ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬೈಕ್ ಕಳ್ಳರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 02 : ಬೈಕ್‌ಗಳನ್ನು ಕದ್ದು ಅಕ್ಕ-ಪಕ್ಕದ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವೊಂದು ವಿಟ್ಲ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಬಂಧಿತ ನಾಲ್ವರು ಆರೋಪಿಗಳಿಂದ 11 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳನ್ನು ಮನ್ಸೂರ್(19), ಶಬೀರ್ (19), ತೌಫಿಕ್ (22) ಹಾಗೂ ಮಜೀದ್ (25) ಎಂದು ಗುರುತಿಸಲಾಗಿದೆ. ಈ ತಂಡದ ಬಂಧನದಿಂದಾಗಿ ಒಟ್ಟು 11 ಬೈಕ್‌ ಕಳವು ಪ್ರಕರಣ ಬಹಿರಂಗವಾಗಿದೆ. ಬಂಧಿತ ಆರೋಪಿಗಳ ಪೈಕಿ ತೌಫಿಕ್ ಪತ್ರಿಕೋದ್ಯಮ ಕೋರ್ಸ್ ಮುಗಿಸಿದ್ದು, ಉನ್ನತ ವ್ಯಾಸಂಗಕ್ಕೆ ಸಿದ್ಧತೆ ನಡೆಸುತ್ತಿದ್ದ. [ಅಬ್ಬಬ್ಬಾ, ಎಂಥಾ ರೋಮಾಂಚನಕಾರಿ ಸ್ಟಂಟ್!]

 inter-state bike theft

ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದರು : ಮಂಗಳವಾರ ಸಂಜೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪೆರ್ಲ ಕಡೆಗೆ ಅತೀ ವೇಗವಾಗಿ ತೆರಳುತ್ತಿದ್ದ ಆರ್‌ ಎಕ್ಸ್‌ 100 ಬೈಕನ್ನು ತಡೆದು ನಿಲ್ಲಿಸಿದಾಗ ಸವಾರ ಮನ್ಸೂರ್ ಹಾಗೂ ಶಬೀರ್ ಇಬ್ಬರು ಪರಾರಿಯಾಗಲು ಯತ್ನಿಸಿದರು. [ಬೆಂಗಳೂರಲ್ಲಿ ಬಾಡಿಗೆ ಬೈಕ್ ಪಡೆದು ನಗರ ಸುತ್ತಾಡಿ]

ಬಳಿಕ ಪೊಲೀಸರ ತಂಡ ಅವರನ್ನು ಸುತ್ತುವರಿದು ವಿಚಾರಿಸಿದಾಗ ಅವರಲ್ಲಿ ಸಮರ್ಪಕ ದಾಖಲೆಗಳು ಇರಲಿಲ್ಲ. ಬಳಿಕ ವಿಟ್ಲ ಠಾಣಾ ವ್ಯಾಪ್ತಿಯ ಕುಕ್ಕರೆಬೆಟ್ಟು ಎಂಬಲ್ಲಿ ಕಳವು ಮಾಡಿದ ಬೈಕ್ ಇದಾಗಿದ್ದು, ಕೇರಳಕ್ಕೆ ಈ ಬೈಕ್ ಮಾರಾಟ ಮಾಡಲು ಹೊರಟಿದ್ದೆವು ಎಂದು ಅವರು ಒಪ್ಪಿಕೊಂಡಿದ್ದರು. ತಕ್ಷಣ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದರು. [ಅರಸ್ ಬೈಕ್ ಸಾಹಸಕ್ಕೆ ಸಾಕ್ಷಿಯಾದ ಮಂಗಳೂರಿಗರು]

ವಿಚಾರಣೆ ವೇಳೆ ಇಬ್ಬರು ಪುತ್ತೂರು ನಗರ, ಸುಳ್ಯ, ಬೆಳ್ತಂಗಡಿ, ಮಡಿಕೇರಿಯಲ್ಲಿ ಬೈಕ್ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. 5 ಬೈಕ್‌ಗಳನ್ನು ಮಾರಾಟ ಮಾಡಲು ಕಂಬಳಬೆಟ್ಟು ಪರಿಸರದ ಪಾಳು ಬಿದ್ದ ಮನೆಯೊಂದರಲ್ಲಿ ಅಡಗಿಸಿಟ್ಟಿರುವುದಾಗಿ ಹಾಗೂ 5 ಬೈಕ್‌ಗಳನ್ನು ಕಾಸರಗೋಡು ಬಸ್ ನಿಲ್ದಾಣದ ಬಳಿಯ ಬಿಗ್ ಬಜಾರ್ ಹಿಂಬದಿಯಲ್ಲಿ ನಿಲ್ಲಿಸಿರುವುದಾಗಿ ಹೇಳಿದ್ದರು. ಅಲ್ಲಿಗೆ ದಾಳಿ ನಡೆಸಿದ ಪೊಲೀಸರ ತಂಡ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು : ಬಂಧಿತರ ಪೈಕಿ ಶಬೀರ್ ಎಂಬಾತ ವಿದ್ಯಾರ್ಥಿಯಾಗಿದ್ದು, ಮಂಗಳೂರಿನ ಕಾಲೇಜೊಂದರಲ್ಲಿ ಡಿಪ್ಲೋಮ ವ್ಯಾಸಂಗ ಮಾಡುತ್ತಿದ್ದಾನೆ. ತೌಫಿಕ್ ಪತ್ರಿಕೋದ್ಯಮ ಕೋರ್ಸ್ ಮುಗಿಸಿದ್ದು, ಉನ್ನತ ವ್ಯಾಸಂಗಕ್ಕೆ ಸಿದ್ಧತೆಯಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru : Vittal police busted inter-state gangs involved in bike lifting by arresting 4 persons and recovering 11 stolen bikes.
Please Wait while comments are loading...