ಬಾಳಿಗಾ ಹತ್ಯೆ: ಜೈಲಿನಿಂದ ಹೊರ ಬಂದ ನರೇಶ್ ಸ್ವಾಗತಿಸಿದ ಚಕ್ರವರ್ತಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆ. 19 : ಆರ್ .ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಮುಖ್ಯ ಆರೋಪಿ ನರೇಶ್ ಶೆಣೈ ಸೋಮವಾರ ಸಂಜೆ ಜೈಲಿನಿಂದ ಹೊರ ಬಂದಿದ್ದಾರೆ. ಶೆಣೈ ಅವರನ್ನು ಚಕ್ರವರ್ತಿ ಸೂಲಿಬೆಲೆ ಮುಂತಾದವರು ಬರ ಮಾಡಿಕೊಂಡರು.

ಬಾಳಿಗ ಕೊಲೆ ಸಂಬಂಧ ನರೇಶ್ ಶೆಣೈ ಅವರನ್ನು ಉಡುಪಿಯಲ್ಲಿ ಜೂನ್ 26ರಂದು ಬಂಧಿಸಲಗಿತ್ತು. ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆಗಸ್ಟ್ 9 ರಂದು ಅರ್ಜಿ ವಜಾಗೊಂಡಿತ್ತು. ಗುರುವಾರ(ಸೆಪ್ಟೆಂಬರ್ 15) ದಂದು ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.[ಬಾಳಿಗ ಹತ್ಯೆ : 770 ಪುಟಗಳ ಚಾರ್ಜ್ ಶೀಟ್]

Vinayak Baliga murder case: Accused Naresh Shenoy released on bail

2 ಲಕ್ಷ ರೂ.ಗಳ ಬಾಂಡ್, ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ. ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಬೇಕು, ಸಾಕ್ಷಿಗಳನ್ನು ನಾಶ ಮಾಡಬಾರದು ಎಂದು ಷರತ್ತು ವಿಧಿಸಲಾಗಿದೆ. ಸೋಮವಾರ ಸಂಜೆ ಆದೇಶ ಪತ್ರ ಮಂಗಳೂರಿನ ಜೈಲು ಅಧೀಕ್ಷಕರಿಗೆ ತಲುಪಿದ್ದರಿಂದ ಶೆಣೈರನ್ನು ಬಿಡುಗಡೆಗೊಳಿಸಲಾಯಿತು.[ನರೇಶ್ ಶೆಣೈಗೆ ಜಾಮೀನು]

ಜೈಲಿನಿಂದ ಹೊರಬಂದ ಬಾಳಿಗ ಹತ್ಯೆ ಆರೋಪಿ ನರೇಶ್ ಶೆಣೈ ಅವರನ್ನು ಹಿಂದೂ ಪರ ಚಿಂತಕ, ಭಾಷಣಗಾರ ಚಕ್ರವರ್ತಿ ಸೂಲಿಬೆಲೆ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್ ಸಹಿತ ಇತರರು ಬರಮಾಡಿಕೊಂಡರು. ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಜೈಲು ಆವರಣದ ಒಳಗಡೆ ಹೋಗಿದ್ದರೆ, ಹನುಮಂತ ಕಾಮತ್ ಜೈಲು ಆವರಣದ ಎದುರುಗಡೆ ಉಪಸ್ಥಿತರಿದ್ದರು. ಅನಂತರ ಅವರನ್ನು ಕಾರಿನಲ್ಲಿ ಕರೆದೊಯ್ಯಲಾಯಿತು.

Vinayak Baliga murder case: Accused Naresh Shenoy released on bail

2016ರ ಮಾರ್ಚ್ 21ರಂದು ಮಂಗಳೂರಿನ ಕೊಡಿಯಾಲ್‌ ಬೈಲ್ ಬಳಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ನಡೆದಿತ್ತು. ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದರು. ಎರಡು ಬಾರಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿತ್ತು.

ನಂತರ ಹೆಜಮಾಡಿಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಆಗಸ್ಟ್ 9ರಂದು ಜಾಮೀನು ಅರ್ಜಿ ತಿರಸ್ಕೃತಗೊಂಡಿತು. ಆದರೆ, ಹೈಕೋರ್ಟಿನಲ್ಲಿ ಷರತ್ತುಬದ್ಧ ಜಾಮೀನು ಮಂಜೂರಾದ್ದರಿಂದ ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Naresh Shenoy the main accused in RTI activist Vinayak Baliga murder case realeased on bail at 7.30 pm today(September 19 2016) Naresh shenoyy was granted conditional bail by the High Court on September 15. Chakravarty Sulibele and others received Naresh.
Please Wait while comments are loading...