ಮೂವರಿಗೆ ಮರುಜೀವ ನೀಡಿದ ಮಂಗಳೂರಿನ ಯುವಕ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 25 : ಮೆದುಳು ನಿಷ್ಕ್ರಿಯಗೊಂಡಿದ್ದ ಮಂಗಳೂರಿನ ಯುವಕನೊಬ್ಬ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಮರುಜೀವ ನೀಡಿದ್ದಾನೆ. ಗುರುವಾರ ಬೆಳಗ್ಗೆ ಅಂಗಾಂಗಗಳನ್ನು ಮಂಗಳೂರಿನಿಂದ ಬೆಂಗಳೂರಿಗೆ ಸಾಗಣೆ ಮಾಡಲಾಯಿತು.

ಮಂಜೇಶ್ವರ ನಿವಾಸಿ ವಿನೀತ್ ರಾಜ್ (21) ಅಂಗಾಂಗಗಳನ್ನು ದಾನ ಮಾಡಿದ ಯುವಕ. ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಿನೀತ್ ಅವರನ್ನು ನಗರದ ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಆದ್ದರಿಂದ ಪೋಷಕರು ಅಂಗಾಂಗ ದಾನ ಮಾಡುವ ನಿರ್ಧಾರವನ್ನು ಕೈಗೊಂಡರು. [ಮೂವರಿಗೆ ಮರುಜೀವ ನೀಡಿದರು]

vineeth raj

ವಿನೀತ್‌ನ ಕಿಡ್ನಿ, ಯಕೃತ್ ಮುಂತಾದ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಯಕೃತ್ ಕಸಿ ಮಾಡಲಾಗುತ್ತದೆ. ಎ.ಜೆ.ಆಸ್ಪತ್ರೆಯಲ್ಲಿರುವ ವ್ಯಕ್ತಿಗೆ ಕಿಡ್ನಿ ಜೋಡಣೆ ಮಾಡಲಾಗುತ್ತದೆ. ಬೆಂಗಳೂರಿನಿಂದ ಆಗಮಿಸಿದ್ದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿ, ಯಕೃತ್ ತೆಗೆದುಕೊಂಡು ಹೋಗಿದ್ದಾರೆ. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]

ಎ.ಜೆ.ಆಸ್ಪತ್ರೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂಗಾಂಗ ಸಾಗಣೆ ಮಾಡಲು ಗ್ರೀನ್ ಕಾರಿಡಾರ್ ಮೂಲಕ ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಲಾಗಿತ್ತು. ಮಂಗಳೂರು ಸಂಚಾರಿ ಪೊಲೀಸರು ಅಂಬ್ಯುಲೆನ್ಸ್ ಸಾಗಲು ವ್ಯವಸ್ಥೆ ಮಾಡಿಕೊಟ್ಟರು. [ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್]

manaluru

ಮಂಗಳೂರಿನ ಮಂಜೇಶ್ವರದ ನಿವಾಸಿ ಕೃಷ್ಣಮೂಲ್ಯ ಹಾಗು ಗೀತಾ ದಂಪತಿಯ ಪುತ್ರ ವಿನೀತ್ ರಾಜ್. ಎಲೆಕ್ಟ್ರಿಷಿಯನ್ ಆಗಿದ್ದರು. ಮಂಗಳವಾರ ಕಟ್ಟಡವೊಂದರ 2ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟಕ್ಕೆ ತೆರಳುವಾಗ ಕಾಲು ಜಾರಿ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದರು.

3ನೇ ಬಾರಿ ದಾನ : ಮಂಗಳೂರಿನಿಂದ ಬೆಂಗಳೂರಿಗೆ ಮೂರನೇ ಬಾರಿ ಅಂಗಾಂಗಗಳನ್ನು ದಾನ ಮಾಡಲಾಗುತ್ತಿದೆ. 2015ರ ಏಪ್ರಿಲ್ 13ರಂದು ಮೊದಲ ಬಾರಿಗೆ ಮಂಗಳೂರಿನಿಂದ ಬೆಂಗಳೂರಿಗೆ ಅಂಗಾಂಗಗಳನ್ನು ತೆಗೆದುಕೊಂಡು ಹೋಗಲಾಗಿತ್ತು.

ಹೃದಯ, ಅಂಗಾಂಗ ದಾನದ ನೆನಪುಗಳು
* 2014ರಲ್ಲಿ ಎರಡು ಬಾರಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಹೃದಯ ಸಾಗಣೆ
* 2015ರ ಫೆ. 28ರಂದು ಬೆಂಗಳೂರಿನಿಂದ ಹೈದರಾಬಾದ್‌ ಜೀವಂತ ಹೃದಯವನ್ನು ಸಾಗಣೆ
* 2015ರ ಏ.13ರಂದು ಮಂಗಳೂರಿನಿಂದ ಜೀವಂತ ಹೃದಯ ಬೆಂಗಳೂರಿಗೆ ಸಾಗಣೆ
* 2015ರ ಜುಲೈ 23ರಂದು ಚೇತನ್ ಹೃದಯವನ್ನು ದಾನ ಮಾಡಲಾಗಿತ್ತು
* 2015ರ ಜುಲೈ 26ರಂದು ಇಳವರಸನ್ ಹೃದಯ ದಾನ ಮಾಡಿದ್ದರು
* 2016ರ ಫೆಬ್ರವರಿಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಅಂಗಾಂಗ ಸಾಗಣೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The liver belonging to a brain-dead patient from a Mangaluru city based AJ hospital was transported to Bengaluru on Thursday, morning. Vineeth Raj U (21) is the person whose vitals organs were donated.
Please Wait while comments are loading...