ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಈಗಲೇ ನೀರಿಲ್ಲ, ಇಂಚಾಂಡ ಎಂಚ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 22 : ಮಂಗಳೂರು ನಗರದ ಜನತೆಗೆ ಇನ್ನೂ 12 ದಿನಗಳಿಗೆ ಮಾತ್ರ ಕುಡಿಯುವ ನೀರು ಲಭ್ಯವಿದೆ. ಅದನ್ನೇ ಎರಡು ದಿನಕ್ಕೊಮ್ಮೆಯಂತೆ ನೀಡಿದರೆ 24 ದಿನಗಳ ವರೆಗೆ ಬಳಕೆ ಮಾಡಲು ಸಾಧ್ಯ. ಮೇ 15ರ ವೇಳೆಗೆ ಮಳೆ ಬಾರದಿದ್ದರೆ ನಗರದ ಜನರಿಗೆ ಕುಡಿಯಲು ಕಡಲ ನೀರೆ ಗತಿ.

ಈ ಬಾರಿ ಪ್ರತಿ ವರ್ಷದಷ್ಟು ಮಳೆಯಾಗಿಲ್ಲ. ಬಿಸಿಲ ಧಗೆ ಹೆಚ್ಚಾಗುತ್ತಿದೆ. ಮಳೆಗಾಲದಲ್ಲಿ ಶೇ 21 ಮಳೆ ಕೊರತೆಯಾದರೆ ಬೇಸಿಗೆಯಲ್ಲಿ ಶೇ 80 ರಷ್ಟು ಕಡಿಮೆ ಮಳೆಯಾಗಿದೆ. ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ವರೆಗೆ ಹತ್ತಾರು ಬಾರಿ ಅಲ್ಲಲ್ಲಿ ಮಳೆಯಾಗುತ್ತದೆ. ಆದರೆ, ಈ ಬಾರಿ ಕೇವಲ ಎರಡೋ ಮೂರೋ ಕಡೆಗಳಲ್ಲಿ ಮಳೆಯಾಗಿದೆ. [ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಿದೆ ಸರ್ಕಾರ]

drinking water

ನೇತ್ರಾವತಿ ಎಂದೋ ಬತ್ತಿದೆ. ಮಂಗಳೂರು ನಗರ ಜನತೆಗೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿದು 8 ಅಡಿಗೆ ತಲುಪಿದೆ. ನೇತ್ರಾವತಿಯ ಪ್ರಮುಖ ಉಪನದಿ ಕುಮಾರಧಾರವು ತನ್ನ ಅಬ್ಬರ ಕುಂದಿಸಿ ಎಷ್ಟೋ ತಿಂಗಳಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇನ್ನೂ ನಗರದ ನಿವಾಸಿಗಳ ಪಾಡು ದೇವರಿಗೆ ಪ್ರೀತಿ. [ಉಡುಪಿಯಲ್ಲೂ ನೀರಿಗೆ ಬರ, ಟ್ಯಾಂಕರ್ ಮೂಲಕ ನೀರು ಪೂರೈಕೆ]

ಅಲ್ಲೂ ನೀರಿಲ್ಲ : ಎತ್ತಿನಹೊಳೆಯಲ್ಲಿ 24 ಟಿಎಂಸಿ ನೀರು ಇದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇರುವುದು 9.55 ಟಿಎಂಸಿ ನೀರು . ಇದರಲ್ಲಿ ಅವಶ್ಯಕತೆಗೆ ಅನುಗುಣವಾಗಿ ಬಳಕೆಯಾದಾಗ ಉಳಿಯುವುದು ಕೇವಲ ೦.85 ಟಿಎಂಸಿ ನೀರು . ಇದಕ್ಕೆ ಸರಕಾರ ಖರ್ಚು ಮಾಡುವುದು 12,000 ಕೋಟಿ ರೂ.. [ನೀಲಕಂಠರಾಯನಗಡ್ಡಿ ವಾಸಿಗಳಿಗೆ ನೀರು ಎಂದೂ ಶಾಪ!]

ಜನರಿಗಷ್ಟೇ ಸಮಸ್ಯೆ ಇಲ್ಲ : ನೇತ್ರಾವತಿ ನದಿ ನೀರು ಮಂಗಳೂರಿಗೆ ಕುಡಿಯಲು ಮಾತ್ರ ಬಳಕೆಯಲ್ಲ. ತುಂಬೆಯಿಂದ ಮಂಗಳೂರಿಗೆ 36 ಎಂಜಿಡೀ (millions of gallons per day) ನೀರು ಸರಬರಾಜಾಗುತ್ತದೆ. ಎಂಎಸ್ಇ ಝಡ್ ಗೆ ಮೊದಲು 15 ಎಂಜಿಡೀ ನೀರು ಬಳಸಲು ಅನುಮತಿ ಸಿಕ್ಕಿತ್ತು. [ಬತ್ತಿದ ಕೃಷ್ಣೆ, ಜಮಖಂಡಿಯಲ್ಲಿ ಹನಿ ನೀರಿಗೂ ತತ್ವಾರ!]

ಅನಂತರ 30 ಎಂಜಿಡೀ ಸಾಮರ್ಥ್ಯದ ಪೈಪು ಅಳವಡಿಸಿ 28 ಎಂಜಿಡೀ ನೀರು ಬೇಕೆಂದು ಅರ್ಜಿ ಹಾಕಿದರು. ಎಂಆರ್‌ಪಿಎಲ್ 6 ಎಂಜಿಡೀ ಇಂದ ನೀರಿನ ಬೇಡಿಕೆ ಹೆಚ್ಚಿಸಿಕೊಂಡಿದೆ. ಈ ಎರಡು ಕಂಪೆನಿಗಳ ಅಣೆಕಟ್ಟಿನಿಂದ ಹೆಚ್ಚುವರಿಯಾದ ನೀರು ತುಂಬೆ ಅಣೆಕಟ್ಟಿಗೆ ಹೋಗಿ ನಗರವಾಸಿಗಳಿಗೆ ಕುಡಿಯಲು ದೊರೆಯುವುದು.

English summary
The Mangaluru City Corporation has decided to supply water once in two days following the scarcity of water in the Netravathi river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X