ತನ್ನನ್ನು ಉಗ್ರ ಎಂದ ಬಿಜೆಪಿಯ ರವಿಕುಮಾರ್ ಮೇಲೆ ಖಾದರ್ ಕಿಡಿ

Posted By:
Subscribe to Oneindia Kannada

ಮಂಗಳೂರು, ಮಾರ್ಚ್ 12: ಸಚಿವರಾದ ರಮಾನಾಥ್ ರೈ ಹಾಗೂ ಖಾದರ್ ಭಯೋತ್ಪಾದಕರಿದ್ದಂತೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ವಿರುದ್ಧ ಆಹಾರ ಮತ್ತ ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ರವಿ ಕುಮಾರ್ ಮಾತಿಗೆ ನಾವು ದೊಡ್ಡ ಮಹತ್ವ ಕೊಡಲ್ಲ. ರವಿ ಕುಮಾರ್ ಬುದ್ಧಿಯ ಸ್ಥಿಮಿತ ಕಳೆದುಕೊಂಡ ಅವಿವೇಕಿಯಂತೆ ಮಾತನಾಡುತ್ತಿದ್ದಾರೆ. ಅವರ ವ್ಯಕ್ತಿತ್ವ ಹಾಗೆ ಇದ್ದಿರಬಹುದಾದ್ದರಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಢೋಂಗಿ, ಲೋಫರ್ ಹೇಳಿಕೆ ವಿವಾದ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಖಾದರ್

"ಈಗ ಮಾನಸಿಕ ರೋಗ ಬರುವ ಸೀಜನ್. ಆದ್ದರಿಂದ ರವಿ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು," ಎಂದು ಹೇಳಿದ ಅವರು, "ಅಧಿಕಾರಕ್ಕೆ ಏರಲು ಇವರು ಯಾವ ಕೆಳಮಟ್ಟಕ್ಕೂ ಹೋಗುತ್ತಾರೆ. ಪ್ರತ್ಯೇಕವಾದಿಗಳಾಗಿರುವ ಪಿಡಿಪಿ ‌ಜತೆ ಬಿಜೆಪಿಯವರು ಕಾಶ್ಮೀರದಲ್ಲಿ ಅಧಿಕಾರ ನಡೆಸುತ್ತಿದ್ದಾರೆ," ಎಂದು ಅವರು ಆರೋಪಿಸಿದರು.

   U T Khader predicts to win Gujarat elections in an exclusive interview with OneIndia
   UT Khader slam BJP leaders for his terrorist remark on him and Ramanath Rai

   ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   "ಪ್ರತ್ಯೇಕವಾದಿಗಳು, ಭಾರತವನ್ನು ವಿರೋಧಿವವರಿಗೆ ಇವರು ಬೆಂಬಲ ನೀಡುತ್ತಿದ್ದಾರೆ," ಎಂದು ದೂರಿದ ಅವರು, "ನ್ಯಾಗಲ್ಯಾಂಡ್, ತ್ರಿಪುರಾದಲ್ಲೂ ಪ್ರತ್ಯೇಕವಾದಿಗಳನ್ನು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿಗಳನ್ನು ನರಹಂತಕ ಎಂದು ಟೀಕಿಸಲು ಇವರಿಗೆ ಯಾವ ಯೋಗ್ಯತೆಯಿದೆ?" ಎಂದು ಪ್ರಶ್ನಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Food and civic supplies minister UT Khader slammed BJP leader Ravi Kumar for his terrorist remark on him and minister Ramanath Rai.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