ವಧು ಆತ್ಮಹತ್ಯೆ ಮಾಡಿಕೊಂಡ ಎರಡು ದಿನದಲ್ಲಿಯೇ ವರ ನೇಣಿಗೆ ಶರಣು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ. 15 : ಇಬ್ಬರು ಸತಿಪತಿಗಳಾಗಿ ಸಂಸಾರ ನಡೆಸಬೇಕಿದ್ದ ಜೋಡಿಗಳು ಒಬ್ಬರಿಂದೊಬ್ಬರು ಸ್ಮಶಾನ ಸೇರಿದ್ದಾರೆ.

ಫೆಬ್ರವರಿ 13ರಂದು ಕಾಸರಗೋಡಿನ ಯುವಕನ ಜತೆ ಮದುವೆ ನಿಶ್ಚಯವಾಗಿದ್ದ ಮಂಗಳೂರಿನ ಯುವತಿ ನಂದಿತಾ ಫೆಬ್ರವರಿ. 8ರಂದು ಆತ್ಮಹತ್ಯೆ ಮಾಡಿಕೊಂಡ ಎರಡು ದಿನದಲ್ಲಿಯೇ ವರ ಚಂದ್ರಶೇಖರ್ (38) ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ.

ಚಂದ್ರಶೇಖರ್ ಜತೆ ನಂದಿತಾ ಮದುವೆ ನಿಶ್ಚಯವಾಗಿದ್ದು ಫೆಬ್ರವರಿ 13ರಂದು ಮದುವೆ ದಿನಾಂಕ ನಿಗದಿಯಾಗಿತ್ತು. ಆದರೆ, ಮದುವೆಗೂ ಮೊದಲು ಫೆಬ್ರವರಿ 8ರಂದು ನಂದಿತಾ ಆತ್ಮಹತ್ಯೆಗೆ ಶರಣಾಗಿದ್ದಳು.[ಗಂಡು ಸಲಿಂಗಕಾಮಿ ಎಂದು ವಧು ಆತ್ಮಹತ್ಯೆಗೆ ಶರಣಾದಳೇ?]

Week after bride commits suicide in Mangaluru now groom found hanging

ಘಟನೆ ವಿವರ: ಮಂಗಳೂರಿನ ನಾಗೋರಿಯ ಕೃಷ್ಣ ಎಂಬವರ ಮಗಳು ನಂದಿತಾ (26) ಎಂಬವರಿಗೆ ಕಾಸರಗೋಡಿನ ಚಂದ್ರಶೇಖರ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದು ಫೆಬ್ರವರಿ 13ರಂದು ಮದುವೆ ನಡೆಯಬೇಕಾಗಿತ್ತು.

ಆದರೆ, ಫೆಬ್ರವರಿ 8ರಂದು ಯುವತಿಯ ಮನೆಯವರು ಚಂದ್ರಶೇಖರ ಅವರ ಮನೆಗೆ ಮಾತುಕತೆಗಾಗಿ ತೆರಳಿದ್ದರು. ಆ ವೇಳೆ ಮನೆಯಲ್ಲಿ ನಂದಿತಾ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಮದುವೆಯಾಗಬೇಕಾಗಿದ್ದ ಯುವಕ ಚಂದ್ರಶೇಖರ್ ಮತ್ತು ನಂದಿತಾ ನಡುವೆ ನಡೆದ ಫೋನ್ ಮಾತುಕತೆಯಿಂದಲೇ ನಂದಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಯುವತಿಯ ಮನೆಯವರು ಆರೋಪ ಮಾಡಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೂಡಾ ಆರಂಭಿಸಿದ್ದರು. ಆದರೆ, ಇದೀಗ ಚಂದ್ರಶೇಖರ್ ಸ್ವತಃ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಚಂದ್ರಶೇಖರ್ ಫೆಬ್ರವರಿ 14ರ ರಾತ್ರಿ ಚೆಮ್ನಾಡಿಗೆ ಹೋಗುದಾಗಿ ಹೇಳಿ ಹೊರಟಿದ್ದರು. ಆದರೆ ಹಿಂತಿರುಗಿ ಮನೆಗೆ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದರು.

ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ಆದರೆ, ಫೆಬ್ರವರಿ 15ರಂದು ಚಂದ್ರಶೇಖರ್ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು ಬೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A week after a bride committed suicide at her residence in Mangaluru, the prospective groom too followed her, hanging himself at Chaliangod here on Wednesday February 15. Chandrashekar was supposed to get married to Nandita (26), a resident of Nagori in Mangaluru, on February 13.
Please Wait while comments are loading...