ಮಂಗಳೂರಲ್ಲಿ ತರಕಾರಿ, ಮಾಂಸ ಎರಡೂ ದುಬಾರಿ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜೂನ್ 09 : ಮಂಗಳೂರಿನಲ್ಲಿ ತರಕಾರಿ ಮತ್ತು ಹಣ್ಣುಗಳ ಬೆಲೆ ಏರಿಕೆಯಾಗಿದೆ. ಇದರಿಂದ ನಮಗೆ ನಷ್ಟವಿಲ್ಲ ಎಂದು ಮಾಂಸಾಹಾರಿಗಳು ಸಂತಸ ಪಡುವಂತಿಲ್ಲ. ಏಕೆಂದರೆ, ಕೋಳಿ ಮಾಂಸದ ಬೆಲೆಯೂ ಏರಿಕೆಯಾಗಿದೆ.

ಮಂಗಳೂರು ಮತ್ತು ಸುತ್ತ-ಮುತ್ತಲ ಪ್ರದೇಶದಲ್ಲಿ ಈ ಬಾರಿ ನೀರಿನ ಕೊರತೆ ಉಂಟಾಗಿತ್ತು. ಇದರಿಂದಾಗಿ ತರಕಾರಿ ಮತ್ತು ಸೊಪ್ಪುಗಳ ಬೆಲೆ ಏರಿಕೆಯಾಗಿದೆ. ಸೊಪ್ಪಿನ ಬೆಲೆ ದುಪ್ಪಟ್ಟು ಎನ್ನುವಷ್ಟು ಹೆಚ್ಚಾಗಿದೆ. ಭಾನುವಾರದಿಂದ ತರಕಾರಿ ದರ ಏರುತ್ತಲೇ ಇದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. [ಗಗನಕ್ಕೇರಿದ ತರಕಾರಿ ಬೆಲೆ ಇಳಿಯೋದ್ಯಾವಾಗ?]

vegetable

ತರಕಾರಿ ದರ : ಮೂರು ದಿನಗಳ ಹಿಂದೆ ಕೆಜಿಗೆ 70 ರೂ. ಇದ್ದ ಬೀನ್ಸ್ ದರ 80ಕ್ಕೆ ಏರಿಕೆಯಾಗಿದೆ. 50 ರೂ. ಇದ್ದ ಟೊಮೆಟೊ ಬೆಲೆ 80 ರೂ.ಗೆ ಹೆಚ್ಚಳವಾಗಿದೆ. ದಪ್ಪ ಮೆಣಸು 40 ರಿಂದ 70 ರೂ. ಆಗಿದೆ. ಸಾಂಬಾರ್ ಸೌತೆ ಕಾಯಿ 20 ರಿಂದ 25 ರೂ. ಗಳಿಗೆ ಜಿಗಿದಿದೆ. 35 ರೂ. ಇದ್ದ ಹೂ ಕೋಸು ದರ 45 ರೂ. ಆಗಿದೆ. [ಮಂಗಳೂರು : ತರಕಾರಿಗಿಂತ ಮೀನಿಗೆ ಬೇಡಿಕೆ ಹೆಚ್ಚು]

ಈ ನಡುವೆ ಕೋಳಿ ಮಾಂಸದ ಬೆಲೆ ಎರಡು ದಿನಗಳ ಹಿಂದೆ ಇದ್ದ ದರಕ್ಕಿಂತ 30 ರಿಂದ 35 ರೂ.ಗೆ ಹೆಚ್ಚಾಗಿದೆ. ಸದ್ಯ ಕೆಜಿಗೆ 180 ರೂ. ದರವಿದೆ. ಕೆಲವು ಹಣ್ಣುಗಳ ಬೆಲೆಗಳೂ ಹೆಚ್ಚಳವಾಗಿದ್ದು, ಈ ವಾರ ಬೆಲೆಗಳು ಇಳಿಯುವ ಸಾಧ್ಯತೆ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು. [ಹಣ್ಣು ತರಕಾರಿ ಬೇಕಾದ್ರೆ ಟೆರೆಸ್ ತೋಟಕ್ಕೆ ಬನ್ನಿ!]

ಮಳೆಯೇ ಕಾರಣ : ಮಂಗಳೂರು ಮತ್ತು ಸುತ್ತಮುತ್ತಲ ಭಾಗದಲ್ಲಿ ಈಗ ಮಳೆ ಆರಂಭವಾಗಿದೆ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಆಗಿರಲಿಲ್ಲ. ಇದರಿಂದಾಗಿ ಬಹಳಷ್ಟು ಕಡೆ ಸೊಪ್ಪು ತರಕಾರಿ ಬೆಳೆಯಲು ತೊಂದರೆಯಾಗಿತ್ತು. ಇದರ ಪರಿಣಾಮ ಪೂರೈಕೆ ಕಡಿಮೆಯಾಗಿದೆ. ಆದ್ದರಿಂದ ಬೆಲೆ ಹೆಚ್ಚಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vegetable prices in the Mangaluru city raised due to lesser availability. Price of chicken also increased Rs 30 to 35 compared to last week.
Please Wait while comments are loading...