ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ತರಕಾರಿಗಿಂತ ಮೀನಿಗೆ ಬೇಡಿಕೆ ಹೆಚ್ಚು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ.31 : ಮಂಗಳೂರು ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣುಹಂಪಲು ದರದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಬೇಡಿಕೆ ಮತ್ತು ಖರೀದಿ ಪ್ರಕ್ರಿಯೆಗಳೂ ಚುರುಕಾಗದಿರುವುದು ವ್ಯಾಪಾರಿಗಳಿಗೆ ಆತಂಕ ಉಂಟುಮಾಡಿದೆ. ಮುಂದಿನ ವಾರದಿಂದ ತರಕಾರಿ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ತರಕಾರಿ ಬೆಲೆ ಮತ್ತಷ್ಟು ಕುಸಿತ ಕಂಡಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕಳೆದ ವಾರ 50 ರೂ.ಗಿಂತಲೂ ಮೇಲಿದ್ದ ಕೆಲವು ತರಕಾರಿ ಬೆಲೆಗಳು ಈ ವಾರಾಂತ್ಯಕ್ಕೆ 25-30 ರೂ.ಗಳಿಗೆ ಕುಸಿದಿವೆ.

vegetable

ಮುಂದಿನವಾರದಿಂದ ಮದುವೆ, ಭೂತ ಕೋಲದಂಥ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ತರಕಾರಿಗಳಿಗೆ ಬೇಡಿಕೆ ಹೆಚ್ಚಳವಾಗಲಿದೆ. ಆದ್ದರಿಂದ ಮುಂದಿನ ವಾರ ದರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಸ್ಥರು. [ಮಂಗಳೂರು : ತರಕಾರಿ ಬೆಲೆ ಕುಸಿತ, ಮಾಂಸಕ್ಕೆ ಬೇಡಿಕೆ]

ಟೊಮೆಟೋ ದರದಲ್ಲಿ ಕಡಿಮೆಯಾಗಿದೆ. ಬೀನ್ಸ್ 18 ರೂ.ಗೆ ಇಳಿದಿದೆ. ಈರುಳ್ಳಿ 22 ರೂ. ಗಳಲ್ಲಿ ಸ್ಥಿರವಾಗಿದೆ. ಕ್ಯಾರೆಟ್ 36 ರೂ.ಗೆ ಇಳಿದಿದ್ದರೆ, ಬೀಟ್‌ರೂಟ್ 20 ರೂ.ಗಳಿಗೆ ಮಾರಾಟವಾಗುತ್ತಿದೆ. ಸೌತೆ ಕಾಯಿ 10ರೂ., ಸುನಾಮಿ ಕುಂಬಳ 10 ರೂ., ಚೀನಿಕಾಯಿ 10 ರೂ., ಮೂಲಂಗಿ 14, ಅಲಸಂಡೆ 34, ಮೂಲಂಗಿ 14, ಗೆಣಸು 18 ರೂ.ಗಳಿಗೆ ಲಭ್ಯವಿದೆ. [ಮಂಗಳೂರು ಪಾಲಿಕೆ ವಿರುದ್ಧ ವಿನೂತನ ಪ್ರತಿಭಟನೆ]

ಗೆಣಸು 18 ರೂ. ಹಾಗಲಕಾಯಿ 24 ರೂ., ಬೆಂಡೆ 26, ಹೀರೆ 28 ರೂ.ಗೆ ಇಳಿಕೆಯಾಗಿದೆ. ನುಗ್ಗೆಕಾಯಿ ದರ ಮಾತ್ರ 100 ರೂ. ಇದೆ. ಬೀದಿ ವ್ಯಾಪಾರಿಗಳು ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ಅಲ್ಲಿ ತರಕಾರಿ ಖರೀದಿ ಮಾಡುವ ಜನರು ಮಾರುಕಟ್ಟೆಗಳಿಗೆ ಬರುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

mangaluru market

ಹಣ್ಣುಗಳಿಗೂ ಬೇಡಿಕೆ ಇಲ್ಲ : ಹಣ್ಣುಗಳ ಬೆಲೆ ಕಡಿಮೆಯಾದರೂ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿಲ್ಲ. ಕದಳಿ 35-40 ರೂ., ಮೂಸಂಬಿ 40-45, ಕಿತ್ತಳೆ 30-35, ಪಪ್ಪಾಯಿ 20-25, ಸಪೋಟ 30-40 ರೂ. ದ್ರಾಕ್ಷಿ 60-80 ರೂ.ಗಳಿಗೆ ಮಾರಾಟವಾಗುತ್ತಿದೆ.

ಮೀನು ದುಬಾರಿ : ಮೀನು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ. ಇದಕ್ಕೆ ಪೂರೈಕೆ ಕಡಿಮೆಯಾಗಿರುವುದು ಕಾರಣವಾಗಿದೆ. 100 ರೂ.ಗಳಿಗೆ 4 ಅಥವಾ 5 ಬಂಗಡೆ ಮೀನುಗಳು ಸಿಗುತ್ತಿವೆ. ಬೂ ತಾಯಿ ಮೀನುಗಳ ಸೀಸನ್ ಶುರುವಾಗಿದ್ದು 50 ರೂ.ಗೆ ದೊರೆಯುತ್ತಿವೆ. ಉಳಿದ ಮೀನುಗಳನ್ನು ಕೊಂಡುಕೊಳ್ಳದಿದುವುದೇ ಉತ್ತಮ.

English summary
Prices of most of the vegetables remained stable, except for a slight difference compare to last week in Mangaluru market. Demand creates for fish in market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X