ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಖಾದರ್ ಪ್ರವೇಶಿಸಿದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮ ಕಲಶ ಆಗಲೇಬೇಕು'

|
Google Oneindia Kannada News

ಮಂಗಳೂರು, ಏಪ್ರಿಲ್ 05 : 'ಸಚಿವ ಯು.ಟಿ. ಖಾದರ್ ಎಂಬ ಕೊಳಕು ಮನುಷ್ಯ, ಗೋಮಾಂಸ ಭಕ್ಷಣೆ ಮಾಡುವಂತಹ ವ್ಯಕ್ತಿಯನ್ನು ಪವಿತ್ರ ದೇವಾಲಯಕ್ಕೆ ಕರೆಸಿ ಪ್ರಸಾದ ನೀಡುತ್ತಿರುವುದು ಎಷ್ಟು ಸರಿ?' ಎಂದು ಆರ್‌ಎಸ್‌ಎಸ್ ಮುಖಂದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಕಿಡಿಕಾರಿದ್ದಾರೆ.

ಬಂಟ್ವಾಳದ ಕೈರಂಗಳದಲ್ಲಿರುವ ಅಮೃತ ಧಾರಾ ಗೋಶಾಲೆಯಲ್ಲಿ ನಡೆದ ದನಗಳ್ಳತನವನ್ನು ಖಂಡಿಸಿ, ಗೋವು ಕಳ್ಳರನ್ನು ಬಂಧಿಸುವಂತೆ ಒತ್ತಾಯತಿಸಿ ಬುಧವಾರ ಕೈಗೊಳ್ಳಲಾಗಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಪಾಲ್ಗೊಂಡಿದ್ದರು.

 ಕುದ್ರೋಳಿ ದೇವಸ್ಥಾನಕ್ಕೆ ಪ್ರಭಾಕರ ಭಟ್ ಕಾಲಿಟ್ಟಿದ್ದೇ ಅಪಚಾರ: ಮಟ್ಟು ಕುದ್ರೋಳಿ ದೇವಸ್ಥಾನಕ್ಕೆ ಪ್ರಭಾಕರ ಭಟ್ ಕಾಲಿಟ್ಟಿದ್ದೇ ಅಪಚಾರ: ಮಟ್ಟು

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಚಿವ ಖಾದರ್ ವಿರುದ್ಧ ಹೇಳಿಕೆ ನೀಡಿದ್ದರು. 'ಖಾದರ್ ಪ್ರವೇಶಿಸಿದ ದೇವಾಲಯದಲ್ಲಿ ಇನ್ನೊಮ್ಮೆ ಬ್ರಹ್ಮ ಕಲಶಾಭಿಷೇಕ ನಡೆಸಬೇಕು' ಎಂದು ಹೇಳಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

UT Khadar entered temples should have another Brahmakalasa says Prabhakar Bhat

ಡಾ. ಪ್ರಭಾಕರ ಭಟ್ ಅವರು, 'ಗೋಭಕ್ಷಣೆ ಮಾಡುವ ಖಾದರ್‌ಗೆ ಇಲ್ಲಿದ್ದ ಭೂತ ನೇಮದ ಬೂಳ್ಯ ಕೊಡ್ತಾರೆ. ಮಂಡೆ ಶುದ್ಧವಿಲ್ಲದ ದೈವ ಕಟ್ಟುವ ವ್ಯಕ್ತಿ ಕೊಳಕು ಖಾದರ್‌ಗೆ ಪ್ರಸಾದ ಕೊಡ್ತಾರೆ. ಯಾವ ದೇವಸ್ಥಾನಕ್ಕೆ ಈ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ವಿಧಿವಿಧಾನ ನೆರವೇರಲೇ ಬೇಕು' ಎಂದು ಹೇಳಿಕೆ ನೀಡಿದ್ದರು.

'ನಾನು ಹಿಂದು'ವೆಂದರೆ ಕೋಮುವಾದವೇ? ಕಲ್ಲಡ್ಕ ಪ್ರಭಾಕರ್ ಭಟ್ ಸಂದರ್ಶನ'ನಾನು ಹಿಂದು'ವೆಂದರೆ ಕೋಮುವಾದವೇ? ಕಲ್ಲಡ್ಕ ಪ್ರಭಾಕರ್ ಭಟ್ ಸಂದರ್ಶನ

'ದೇವಸ್ಥಾನಕ್ಕೆ ರಸ್ತೆ ಮಾಡಿದ್ದಾರೆ ಎಂದು ಯು.ಟಿ.ಖಾದರ್ ಅವರನ್ನು ದೇಗುಲದೊಳಗೆ ಕರೆದೊಯ್ಯುತ್ತೀರಿ. ನಾಚಿಗೆಯಾಗುವುದಿಲ್ಲವೇ?. ಅವನೇನು ಅವನ ಅಪ್ಪನ ಹಣದಿಂದ ರಸ್ತೆ ಮಾಡಿಸಿಲ್ಲ. ಜನರ ತೆರಿಗೆಯ ಹಣದಿಂದ ರಸ್ತೆ ನಿರ್ಮಾಣ ಮಾಡಿಸಿದ್ದಾನೆ' ಎಂದು ಭಟ್ ಆಕ್ರೋಶ ವ್ಯಕ್ತಪಡಿಸಿದ್ದರು.

English summary
Rss leader Dr. Kalladka Prabhakar Bhat slams minister U. T.Khadar on cattle theft incident at Amrithadhara cow shelter in Kairangala. Khadar entered temples should have another Brahmakalasa he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X