ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸಾಯಿಖಾನೆ ವಿವಾದದ ಕುರಿತು ಪ್ರಧಾನಿಗೆ ಪತ್ರ ಬರೆಯಲಿರುವ ಖಾದರ್

|
Google Oneindia Kannada News

ಮಂಗಳೂರು, ಅಕ್ಟೋಬರ್. 16: ಮಂಗಳೂರಿನ ಕುದ್ರೋಳಿ ಕಸಾಯಿಖಾನೆ ಕುರಿತು ವಿವಾದ ಸೃಷ್ಟಿಯಾಗಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.

ಕುದ್ರೋಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ: ಇದು ಸಾಧ್ಯನಾ?ಕುದ್ರೋಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ: ಇದು ಸಾಧ್ಯನಾ?

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಚ್ಛತೆಯ ದೃಷ್ಠಿಯಿಂದ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿಖಾನೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಎದ್ದಿರುವ ವಿವಾದ, ವಿರೋಧ ಹೇಳಿಕೆಗಳು ಬೇಸರ ತಂದಿವೆ.

 ಕಸಾಯಿಖಾನೆಗೆ 15 ಕೋಟಿ ರೂ.ನೀಡಿದ ಖಾದರ್: ಸ್ಪಷ್ಟನೆ ಕೇಳಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಸಾಯಿಖಾನೆಗೆ 15 ಕೋಟಿ ರೂ.ನೀಡಿದ ಖಾದರ್: ಸ್ಪಷ್ಟನೆ ಕೇಳಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

ಈ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯುತ್ತೇನೆ. ನಗರದ ಅಭಿವೃದ್ಧಿ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸ್ಮಾರ್ಟ್ ಸಿಟಿ ಸಲಹಾ ಮಂಡಳಿ ಸಭೆಯಲ್ಲಿ ಪ್ರಸ್ತಾಪಪಡಿಸಿದ್ದೆ ಅಷ್ಟೇ.

UT Kahdar write a letter to Modi on Slaughter house issue

ಈ ಪ್ರಸ್ತಾವನೆ ಮಂಡಳಿಯ ಸಭೆಯಲ್ಲಿ ಅಂಗೀಕಾರಗೊಂಡು ಇದೀಗ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಅನುಮತಿಗೆ ರವಾನೆಯಾಗಿದೆ. ಆದರೆ ಈ ನಡುವೆ ಕಸಾಯಿಖಾನೆ ಅಭಿವೃದ್ಧಿ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅಸಂವಿಧಾನಿಕ ಭಾಷೆ ಬಳಸಿ ನಿಂದಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

 '15 ಕೋಟಿ ರೂ.ವೆಚ್ಚದಲ್ಲಿ ಕಸಾಯಿಖಾನೆ ರಚಿಸಲು ಮುಂದಾಗಿರುವುದು ದುರಂತ' '15 ಕೋಟಿ ರೂ.ವೆಚ್ಚದಲ್ಲಿ ಕಸಾಯಿಖಾನೆ ರಚಿಸಲು ಮುಂದಾಗಿರುವುದು ದುರಂತ'

ಈ ವಿಷಯದಲ್ಲಿ ಆರೋಪ ಪ್ರತ್ಯಾಪರೋಪಗಳ ಮೂಲಕ ಜನರ ಮಧ್ಯೆ ಗೊಂದಲ ಸೃಷ್ಟಿಸುವುದು ಬೇಡ. ಅದಕ್ಕಾಗಿ ತಾನು ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದು, ಅದರಲ್ಲಿ ವಿಚಾರವನ್ನು ಸಮಗ್ರವಾಗಿ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು. ಇದಕ್ಕೆ ಅನುಮತಿ ನೀಡುವ ಬಗ್ಗೆ ಕೇಂದ್ರ ಸರಕಾರವೇ ನಿರ್ಧರಿಸಲಿ.

ಇದೇ ವೇಳೆ ಗೋಶಾಲೆಗೂ ಅನುದಾನ ನೀಡುವ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಚಿವರಿಂದ ಬರುವ ಉತ್ತರ, ಪ್ರತಿಕ್ರಿಯೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

English summary
Speaking to media person in Mangaluru Dakshina Kannada district incharge minister UT Khadar said that he will write letter to PM Modi and cental Urban development Minister for seeking permission and clarity regarding Mangaluru slaughter house issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X