ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇಸಿಂಗ್ ಕಾರ್ ಅಭಿವೃದ್ಧಿ ಪಡಿಸಿದ ಮಂಗಳೂರಿನ ವಿದ್ಯಾರ್ಥಿಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 11: ಪುತ್ತೂರು ತಾಲೂಕಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳ ತಂಡವು ರೇಸಿಂಗ್ ಕಾರೊಂದನ್ನು ಅಭಿವೃದ್ದಿಪಡಿಸಿದೆ.

ಇದು ರಾಷ್ಟ್ರೀಯ ಮಟ್ಟದ ವಿನ್ಯಾಸ ಸ್ಪರ್ಧೆಯ ತಾಂತ್ರಿಕ ಪರೀಕ್ಷೆಯನ್ನು ಯಶಸ್ವಿಯಾಗಿದೆ. ಕೋಲ್ಕತಾ ಡೆಲ್ಟಾ ಇನ್ಕಾರ್ಪೊರೇಟೆಡ್ ಸಂಸ್ಥೆಯು ನಡೆಸಿದ 'ಎಂಡ್ಯೂರೊ ಸ್ಟೂಡೆಂಟ್ ಇಂಡಿಯಾ - 2017 ' ರಾಷ್ಟ್ರೀಯ ಸ್ಪರ್ಧೆಯ ತಾಂತ್ರಿಕ ಶರತ್ತುಗಳನ್ವಯ ಈ ವಾಹನವನ್ನು ಅಭಿವೃದ್ದಿಪಡಿಸಲಾಗಿತ್ತು. ಈ ವಾಹನದ ಒಟ್ಟು ವೆಚ್ಚ ರು 11 ಲಕ್ಷ ರೂಪಾಯಿ ಎನ್ನಲಾಗಿದೆ.[ಕಾರ್ ಮತ್ತು ಬೈಕ್ ರೇಸಿಂಗ್ ನೋಡಲು ಹೊಸೂರಿಗೆ ಬನ್ನಿ]

Vivekananda Engineering College students developed a racing car in puttur

30 ವಿದ್ಯಾರ್ಥಿಗಳನ್ನೊಳಗೊಂಡ ಈ ಕಾಲೇಜಿನ ರೇವನ್ ರೇಸಿಂಗ್ ತಂಡವು ತನ್ನ ಚೊಚ್ಚಲ ಪ್ರಯತ್ನದಲ್ಲೇ ದೇಶದ ಪ್ರತಿಷ್ಠಿತ ಕಾಲೇಜುಗಳೊಂದಿಗೆ ಸ್ಪರ್ಧಿಸಿ ಈ ಸಾಧನೆಯನ್ನು ಮಾಡಿದೆ. ಕೊಯಮತ್ತೂರಿನ ಜೀ ಡೀ ಉನ್ನತ ವಾಹನ ಚಾಲನಾ ಕೇಂದ್ರದಲ್ಲಿ ನಡೆದ ಅಂತಿಮ ಸುತ್ತಿನ ಪರೀಕ್ಷೆಯಲ್ಲಿ ಎಲ್ಲಾ ತಾಂತ್ರಿಕ ಶರತ್ತುಗಳನ್ನು ಪೂರೈಸಿ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ವರ್ಷ ನಡೆದ ಗೋಕಾರ್ಟಿಂಗ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಈ ತಂಡವು 7 ನೇ ಸ್ಥಾನವನ್ನು ಗಳಿಸಿದ್ದು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಶ್ಯಾಮ್ ಪ್ರಸಾದ್ ಮತ್ತು ಪ್ರೊ.ಶ್ರೀನಿವಾಸ್.ಎಮ್.ಕೆ ಮಾರ್ಗದರ್ಶನ ಮಾಡಿದ್ದರು.

English summary
Department of Mechanical Engineering students of Vivekananda Engineering College, Puttur taluk, students team has developed a racing car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X