ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದ ಮಾಂಸ ತ್ಯಾಜ್ಯ ಸುರಿಯುತ್ತಿದ್ದ ಐವರ ಬಂಧನ

By ಕಿರಣ್ ಸಿರ್ಸೀಕರ್
|
Google Oneindia Kannada News

ಮಂಗಳೂರು, ಜುಲೈ 14 : ಕೇರಳದ ಮಾಂಸ ತ್ಯಾಜ್ಯ ತಂದು ಪುತ್ತೂರು, ವಿಟ್ಲ ಪ್ರದೇಶದಲ್ಲಿ ಸುರಿದು ಪರಾರಿಯಾಗುತ್ತಿದ್ದ ತಂಡವನ್ನು ವಿಟ್ಲ ಪೋಲಿಸರು ಬಂಧಿಸಿದ್ದಾರೆ.

ಕೋಳಿ ಹಾಗೂ ಇನ್ನಿತರ ಮಾಂಸ ತ್ಯಾಜ್ಯ ತುಂಬಿದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ.

ಕೇರಳದ ಮಾಂಸ ತ್ಯಾಜ್ಯ ಮಾಫಿಯಾ ಪತ್ತೆ ಹಚ್ಚಿದ ಇರ್ದೆ ಗ್ರಾಮಸ್ಥರುಕೇರಳದ ಮಾಂಸ ತ್ಯಾಜ್ಯ ಮಾಫಿಯಾ ಪತ್ತೆ ಹಚ್ಚಿದ ಇರ್ದೆ ಗ್ರಾಮಸ್ಥರು

ಬಂಧಿತ ಆರೋಪಿಗಳನ್ನು ಪತ್ತೂರು ವಳಮೊಗರು ಗ್ರಾಮದ ಮಹಮ್ಮದ್ ರಫೀಕ್ (30), ಕೇರಳ ಕೋಯಿಕೋಡ್ ನಿವಾಸಿ ಅಹಮ್ಮದ್ ಗಜನಿ (34), ಕೇರಳ ಮಲಪರಂ ನಿವಾಸಿ ಸೌಫಿ (30), ಕೇರಳ ಕೋಯಿಕೋಡ್ ನಿವಾಸಿ ಮಸೂದ್ (25) , ಬಿಹಾರದ ಪೊಸಿಬಾಕಾ ನಿವಾಸಿ ಮಹಮ್ಮದ್ ಜಿಯಾವುಲ್ ಅನ್ಸಾರಿ (20) ಎಂದು ಗುರುತಿಸಲಾಗಿದೆ.

Waste from Kerala dumping in Puttur 5 arrested

ಕಳೆದ ಕೆಲವು ದಿನಗಳಿಂದ ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಟನ್ ಗಟ್ಟಲೆ ಕೋಳಿ ತ್ಯಾಜ್ಯ ಹಾಗೂ ಇತರ ಮಾಂಸದ ತ್ಯಾಜ್ಯಗಳನ್ನು ರಾತ್ರೋ ರಾತ್ರಿ ಬಂದು ಸುರಿದು ಪರಾರಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದವು .

ಈ ರೀತಿ ಮಾಂಸದ ತ್ಯಾಜ್ಯದ ಸುರಿದು ಪರಾರಿಯಾಗುವ ತಂಡವೊಂದನ್ನು ಪುತ್ತೂರಿನ ಇರ್ದೆ ಗ್ರಾಮಸ್ತರು ಮತ್ತು ಪಂಚಾಯತ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಕುರಿತು ವಿಟ್ಲ ಠಾಣೆಗೆ ಮಾಹಿತಿ ಕೂಡ ನೀಡಿದ್ದರು . ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಅದರಲ್ಲಿದ್ದ ಐವರನ್ನು ಬಂಧಿಸಿದ್ದಾರೆ.

ಕೇರಳದಿಂದ ತ್ಯಾಜ್ಯವನ್ನು ತಂದು ಕರ್ನಾಟಕದ ಹೆದ್ದಾರಿ ಬದಿಯಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ವಿಚಾರವನ್ನು ಕಿಡಿಗೇಡಿಗಳು ಬಾಯ್ಬಿಟ್ಟಿದ್ದಾರೆ. ಲಾರಿ ಹಾಗು ಕಾರಿನಲ್ಲಿ ಬಂದು ತ್ಯಾಜ್ಯವನ್ನು ವಿಲೇವಾರಿ ಮಾಡಿ ಹೋಗುತ್ತದ್ದ ವಿಚಾರ ಬೆಳೆಕಿಗೆ ಬಂದಿದೆ. ಸ್ಥಳೀಯ ಯುವಕರು ಕೂಡ ಇದರಲ್ಲಿ ಶಾಮೀಲಾಗಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

English summary
Angry villagers and Panchayath members of Irde village of Puttur seized cargo truck from Kerela that laden with Poultry waste. It is said that This poultry waste of Kerala dumped in near by forest area of Irde village . Connecting to this case Vitla police team arrested 5 accused .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X