ಪ್ರಕೃತಿಯ ವರದಾನ ವರಂಗ ಕೆರೆ ಬಸದಿಯ ನೋಡಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಚೀನಾದ ಯಾವುದೋ ಪ್ರವಾಸಿ ತಾಣದಂತೆ ಕಾಣುವ, ಆಕರ್ಷಕ ಕೆರೆ ಇರುವ, ಸುಂದರ ಜೈನ ಬಸದಿಗಳಿರುವ ವರಂಗ ಎಂಬ ಪುಟ್ಟ ಹಳ್ಳಿ ಅದ್ಭುತ ಪ್ರವಾಸಿ ಸ್ಥಳವಾಗಿ ಎಲ್ಲರನ್ನು ಆಕರ್ಷಿಸುತ್ತಿದೆ. ವರಂಗ ಎಲ್ಲಿದೆ? ಊರಿಗೆ ತಲುಪುವುದು ಹೇಗೆ? ಯಾತ್ರಾ ಸ್ಥಳದ ವಿಶೇಷತೆ ಏನು? ಎಂಬುದರ ಬಗ್ಗೆ ಮಾಹಿತಿ, ವಿವರಣೆ ಇಲ್ಲಿದೆ...

ಎಲ್ಲಿದೆ? : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ .

ಎಷ್ಟು ದೂರ?: ಮಂಗಳೂರಿನಿಂದ 76 ಕಿಮಿ, ಉಡುಪಿಯಿಂದ 39 ಕಿ.ಮೀ, ಕಾರ್ಕಳದಿಂದ 26 ಕಿ.ಮೀ, ಬೆಂಗಳೂರಿನಿಂದ ಸುಮಾರು 396 ಕಿ.ಮೀ.[ಸೋಮೇಶ್ವರ ಬೀಚ್ ನಲ್ಲಿ ಸೂರ್ಯಾಸ್ತದ ಸೊಬಗು ನೋಡಿ!]

ಪ್ರಯಾಣ ಹೇಗೆ?: ಮಂಗಳೂರಿನಿಂದ ಮೂಡಬಿದ್ರೆ, ಕಾರ್ಕಳದ ಮೂಲಕ ಹೋಗಬಹುದು. ಉಡುಪಿಯಿಂದ ಹಿರಿಯಡ್ಕ, ಪೆರ್ಡೂರು ಮೂಲಕ ಸಾಗಬಹುದು. ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿಮಿ ದೂರದಲ್ಲಿರುವ ಈ ಸುಂದರ ಕೆರೆಗೆ ಬರುವವರು ಕಾರ್ಕಳ ಅಥವಾ ಹೆಬ್ರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ವರಂಗಕ್ಕೆ ಬಸ್ಸಿನಲ್ಲಿ ತಲುಪಬಹುದು. ನೇರವಾಗಿ ಖಾಸಗಿ / ಸ್ವಂತ ವಾಹನದಲ್ಲೂ ಈ ತಾಣವನ್ನು ಸಂದರ್ಶಿಸಬಹುದು.[ಅರಶಿನಗುಂಡಿ ಜಲಪಾತಕ್ಕೆ ಚಾರಣ ಹೋಗೋಣ ಬನ್ನಿ]

Varanga popular pilgrim center in Karkala Udupi district

ವಿಶೇಷತೆ ಏನು?: ಒಮ್ಮೆಲೆ ನೋಡಿದರೆ ಚೀನಾದ ಯಾವುದೋ ಪ್ರವಾಸಿ ತಾಣದಂತೆ ಕಾಣುವ, ಆಕರ್ಷಕ ಕೆರೆ ಇರುವ, ಸುಂದರ ಜೈನ ಬಸದಿಗಳ ವರಂಗ ಎಂಬ ಪುಟ್ಟ ಹಳ್ಳಿ ಅದ್ಬುತ ಪ್ರವಾಸಿ ಸ್ಥಳ.[ಉಡುಪಿಯಲ್ಲೂ ನೀರಿಗೆ ಬರ, ಶ್ರೀ ಕೃಷ್ಣನಿಗೆ ಕೇಳುವುದೇ ಮೊರೆ?]

