ನಾಗರಪಂಚಮಿ ರೇಟಲ್ಲೇ ಹೂವು-ಹಣ್ಣು, ಮಂಗಳೂರಲ್ಲಿ ಲಕ್ಷ್ಮೀ ಪೂಜೆ ಜೋರು

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 4: ನಗರದಾದ್ಯಂತ ದೇವಸ್ಥಾನ, ಮನೆ, ಸಂಘ- ಸಂಸ್ಥೆಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಸಂಭ್ರಮದೊಂದಿಗೆ ನಡೆಯಿತು.

ವರಮಹಾಲಕ್ಷ್ಮಿ ಹಬ್ಬ: ಹೂವಿನ ರೇಟು ಕೇಳಿ ಹೌಹಾರಬೇಡಿ!

ಮಂಗಳಾದೇವಿ ದೇವಸ್ಥಾನ, ಗಣಪತಿ ದೇವಸ್ಥಾನ, ಕೊಡಿಯಾಲ್ ಬೈಲ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಮಾರಿಯಮ್ಮ ದೇವಸ್ಥಾನ, ಮಂದಾರ ಶ್ರೀ ದುರ್ಗಾ ಪರಮೇಶ್ವರಿ, ವೆಂಕಟ್ರಮಣ ದೇವಸ್ಥಾನ ಸಹಿತ ವಿವಿಧ ದೇವಸ್ಥಾನ- ದೇವಿ ದೇವಸ್ಥಾನಗಳಲ್ಲಿರುವ ಮಹಾಲಕ್ಷ್ಮಿಗೆ ವಿಶೇಷ ಪೂಜೆ ನಡೆಯಿತು.

ವರಮಹಾಲಕ್ಷ್ಮಿ ಸಂಭ್ರಮ : ಬೆಂಗಳೂರು ಮಾರ್ಕೆಟಿನ ಪಿಚ್ಚರ್

Varamahalakshmi festival celebrates in Mangaluru city

ಹೂ, ಹಣ್ಣು ಬೆಲೆ ಬಹುತೇಕ ಸ್ಥಿರ: ಕಳೆದ ವಾರವಷ್ಟೇ ನಾಗರ ಪಂಚಮಿ ಹಿನ್ನೆಲೆಯಲ್ಲಿ ಮಲ್ಲಿಗೆ ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದ್ದರೆ, ಈ ಬಾರಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದ್ದು ಗ್ರಾಹಕರಿಗೆ ನಿಟ್ಟುಸಿರು ತಂದಿದೆ.

Varamahalakshmi festival celebrates in Mangaluru city

ಮಲ್ಲಿಗೆ ಚೆಂಡಿಗೆ 90- 100, ಭಟ್ಕಳ ಮಲ್ಲಿಗೆಗೆ 70 ರಿಂದ 80 ತನಕ ಇದೆ. ಕಳೆದ ವಾರ ಮಲ್ಲಿಗೆಗೆ 250 ತನಕವೂ ದರ ಏರಿಕೆಯಾಗಿತ್ತು. ಸೇವಂತಿಗೆ, ಮಲ್ಲಿಗೆ 150. ತುಳಸಿ 30 - 50, ಹಿಂಗಾರ 200 ವರೆಗೆ ಮಾರಾಟವಾಗುತ್ತಿದೆ. ಪೂಜೆಗೆ ಅತಿ ಅಗತ್ಯವಾದ ಹಣ್ಣುಗಳ ಬೆಲೆಯಲ್ಲಿಯೂ ಹೆಚ್ಚೇನೂ ಏರಿಕೆಯಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vara Mahalakshmi festival celebrates in Mangaluru on Friday. Rates of flowers and fruits are all same as they were increased for Nagarapanchami.
Please Wait while comments are loading...