ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ವೆಂಕಟೇಶ್ ಕಾಮತ್

|
Google Oneindia Kannada News

ಮಂಗಳೂರು, ಮೇ.8 : ಗ್ರೂಪ್ ಸ್ಟಡಿ, ಕಾಲೇಜ್ ಕೋಚಿಂಗ್ ಕ್ಲಾಸ್, ತಂದೆ-ತಾಯಿಯ ಶ್ರಮ ನನ್ನ ಸಾಧನೆಗೆ ಕಾರಣ ಎಂದು ವೆಂಕಟೇಶ್ ಕಾಮತ್ ಸಂತಸ ಹಂಚಿಕೊಂಡಿದ್ದಾರೆ. ಮಂಗಳೂರಿನ ಕೆನರಾ ಪಿಯು ಕಾಲೇಜಿನ ಕಾಮತ್ 594 ಅಂಕಗಳನ್ನು ಪಡೆದು ಪಿಸಿಎಂಇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಒನ್ ಇಂಡಿಯಾದೊಂದಿಗೆ ತನ್ನ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ವೆಂಕಟೇಶ್ ಕಾಮತ್, ಗ್ರೂಪ್ ಸ್ಟಡಿ, ಸರಿಯಾದ ತಯಾರಿ, ಕಾಲೇಜಿನ ಕೋಚಿಂಗ್ ಕ್ಲಾಸ್ ನಿಂದ ಇಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಪಿಯುಸಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು. [ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

venkatesh Kamath

ತಮ್ಮ ಉಪನ್ಯಾಸಕರೇ ನನಗೆ ಸ್ಪೂರ್ತಿ ಎಂದು ಹೇಳುವ ಕಾಮತ್, ಪ್ರತಿ ಹಂತದಲ್ಲೂ ಕಾಲೇಜಿನ ಪ್ರತಿಯೊಬ್ಬ ಉಪನ್ಯಾಸಕರು ತನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ನೆನಪು ಮಾಡಿಕೊಂಡರು. ಕಾಲೇಜಿನ ಅಧ್ಯಯನ ಹೊರತು ಪಡಿಸಿ Boscoss Tutorialsನಲ್ಲಿ ಕೋಚಿಂಗ್ ಪಡೆದಿದ್ದೆ ಎಂದು ಕಾಮತ್ ಹೇಳಿದರು. [ವೈದ್ಯಳಾಗುವ ಕನಸಿನ ವಸುಧಾ ರಾಜ್ಯಕ್ಕೆ ಪ್ರಥಮ]

ಯಾವುದೇ ವಿಷಯವು ಕಷ್ಟವಾಗಿರಲಿಲ್ಲ ಎಂದು ಹೇಳಿದ ಕಾಮತ್, ತಂದೆ-ತಾಯಿ ಇಷ್ಟು ಅಂಕ ಪಡೆಯಬೇಕೆಂದು ಯಾವುದೇ ಒತ್ತಡ ಹಾಕಿರಲಿಲ್ಲ. ನನ್ನ ಅಧ್ಯಯನಕ್ಕೆ ಅವರು ಅಗತ್ಯ ಬೆಂಬಲ ನೀಡಿದರು ಎಂದರು. [ಪಿಯು ಟಾಪರ್ ಪೂಜಾ ಬಾಳಿಗ ಸಂದರ್ಶನ]

ವೆಂಕಟೇಶ್ ಕಾಮತ್ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಗುರಿಹೊಂದಿದ್ದಾರೆ. ಅದರಲ್ಲೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಅವರ ಇಷ್ಟದ ವಿಷಯವಂತೆ. ನಮ್ಮ ಕಡೆಯಿಂದ ಕಾಮತ್ ಅವರ ಭವಿಷ್ಯಕ್ಕೆ ಆಲ್ ದಿ ಬೆಸ್ಟ್.

English summary
Canara PU College Mangalore student venkatesh Kamath has scored a remarkable total of 594 in six subjects, making him the first ranker in PCME stream. Venkatesh gave all credits to group study, preparations as a team, college coaching classes as the secrets of his success story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X