ಇಬ್ಬರ ಬಾಳಿಗೆ ಬೆಳಕಾದ ವಿನಾಯಕ ಬಾಳಿಗ ತಾಯಿ ಕಣ್ಣು!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 19 : ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ದಿ.ಜಯಂತಿ ಬಾಳಿಗ ಅವರ ಕಣ್ಣುಗಳು ಈಗ ಇಬ್ಬರ ಬಾಳಲ್ಲಿ ಬೆಳಕಾಗಿವೆ.

ಮಂಗಳೂರಿನ ಫಾ. ಮುಲ್ಲರ್ಸ್ ಆಸ್ಪತ್ರೆಯಲ್ಲಿ ಜಯಂತಿ ಬಾಳಿಗರ ಕಾರ್ನಿಯಾಗಳನ್ನು ಇಬ್ಬರು ವ್ಯಕ್ತಿಗಳಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ.[ಜಯಂತಿ ಬಾಳಿಗ ಮೃತದೇಹದ ಎದುರು ಪ್ರತಿಜ್ಞೆ]

Vinayak Baliga’s mother’s eyes gives vision to 2 people

ಈ ಮೂಲಕ ತನ್ನ ಏಕೈಕ ಮಗನ ಕೊಲೆಗಡುಕರಿಗೆ ಶಿಕ್ಷೆಯಾಗಬೇಕೆಂದು ಕೊನೆ ಉಸಿರಿನ ತನಕವೂ ಆಶಿಸಿದ ಆ ತಾಯಿ ಇಬ್ಬರ ಬದುಕಿನ ಕತ್ತಲೆಯನ್ನು ದೂರಗೊಳಿಸಿ ಬೆಳಕನ್ನು ಬೆಳಗಿದ್ದಾರೆ.[ಪುತ್ರ ಶೋಕಂ ನಿರಂತರಂ, ಬಾಳಿಗ ಅವರ ತಾಯಿ ನಿಧನ]

ಮಗನನ್ನು ಕಳೆದುಕೊಂಡ ಚಿಂತೆಯಲ್ಲೇ ದಿನ ದೂಡುತ್ತಿದ್ದ ಬಾಳಿಗರ ತಾಯಿ ಜಯಂತಿ ಬಾಳಿಗ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜನವರಿ 8ರಂದು ಸಾವನ್ನಪ್ಪಿದ್ದರು.

Vinayak Baliga’s mother’s eyes gives vision to 2 people

ಈ ಸಂದರ್ಭದಲ್ಲಿ ಅವರ ಕುಟುಂಬದವರು ಮೃತ ಜಯಂತಿಯವರ ಕಣ್ಣುಗಳನ್ನು ದಾನ ಮಾಡಿ ತಮ್ಮ ನೋವಿನಲ್ಲೂ ಮಾನವೀಯತೆ ಮೆರೆದಿದ್ದರು.

ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಆರಂಭದಿಂದಲೂ ನ್ಯಾಯಕ್ಕಾಗಿ ಹೊರಾಟ ನಡೆಸುತ್ತಿರುವ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಸೇರಿದಂತೆ ನೆರೆದಿದ್ದ ಹಲವು ಪ್ರಗತಿಪರ ಸಂಘಟನೆಗಳ ಸದಸ್ಯರು ವಿನಾಯಕ ಬಾಳಿಗಾ ಸಾವಿಗೆ ಅಂತಿಮ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆಂದು ಶಪಥ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
RTI activist sVinayak Baliga’s mother’s eyes gives vision to 2 peoples in father muller hospital Mangaluru.Jayanti Baliga (81) breathed her last on January 8 this year.
Please Wait while comments are loading...