ಕಂಬಳಕ್ಕೆ ದೈವೀ ಸ್ಥಾನ ನೀಡಿದ ನಳಿನ್ ಕುಮಾರ್ ಕಟೀಲ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಮಾರ್ಚ್,14: ಕಂಬಳ ತುಳುನಾಡಿನ ಪರಂಪರೆಯ ಸಂಕೇತ, ಜನತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಂಬಳ ದೈವೀ ಕ್ರೀಡೆಯಾಗಿದ್ದು, ಇದು ರಾಷ್ಟ್ರೀಯ ಕ್ರೀಡೆ ಆಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಉಪ್ಪಿನಂಗಡಿಯಲ್ಲಿ ನಡೆದ ವಿಜಯ-ವಿಕ್ರಮ ಹೊನಲು ಬೆಳಕಿನ ಜೋಡೂಕೆರೆ ಬಯಲು ಕಂಬಳ ಸಮಾರಂಭದಲ್ಲಿ ಮಾತನಾಡಿದ ಅವರು,' ಕಂಬಳಕ್ಕೆ ದೇವರು, ದೈವದ ಕಟ್ಟು ಪಾಡುಗಳಿವೆ. ಅದು ದೇವರ ಜೊತೆಗಿನ ಆಟವಾಗಿದ್ದು , ಕಂಬಳ ಕ್ರೀಡೆ ಬಗ್ಗೆ ರೈತಾಪಿ ವರ್ಗಕ್ಕೆ ಮಹತ್ವದ ಗೌರವ, ಪ್ರೀತಿ ಇದೆ ಎಂದರು.[ಇತಿಹಾಸದ ಪುಟ ಸೇರಲಿದೆಯೆ ಮಂಗಳೂರು ಕಂಬಳ?]

Vijay-Vikrama Jodukere Kambala held in Uppinangady, Mangaluru

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಭೈರಪ್ಪ ಮಾತನಾಡಿ, 'ಕಂಬಳದಲ್ಲಿ ಪ್ರಾಣಿಗಳನ್ನು ಹಿಂಸಿಸಿಸುತ್ತಾರೆ ಎಂದು ಕೇಳಿದ್ದೆ, ಆದರೆ ಕಂಬಳವನ್ನು ವೀಕ್ಷಿಸಿದ್ದು ಇದೇ ಮೊದಲ ಬಾರಿ. ನನಗೆ ಇದೊಂದು ಕ್ರೀಡೆ ಎಂದೆನಿಸಿತೇ ವಿನಃ ಇದರಲ್ಲಿ ಯಾವುದೇ ಹಿಂಸೆ ಕಂಡು ಬಂದಿಲ್ಲ ಎಂದರು.[ಕಂಬಳಕ್ಕೆ ಪ್ರಾಣಿದಯಾ ಮಂಡಳಿಯಿಂದ ಮತ್ತೆ ಕಿರಿಕ್]

ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು, ಕಂಬಳ ತೀರ್ಪುಗಾರರ ಸಂಚಾಲಕ ಎಂ. ರಾಜೀವ್ ಶೆಟ್ಟಿ ಎಡ್ತೂರ್, ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಜಿಲ್ಲಾ ಕೇಂದ್ರ ಸಹಕಾರಿ ನಿರ್ದೇಶಕ ಶಶಿಕುಮಾರ್ ರೈ , ಮಂಗಳೂರು ಮೆಡಿಕಲ್ ಕಾಲೇಜು ಪಿ.ಆರ್.ಒ.ಪಿ.ಆರ್. ಶೆಟ್ಟಿ ಮಾತನಾಡಿದರು.[ಕಂಬಳ ಆಚರಣೆಗೆ ಹೈಕೋರ್ಟಿನಿಂದ ಗ್ರೀನ್ ಸಿಗ್ನಲ್]

ನೆಲ್ಯಾಡಿ ಎಲೈಟ್ ರಬ್ಬರ್ ಸಂಸ್ಥೆ ಮೂಲಕ ಯುಪಿ ವರ್ಗೀಸ್ ಪಡುಬಿದ್ರೆ ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಪಡ್ಯೋತ್ತು ವಿಶ್ವನಾಥ ಶೆಟ್ಟಿ , ಭಂಡಾರಿ ಸಮಾಜ ಮಹಾಮಂಡಲದ ಸದಾಶಿವ ಭಂಡಾರಿ, ಸಕಲೇಶಪುರ ಉದ್ಯಮಿಗಳಾದ ಪುಷ್ಪರಾಜ್ ಶೆಟ್ಟಿ, ರಮೇಶ್ ರೈ ಡಿಂಬ್ರೀ, ಗಂಗಾಧರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೇಶವ ಗೌಡ, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಣ ಗೌಡ ಕೋಡಿಂಬಡಿ, ತಣ್ಣೀರು ಪಂಥ ಗ್ರಾಪಂ ಅಧ್ಯಕ್ಷ ಜಯವಿಕ್ರಮ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada MP Nalin kumar kateel has participated to Uppinangady Vijaya-Vikrama Jodukere Kambala. This event done on Saturday
Please Wait while comments are loading...