ಜೇನು ನೊಣಗಳೊಂದಿಗೆ ಪುತ್ತೂರಿನ ಮಹಿಳೆಯ ಸ್ನೇಹ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 13: ಜೇನುತುಪ್ಪ ಪ್ರಕೃತಿಯಲ್ಲಿ ಸಿಗುವ ಅದ್ಭುತವಾದ ಔಷಧೀಯ ಗುಣವುಳ್ಳ ವಸ್ತು. ಅದನ್ನು ಅಮೃತವೆಂದು ಪರಿಗಣಿಸಲಾಗುತ್ತದೆ. ಜೇನು ಎಂದೊಡನೆ ಬಾಯಲ್ಲಿ ನೀರೂರುವುದು ಸಹಜ ಆದರೆ ಜೇನು ನೊಣ ನೋಡಿದೊಡನೆ ಮಾರು ದೂರ ಓಡುವವರೇ ಹೆಚ್ಚು .

ಕೃಷಿಕನೊಬ್ಬನ ಕರುಣಾಜನಕ ಪತ್ರ!

ಆದರೆ ದಕ್ಷಿಣ ಕನ್ನಡ ಜಿಲ್ಲೆ ಯ ಪುತ್ತೂರಿನ ಪೆನ್ನಾಜೆ ಎಂಬಲ್ಲಿನ ಮಹಿಳೆಯೊಬ್ಬರು ಜೇನು ಕೃಷಿಯನ್ನೇ ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ . ಇಷ್ಟೇ ಆಗಿದ್ದರೆ ಇದರಲ್ಲೇನು ವಿಶೇಷವಿಲ್ಲ ಬಿಡಿ.

ಮೊಬೈಲ್ ಆಪ್‌ ಮೂಲಕ ಬೆಳೆ ಕಟಾವು ಪ್ರಯೋಗ: ರೋಹಿಣಿ ಸಿಂಧೂರಿ

ಆದರೆ ಇವರು ಜೇನು ನೊಣಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಇವರೇ ಪೆರ್ನಾಜೆಯ ಪ್ರಗತಿಪರ ಕೃಷಿಕ ಕುಮಾರ್ ಅವರ ಪತ್ನಿ ಸೌಮ್ಯ. ಇವರು ತಮ್ಮ ಪತಿಯೊಡನೆ ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಅವುಗಳ ಜತೆ ಸ್ನೇಹವನ್ನು ಸಂಪಾದಿಸಿಕೊಂಡಿದ್ದಾರೆ.

ಮುಖದ ಮೇಲೆಲ್ಲಾ ಜೇನು

ಮುಖದ ಮೇಲೆಲ್ಲಾ ಜೇನು

ಹಲ್ಲಿ , ಜಿರಳೆ ಕಂಡಾಕ್ಷಣ ಬೆಚ್ಚಿ ಬೀಳುವ ಮಹಿಳೆಯರ ನಡುವೆ ಸೌಮ್ಯ ಪೆರ್ನಾಜೆ ಜೇನು ನೊಣಗಳನ್ನು ಪ್ರೀತಿಯಿಂದ ಸಲಹುತ್ತಾರೆ . "ಜೇನು ಕೃಷಿ ಒಂದು ಕಲೆ , ಜೇನು ನೊಣಗಳೊಂದಿಗೆ ಸ್ನೇಹ ಕೂಡ ಒಂದು ವಿಶಿಷ್ಟ ಅನುಭವ . ಅವು ತುಂಬಾ ಸಾಧು ಸ್ವಭಾವದವು," ಎಂದು ಹೇಳುವ ಸೌಮ್ಯ ಜೇನು ನೊಣಗಳನ್ನು ತಮ್ಮ ಮುಖದ ಮೇಲೆಲ್ಲ ಹರಡಿಕೊಳ್ಳುತ್ತಾರೆ .

