ಜಯಂತಿ ಬಾಳಿಗ ಮೃತದೇಹದ ಎದುರು ಪ್ರತಿಜ್ಞೆ

Posted By: Ramesh
Subscribe to Oneindia Kannada

ಮಂಗಳೂರು, ಜನವರಿ 9 : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಜಯಂತಿ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಜನರು ವಿನಾಯಕ ಬಾಳಿಗಾ ಕೊಲೆಗಾರರಿಗೆ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರಿಸುವುದಾಗಿ ಜಯಂತಿ ಬಾಳಿಗಾರ ಮೃತದೇಹದ ಎದುರೇ ಪ್ರತಿಜ್ಞೆ ಮಾಡಿದರು.

ಜಯಂತಿ ಬಾಳಿಗ (81) ಅವರ ಅಂತ್ಯ ಸಂಸ್ಕಾರ ಸೋಮವಾರ ಬೆಳಗ್ಗೆಬೋಳೂರಿನ ಚಿತಾಗಾರದಲ್ಲಿ ನೆರವೇರಿತು. ಅಲ್ಲದೇ ಇದೇ ವೇಳೆ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಮಗನ ಕೊಲೆಯ ಕೊರಗಿನಲ್ಲೇ ಜಯಂತಿ ಬಾಳಿಗಾ ಮೃತಪಟ್ಟಿದ್ದಾರೆ. ಅವರು ಕಣ್ಣುಗಳನ್ನು ದಾನ ಮಾಡಲಾಗಿದೆ.[ಪುತ್ರ ಶೋಕಂ ನಿರಂತರಂ, ಬಾಳಿಗ ಅವರ ತಾಯಿ ನಿಧನ]

Vinayak Baliga's mother Jayanti Baliga donate eyes after her death

ಅವರ ಕಣ್ಣಾದರೂ ಮಗನ ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗುವುದನ್ನು ನೋಡಲಿ. ವಿನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದರು.

ಶನಿವಾರದಂದು ಜಯಂತಿ ಅವರು ಅಸೌಖ್ಯದಿಂದ ಕುಸಿದು ಬಿದ್ದು ತಲೆಗೆ ಗಂಭೀರ ಏಟು ಬಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ತಮ್ಮ ಕೊನೆ ಉಸಿರೆಳೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Slain RTI activist's Vinayak Baliga's mother Jayanti Baliga (81) donated her eyes after her death.
Please Wait while comments are loading...