ಮೂಡಬಿದಿರೆಯಲ್ಲಿ ವಿಜಯೋತ್ಸವ ಕಂಬಳಕ್ಕೆ ಹರಿದು ಬಂದ ಜನಸಾಗರ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 12: ಜಾನಪದ ಕ್ರೀಡೆ ಕಂಬಳ ಕರಾವಳಿಯ ಅವಿಭಾಜ್ಯ ಅಂಗ. ಹಲವು ಅಡ್ಡಿ, ಆತಂಕ, ಹೋರಾಟಗಳ ನಡುವೆ ಹೊಯ್ದಾಡಿದ ಕರಾವಳಿಯ ಜಾನಪದ ಕ್ರೀಡೆ ಕಂಬಳ ಈಗ ಮತ್ತೆ ಆರಂಭಗೊಂಡಿದೆ . ಸರಿ ಸುಮಾರು 1 ವರ್ಷ 8 ತಿಂಗಳ ಬಳಿಕ ಕರಾವಳಿಯಲ್ಲಿ ಕಂಬಳದ ಸಂಭ್ರಮ ಕಳೆಕಟ್ಟಿದೆ .

ಕಂಬಳ ಆಚರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನಿನ್ನೆ ಸಂಜೆ ಚಾಲನೆ ನೀಡಲಾಯಿತು. ನಿಷೇಧದ ಕಾರ್ಮೋಡ ಕವಿದು ಕವುಚಿ ಮಲಗಿದ್ದ ಕರಾವಳಿಯ ಕಂಬಳ ಈ ಮೂಲಕ ಮತ್ತೆ ತನ್ನ ಗತವೈಭವಕ್ಕೆ ಮರಳಿತು. ಕಂಬಳದ ಹೊಸ ಅಧ್ಯಾಯ ಮತ್ತೆ ತೆರೆದುಕೊಂಡಿತು.

ವಿಜಯೋತ್ಸವ ಕಂಬಳ

ವಿಜಯೋತ್ಸವ ಕಂಬಳ

ರಾಜ್ಯ ಸರಕಾರದ ಅಧ್ಯಾದೇಶಕ್ಕೆ ಸುಪ್ರಿಂ ಕೋರ್ಟ್ ತಡೆ ನೀಡಲು ನಿರಾಕರಿಸಿ ಕಂಬಳಕ್ಕೆ ಅನುವು ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕಂಬಳ ಅಭಿಮಾನಿಗಳು ಮೂಡಬಿದಿರೆಯಲ್ಲಿ ಆರಂಭಗೊಂಡ ಈ ಜೋಡುಕೆರೆ ಕಂಬಳವನ್ನು ವಿಜಯೋತ್ಸವದ ಕಂಬಳವಾಗಿ ಆಚರಿಸುತ್ತಿದ್ದಾರೆ.

140 ಜತೆ ಕೋಣಗಳು ಭಾಗಿ

140 ಜತೆ ಕೋಣಗಳು ಭಾಗಿ

ಮೂಡಬಿದಿರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ನಡೆದ ಈ ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಸರಿ ಸುಮಾರು 140 ಕ್ಕೂ ಹೆಚ್ಚು ಜತೆ ಕೋಣಗಳು ಭಾಗವಹಿಸಿದವು. ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ತಂಡಗಳು ಈ ಜೋಡುಕೆರೆ ಕಂಬಳದಲ್ಲಿ ಭಾಗವಹಿಸಿದ್ದವು .

ಎಲ್ಲಾ ವಿಭಾಗಗಳಲ್ಲಿ ಸ್ಪರ್ಧೆ

ಎಲ್ಲಾ ವಿಭಾಗಗಳಲ್ಲಿ ಸ್ಪರ್ಧೆ

ಕೊಂಬು, ಕಹಳೆ, ಚಂಡೆಯ ಝೇಂಕಾರದೊಂದಿಗೆ ಕನೆ ಹಲಿಗೆಯ ಕೋಣಗಳು ನಿಶಾನೆಯತ್ತ ನೀರು ಹಾಯಿಸುತ್ತಿದ್ದಂತೆ ಕಂಬಳಾಭಿಮಾನಿಗಳ ಘೋಷಣೆ ಮುಗಿಲುಮುಟ್ಟಿತ್ತು. ಹಗ್ಗ ಹಿರಿಯ, ಹಗ್ಗ ಕಿರಿಯ, ಕನೆ ಹಲಿಗೆ, ನೇಗಿಲು ಹಿರಿಯ , ನೇಗಿಲು ಕಿರಿಯ ಹೀಗೆ ಎಲ್ಲಾ ವಿಭಾಗಗಳಲ್ಲೂ ಸ್ಪರ್ಧೆಗಳನ್ನು ಇಡಲಾಗಿತ್ತು.

ಸಾವಿರಾರು ಅಭಿಮಾನಿಗಳು ಭಾಗಿ

ಸಾವಿರಾರು ಅಭಿಮಾನಿಗಳು ಭಾಗಿ

ನಿನ್ನೆ ರಾತ್ರಿ ಹೊನಲು ಬೆಳಕಿನಲ್ಲಿ ಕಂಬಳ ಸ್ಪರ್ಧೆಗಳು ನಡೆದಿದ್ದು ಇಂದು ಕೂಡ ಮುಂದುವರೆದಿದೆ. ನಿನ್ನೆ ಸಂಜೆಯಿಂದ ಸಹಸ್ರಾರು ಕಂಬಳಾಭಿಮಾನಿಗಳು, ಗಣ್ಯರು ಆಗಮಿಸಿ ಕಂಬಳದ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ .

ತುಂಬಿ ತುಳುಕಿದ ಗ್ಯಾಲರಿ

ತುಂಬಿ ತುಳುಕಿದ ಗ್ಯಾಲರಿ

ಮಹಿಳೆಯರ ಗ್ಯಾಲರಿ ಸೇರಿದಂತೆ ಕಂಬಳ ಗದ್ದೆಯ ಇಕ್ಕಲೆಗಳಲ್ಲಿ ಇರುವ ಗ್ಯಾಲರಿ ತುಂಬಿ ತುಳುಕುತ್ತಿದ್ದು ಒಟ್ಟಿನಲ್ಲಿ ಒಂದೂವರೆ ವರ್ಷದ ಬಳಿಕ ನಡೆಯುತ್ತಿರುವ ಕಂಬಳವನ್ನು ತುಳುವರಿಗೆ ತುಳುವರೇ ಸಂಭ್ರಮಿಸುತ್ತಿದ್ದಾರೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 15th annual Kambala organized by the Koti-Chennaya Jodu Kere Kamabala Samiti, Moodabidri, is being conducted along with the 'Vijayotsava' celebration at Ontikatte, Kadalakere on Saturday November 11.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