ಜೇನು ಗಡ್ಡ

ಜೇನು ಗಡ್ಡ

ಸೌಮ್ಯ ಅವರ ಮುಖಕ್ಕೆ ಮುತ್ತಿಕ್ಕುವ ಜೇನ್ನೊಣಗಳು ಅವರಿಗೆ ಯಾವುದೇ ತೊಂದರೆ ನೀಡದೆ ಶಾಂತವಾಗಿಯೇ ವರ್ತಿಸುತ್ತವೆ. ಸೌಮ್ಯ ಅವರ ಮುಖದ ಮೇಲೆ ಬಂದು ಕೂರುವ ಜೇನು ನೊಣಗಳು ಗಡ್ಡದಂತೆ ಭಾಸವಾಗುತ್ತದೆ .

ಸೀಡ್ ಬಾಲ್ ಬಾಂಬ್ ಪ್ರಯೋಗಿಸುವುದು ಹೇಗೆ?

ಜೇನು ನೊಣಗಳೊಂದಿಗೆ ಸ್ನೇಹ

ಜೇನು ನೊಣಗಳೊಂದಿಗೆ ಸ್ನೇಹ

ಜೇನಿ ಗೋಸ್ಕರ ಜೇನುಗೂಡಿಗೆ ಬೆಂಕಿ ಹಾಕಿ ನಾಶ ಮಾಡಬೇಡಿ ಎಂದು ಹೇಳುವ ಸೌಮ್ಯ ಜೇನು ನೊಣಗಳೊಂದಿಗೆ ಸ್ನೇಹ ಬೆಳೆಸಿಕೊಂಡರೆ ಫಲೋತ್ಪತ್ತಿ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .

ಸಾಕಣೆದಾರರಿಗೆ ನೀಡುತ್ತಾರೆ ಮಾರ್ಗದರ್ಶನ

ಸಾಕಣೆದಾರರಿಗೆ ನೀಡುತ್ತಾರೆ ಮಾರ್ಗದರ್ಶನ

ಕೃಷಿಯೊಂದಿಗೆ ಜೇನು ಸಾಕಾಣಿಕೆ ಯಿಂದಲೂ ಈ ಕುಟುಂಬ ಪ್ರತಿ ವರ್ಷ ಸಾವಿರಾರು ರೂಪಾಯಿ ಲಾಭ ಗಳಿಸುತ್ತಿದೆ . ಜೇನು ಸಾಕಾಣಿಕೆಯ ಬಗ್ಗೆ ಆಸಕ್ತಿ ಇರುವವರಿಗೆ ಸೌಮ್ಯ ಹಾಗೂ ಕುಮಾರ್ ದಂಪತಿಗಳು ಜೇನು ಕೃಷಿಯ ಬಗ್ಗೆ ಮಾರ್ಗದರ್ಶನ ಕೂಡ ನೀಡುತ್ತಾರೆ . ಅಪಾಯಕಾರಿ ಎಂದು ಹೇಳಲಾಗುವ ಜೇನು ಗಳೊಂದಿಗೆ ಈ ಕೃಷಿ ಕುಟುಂಬ ಸ್ನೇಹ ಜೀವಿಗಳಂತೆ ಬದುಕುತ್ತಿದೆ .

Honey Therapies For Tiredness Or Weakness | Try This At Home | Oneindia Kannada
ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗುರಿ

ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗುರಿ

ಜೇನು ಗಳೊಂದಿಗೆ ಸ್ನೇಹ ವಿಚಾರದಲ್ಲಿ ಸೌಮ್ಯ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡುವ ಕನಸನ್ನು ಹೊಂದಿದ್ದಾರೆ. ತೊಟ್ಟಿಲು ತೂಗುವ ಕೈಗಳು ಜೇನ್ನೊಣಗಳನ್ನು ಸಲಹಬಲ್ಲವು ಎನ್ನುವುದನ್ನು ಸೌಮ್ಯ ಪೆರ್ನಾಜೆ ತೋರಿಸಿಕೊಟ್ಟಿದ್ದಾರೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sowmya from Puttur attracts thousands of bees to her face. With this Sowmya has also planned to enter the Limca book of records.
Please Wait while comments are loading...