ಒಂದೆಡೆ ಮುಗಿಲಿಗೆ ಚಾಚಿದಂತ ಪಶ್ಚಿಮ ಘಟ್ಟದ ಹಸಿರು ಬೆಟ್ಟಗಳು. ಇನ್ನೊಂದೆಡೆ ಹಚ್ಚ ಹಸಿರಿನ ಗದ್ದೆ ತೋಟಗಳು. ಮಳೆ ಚಳಿ ಬೇಸಿಗೆ ಹೀಗೆ ವರ್ಷವಿಡಿ ನೀರಿರುವ 14 ಎಕರೆ ವಿಸ್ತಾರದ ಅಪೂರ್ವ ಬೃಹತ್ ಕೆರೆಯ ನಡುವೆ ಜೈನರ ಪವಿತ್ರ ಪದ್ಮಾವತಿ ದೇವಿಯ ಬಸದಿ.[ಕುಂದಾಪುರದಲ್ಲೂ ಆರಂಭವಾಯಿತು ಹೆಲಿ ಟೂರಿಸಂ!]

ತೊನೆದಾಡುವ ತಾವರೆ ಹೂವುಗಳ ಭಿನ್ನಾಣ, ಅವುಗಳನ್ನು ಸೀಳುತ್ತಾ ಸಾಗುವ ಪುಟ್ಟ ದೋಣಿಯ ತಲ್ಲಣ, ಅದರೊಳಗೆ ಕುಳಿತು ಅತ್ತಿತ್ತ ವಾಲುತ್ತ ಸಾಗುವ ಅನನ್ಯ ಅನುಭವ, ನಕ್ಷತ್ರಾಕಾರದ ಚತುರ್ಮುಖ ಬಸದಿಯಲ್ಲಿರುವ ಪದ್ಮಾವತಿ ಸನ್ನಿಧಿಯನ್ನು ತಲುಪಲು ದೋಣಿಯಲ್ಲದೆ ಬೇರೆ ಆಯ್ಕೆಗಳಿಲ್ಲ.

-
-
-
ಕಾರ್ಕಳದ ರಮ್ಯ ತಾಣ ವರಂಗದ ಕೆರೆ ಬಸದಿ

ಕಾರ್ಕಳದ ರಮ್ಯ ತಾಣ ವರಂಗದ ಕೆರೆ ಬಸದಿ

-
-

ಅರ್ಚಕರೇ ಅಂಬಿಗರು: ವಿಶೇಷವೆಂದರೆ, ಇಲ್ಲಿ ಅರ್ಚಕರೇ ಅಂಬಿಗರು. ಕೆರೆಯ ನಡುವೆ ಇರುವ ಬಸದಿಗೆ ಕರೆದೊಯ್ಯುವುದು ಮರಳಿ ತಂದು ಬಿಡುವುದು, ಬಸದಿಯಲ್ಲಿ ಪೂಜೆ ಮಾಡಿ ಪ್ರಸಾದ ನೀಡುವುದು ಇದೇ ಅರ್ಚಕರು.[ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]

ದಕ್ಷಿಣ ಭಾರತದಲ್ಲೇ ಅಪೂರ್ವವಾದ ಕೆರೆ ಬಸದಿಗೆ ಮದುವೆಗಾಗಿ ಹರಕೆ ಹೊತ್ತು ಬರುತ್ತಾರೆ. ವಿವಾಹವಾದ ಮೇಲೆ ಮತ್ತೆ ಹೊಸ ಜೋಡಿ ಮೊದಲ ಪೂಜೆ ಸಲ್ಲಿಸಲು ಆಗಮಿಸುತ್ತಾರೆ.

ಚರ್ಮ ರೋಗಗಳಿಗೆ ಹರಕೆ ಹೊತ್ತು ಸಮಸ್ಯೆ ಪರಿಹಾರವಾದಾಗ ದೇವರಿಗೆ ಬೆಳ್ತಿಗೆ ಅಕ್ಕಿ, ಹುರುಳಿ ಅರ್ಪಿಸುತ್ತಾರೆ. ಹರಕೆ ಬಂದ ಧಾನ್ಯವನ್ನೆಲ್ಲ ಕೆರೆಯ ಮೀನುಗಳಿಗೆ ಹಾಕಲಾಗುತ್ತದೆ. ಆಹಾರ ತಿನ್ನಲು ಬರುವ ಮೀನುಗಳ ಸಂಭ್ರಮ ನೋಡುವುದೇ ಚೆನ್ನ. ಜೈನ ಕ್ಷೇತ್ರವಾದರೂ ಇಲ್ಲಿಗೆ ಬರುವವರಲ್ಲಿ ಅನ್ಯ ಧರ್ಮೀಯರೇ ಹೆಚ್ಚು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Varanga a beautiful village in Karkala, Udupi district is main attraction for Jains. Neminatha Basadi, Chandranatha Basadi and Kere Basadi has become attraction of all community. Here is route map and other details about the pilgrim Centre.
Please Wait while comments are loading...