ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 'ಕಾಯಕಲ್ಪ' ಪ್ರಶಸ್ತಿ ಗರಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 17 : ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿ ಲಭಿಸಿದೆ. ಸ್ವತ್ಛ ಭಾರತ ಅಭಿಯಾನದಡಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಯಕಲ್ಪ ಯೋಜನೆ ಅನುಷ್ಠಾನಗೊಂಡಿದೆ. ಕರ್ನಾಟಕ 20 ಜಿಲ್ಲಾ ಆಸ್ಪತ್ರೆಗಳಲ್ಲಿ 2015-2016ನೇ ಸಾಲಿನಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ವೆನ್ಲಾಕ್ ಸರ್ಕರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಮಟ್ಟದ ಕಾಯಕಲ್ಪ ಅವಾರ್ಡ್‌ ನಾಮಿನೇಶನ್‌ ಸಮಿತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನಾ ಸಮಿತಿ ಮೌಲ್ಯ ಮಾಪನೆಯ ನಿಯಮಾನುಸಾರ ಆಸ್ಪತ್ರೆಯ ಆಂತರಿಕ ಸಮಿತಿ ಪ್ರಥಮವಾಗಿ ಯೋಜನೆಯಲ್ಲಿ ಭಾಗವಹಿಸಲು ಸಿದ್ಧಗೊಂಡಿತ್ತು. [ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 3ನೇ ಸ್ಥಾನ]

wenlock

ಆಸ್ಪತ್ರೆಯ ಆಂತರಿಕ ಸಮಿತಿ ಪ್ರಥಮವಾಗಿ ಮೌಲ್ಯಧಿಮಾಪನದಲ್ಲಿ ಮೊದಲ ಸ್ಥಾನ ಪಡೆಯುವ ಪ್ರಯತ್ನ ನಡೆಸಿತು. ದ್ವಿತೀಯ ಹಂತದಲ್ಲಿ ರಾಷ್ಟ್ರೀಯ ಯೋಜನಾ ಸಮಿತಿ ನಿಗದಿಪಡಿಸಿದ ಅಂತರ್‌ ಜಿಲ್ಲಾ ಮೌಲ್ಯಧಿಮಾಪನ ಸಮಿತಿ ಗುಪ್ತವಾಗಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. [ಜನಸೇವೆಗೆ ಕಂಕಣಬದ್ಧವಾದ 108 ಆರೋಗ್ಯ ಕವಚ ವಾಹನ]

ಈ ಹಂತದಲ್ಲೂ ಆಸ್ಪತ್ರೆ ಪ್ರಥಮ ಸ್ಥಾನ ಪಡೆಯಿತು.ಈ ವರದಿ ಆಧಾರದ ಮೇಲೆ 2015ರ ಸೆ. 28ರಂದು ರಾಜ್ಯಮಟ್ಟದ ಬಾಹ್ಯ ಮೌಲ್ಯ ಮಾಪನ ಸಮಿತಿ ಆಸ್ಪತ್ರೆಗೆ ಭೇಟಿ ನೀಡಿ, ಪ್ರತಿ ವಿಭಾಗಗಳನ್ನು ಪರಿಶೀಲಿಸಿತು. ನಂತರ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಮಿತಿಗೆ ವರದಿ ಸಲ್ಲಿಸಿತು.

ಕರ್ನಾಟಕದ ರಾಜ್ಯಮಟ್ಟದಲ್ಲಿರುವ ಎಲ್ಲ 20 ಜಿಲ್ಲಾ ಆಸ್ಪತ್ರೆಗಳ ಪೈಕಿ ಸುಮಾರು 167 ವರ್ಷಗಳಷ್ಟು ಇತಿಹಾಸ ಇರುವ ಹಾಗೂ ರಾಜ್ಯದಲ್ಲೇ ಸ್ವಚ್ಛತೆ ಮತ್ತು ರೋಗಿಗಳ ಸೇವಾ ಕಾರ್ಯದಲ್ಲಿ ಗುಣಮಟ್ಟವನ್ನು ಪ್ರಥಮ ಸ್ಥಾನದಲ್ಲೇ ಕಾಯ್ದುಕೊಂಡು ಬಂದಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಹಳೇ ಕಟ್ಟಡದಲ್ಲಿದೆ ಎಂಬ ಕಾರಣಕ್ಕೆ 2 ಅಂಕಗಳನ್ನು ಕಡಿತಗೊಳಿಸಿದ್ದರಿಂದ ದ್ವಿತೀಯ ಸ್ಥಾನ ಪಡೆಯಬೇಕಾಯಿತು.

English summary
Mangaluru Wenlock district hospital has bagged the prestigious 'Kayakalpa' awards instituted by the central government for excellence by hospitals in all departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X