ಪುತ್ತೂರು ವಿವೇಕಾನಂದ ವಿದ್ಯಾವರ್ದಕದಿಂದ 90.8 ಎಫ್ಎಂ ಆರಂಭ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 05 : ಯುವಕರ ಆದರ್ಶ ಪ್ರಾಯರಾದ ಸ್ವಾಮಿ ವಿವೇಕಾನಂದರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘ ಜನವರಿ 12ರಂದು ಸಮುದಾಯ ರೇಡಿಯೋ ಪಾಂಚಜನ್ಯ 90.8 ಎಫ್ಎಂ ಬಿಡುಗಡೆ ಮಾಡಲಿದೆ.

ಇದಲ್ಲದೆ ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರ ಒಂದು ದಿನದ ಉದ್ಯೋಗ ಮೇಳ ನಡೆಸಲಿದೆ ಮತ್ತು ಜನವರಿ 13 ರಂದು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಹೊಸ ಕಟ್ಟಡ ಉದ್ಘಾಟನೆ ಕೂಡಾ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್, ಅಲಿಖಿತ ಜ್ಞಾನ ಹರಡುವ ಸಲುವಾಗಿ ಹಾಗೂ ಜನಧ್ವನಿ ಸ್ಥಾಪನೆ. ಮಾತ್ರವಲ್ಲದೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳು, ರಾಷ್ಟ್ರೀಯತೆಯ ಇತ್ಯಾದಿಗಳ ಮೇಲೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ರೇಡಿಯೋ ಬಿಡುಗಡೆಯ ಮಾಡಲಾಗುತ್ತಿದೆ ಎಂದರು.

Vivekananda Vidyavardaka Sangha to launch Panchajanya 90.8FM on January 12

ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜು ರೆಕಾರ್ಡಿಂಗ್ ಸ್ಟುಡಿಯೋ , ಟ್ರಾನ್ಸ್ ಮೀಟರ್ ಬೂತ್ ಮತ್ತು ರೇಡಿಯೋ ಟವರ್ ಒಳಗೊಂಡಿರುತ್ತದೆ.

ಈ ಸಮುದಾಯ ರೇಡಿಯೋ ಶಿಕ್ಷಣ, ಕ್ರೀಡೆ, ವಿಜ್ಞಾನ, ಸಂಗೀತ, ತಂತ್ರಜ್ಞಾನ, ಕೃಷಿ, ಸಾಹಿತ್ಯ, ಹೈನುಗಾರಿಕೆ, ನಾಟಕ ಮತ್ತು ಇತರ ಸ್ಥಳೀಯ ಉತ್ಸವಗಳು ಹಾಗೂ ನೈಜ ಘಟನೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂದರು.

ಜ಼.13ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು ಸುಮಾರು 150ಕ್ಕೂ ಅಧಿಕ ಕಂಪನಿಗಳು ಆಗಮಿಸಲಿದ್ದು ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಆಸಕ್ತರು ನೋಂದಾಯಿಸಲು ಇ-ಮೇಲ್ ಅಥವಾ 8762837499 ಕರೆ ಮಾಡಬಹುದು. ಉದ್ಯೋಗ ಮೇಳದಲ್ಲಿ ವಿಪ್ರೋ, ಇನ್ಫೋಸಿಸ್, ಐಟಿಸಿ, ಬಿಗ್ ಬಜಾರ್, ವೋಲ್ವೋ, ಫ್ಲಿಪ್ ಕಾರ್ಟ್, ಅಂಬುಜಾ ಸಿಮೆಂಟ್, ಸೇಂಟ್ ಗೊಬೇನ್ ಮಣಿಪಾಲ ತಂತ್ರಜ್ಞಾನ, ಕೋಟಕ್ ಮಹೀಂದ್ರಾ ಕಂಪನಿಗಳು ಭಾಗವಹಿಸಲಿವೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Puttur Vivekananda Vidyavardaka Sangha is in the alacrity of observing the birth anniversary of youth icon Swami Vivekananda with the launch of community radio Panchajanya 90.8 FM on January 12.
Please Wait while comments are loading...