲಿಕ್

ಪ್ರತಿ ಹಿಂದೂ ಕುಟುಂಬ ರಕ್ಷಣೆಗೆ ತಲವಾರ್ ಹೊಂದಿರಬೇಕು ಎಂಬ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ವಿರುದ್ಧ ಇಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಗೆ ಯಾರು ಹಿಂದೂ ಧರ್ಮದ ಪಾರುಪತ್ಯ ಕೊಟ್ಟಿಲ್ಲ. ಹಿಂದೂ ಧರ್ಮದ ಬಗ್ಗೆ ಪ್ರಮೋದ್ ಮುತಾಲಿಕ್ ಅಂಥವರಿಂದ ಉಪದೇಶ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

Who gives leadership of Hindus to Muthalik?: Minister Rai

ಚಕ್ರವರ್ತಿ ಸೂಲಿಬೆಲೆ ಬಗ್ಗೆ ಹೀಯಾಳಿಸಿ ನಾನು ಮಾತನಾಡಿಲ್ಲ ಎಂದು ಸಮಜಾಯಿಷಿ ನೀಡಿದ ರೈ, ಹೀಯಾಳಿಸಿ ಮಾತನಾಡಿದ್ದರೆ ಸಾಕ್ಷ್ಯ ಕೊಡಿ. ಜನರು ಏನು ತಪ್ಪು ಮಾಡಿದರೂ ಅದಕ್ಕೆ ನಾನು ಜವಾಬ್ದಾರನಲ್ಲ. ಚಕ್ರವರ್ತಿ ಸೂಲಿಬೆಲೆ ಬಗೆಗಿನ ನನ್ನ ಹೇಳಿಕೆಗೆ ಪಶ್ಚಾತ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸೂಲಿಬೆಲೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ರಮಾನಾಥ್ ರೈಸೂಲಿಬೆಲೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ರಮಾನಾಥ್ ರೈ

ಬಿಜೆಪಿಯು ರಾಡಿಕಲ್ಸ್ ಗಳ ಕೂಟ. ಅದರಲ್ಲಿ ಯಾರೂ ಸಂಭಾವಿತರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಧೈರ್ಯ ಕಳೆದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನ ಬೆಂಬಲ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಕಂಗೆಟ್ಟಿದ್ದಾರೆ. ಜಿಲ್ಲೆಯಲ್ಲಿ ಆರೆಸ್ಸೆಸ್ ಹಾಗೂ ಎಸ್ ಡಿಪಿಐ ನಡುವೆ ಘರ್ಷಣೆ ನಡೆಯುತ್ತಿದೆ. ಈ ಪರಿಣಾಮ ಜಿಲ್ಲೆಯಲ್ಲಿ ದುಷ್ಕೃತ್ಯಗಳು ನಡೆಯುತ್ತಿವೆ ಎಂದರು.

English summary
Who gives leadership of Hindus to Muthalik, asked by Dakshina Kannada minister in charge B.Ramanath Rai in Mangaluru on Monday. He replies to Sri Rama Sene chief Pramod Muthalik talwar remark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X