ಸೌಜನ್ಯ ಕೊಲೆ: ವೀರೇಂದ್ರ ಹೆಗ್ಗಡೆ ಸಂಬಂಧಿಕರ ಕೈವಾಡ, ಆರೋಪ

By: ಮಂಗಳೂರು ಪ್ರತಿನಿಧಿ
Subscribe to Oneindia Kannada
ಮಂಗಳೂರು, ಫೆಬ್ರವರಿ. 14 : ಮಂಗಳೂರು, ಫೆಬ್ರವರಿ. 14 : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಗ್ಗಡೆ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ್ದರೂ ಸೌಜನ್ಯಳ ಹೆತ್ತವರು ಮಾತ್ರ ಮತ್ತೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಮೇಲೆ ಆರೋಪ ಮಾಡಿದ್ದಾರೆ.

ಮಂಗಳವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ತಂದೆ ಚಂದಪ್ಪ ಗೌಡ, 'ಕಾಲೇಜು ಬಿಟ್ಟು ಸೌಜನ್ಯಾ ಮನೆಗೆ ಬರುವುದನ್ನ ಜನರು ನೋಡಿದ್ದಾರೆ.[ಸೌಜನ್ಯ ಪ್ರಕರಣ: ಹೆಚ್ಚಿನ ತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ]

Veerendra Heggade's relative involved in Soujnaya murder case Soujnaya parents alleged

ಆದರೆ, ನಂತರ ನಮ್ಮ ಮಗಳು ಶವದ ರೂಪದಲ್ಲಿ ಪತ್ತೆಯಾಗಿದ್ದಾಳೆ. ಇದು ಅಸಹಜ ಸಾವಲ್ಲ. ಇದು ಕೊಲೆ. ಈ ಕೊಲೆಯ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಸಂಬಂಧಿಕರ ಕೈವಾಡ ಇದೆ' ಎಂದು ಸೌಜನ್ಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಧರ್ಮಸ್ಥಳ ಒಂದು ಗಣ ರಾಜ್ಯದಂತಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಹೋದರ ಹರ್ಷೇಂದ್ರ ಕುಮಾರ್ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಸೌಜನ್ಯಾ ಕಾಣೆಯಾದ ಕುರಿತು ನಾವು ದೂರು ನೀಡಲು ಹೋದಾಗ ಪೊಲೀಸರು ತುಚ್ಛವಾಗಿ ಮಾತನಾಡಿದರು. ದೂರು ಸ್ವೀಕರಿಸಿ ಅಂದರೆ ಧರ್ಮಸ್ಥಳ ದನಿಗಳ ಒಪ್ಪಿಗೆ ಬೇಕೆಂದರು ಎಂದರು.[ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ: ಸಿಬಿಐ ಅಂತಿಮ ವರದಿ ಸಲ್ಲಿಕೆ]

ಸಂತೋಷ್ ಎಂಬ ಮಾನಸಿಕ ಅಸ್ವಸ್ಥನೊಬ್ಬನನ್ನ ಹಿಡಿದು ಆರೋಪಿಯೆಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಶಂಕಿತ ಆರೋಪಿಗಳೇ ಮಾನಸಿಕ ಅಸ್ವಸ್ಥನನ್ನು ಹಿಡಿದುಕೊಟ್ಟಿದ್ದು ಎಂದು ಆರೋಪಿಸಿದರು.

ಅಲ್ಲದೇ ಆಗಿನ ದ.ಕ.ಜಿಲ್ಲಾ ಎಸ್ ಪಿ ಅಭಿಷೇಕ್ ಗೋಯೆಲ್ ತನಿಖೆ ಹಾದಿ ತಪ್ಪಿಸಿದ್ದಾರೆ. ನಮ್ಮ ಮಗಳ ಮರಣೋತ್ತರ ಪರೀಕ್ಷೆಯನ್ನ ತರಾತುರಿಯಲ್ಲಿ ನಡೆಸಿದ್ಯಾಕೆ? ಇದೀಗ ಸಿಬಿಐ ಕೋರ್ಟ್ ಪ್ರಕರಣದ ಸಂಪೂರ್ಣ ಮರುತನಿಖೆ ನಡೆಸುವಂತೆ ಆದೇಶ ನೀಡಿದ್ದು ಸ್ವಾಗತಾರ್ಹ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Soujnaya's parents alleged that Dharmastala Darmadhikari Dr. D Veerendra Heggade's relative involved in her rape and murder, which happened 4 years back on press meet in Mangaluru on feb 14.
Please Wait while comments are loading...